Featured News Posts

Recent News

ಸರಗಳ್ಳತನವನ್ನು ತಡೆಯಲು ಪೊಲೀಸ್ ಇಲಾಖೆ ವಿಫಲ ಅಮಾಯಕ ಯುವಕರು ಅಂದರ್ – ಸರಗಳ್ಳರು ಬಾಹರ್ ರಾಜಶೇಖರಯ್ಯಾ ಹಿರೇಮಠ

ಬೆಳಗಾವಿ:29 ನಗರದಲ್ಲಿ ಕಮಿಷನರೇಟ್ ಬಂದು ಸುಮಾರು ಏಳು ತಿಂಗಳು ಕಳೆದರೂ ನಗರ ವ್ಯಾಪ್ತಿಯಲ್ಲಿ ಹಾಡು ಹಗಲೇ ಸರಗಳ್ಳತನ ನಡೆದರೂ ಪೊಲೀಸ್ ಇಲಾಖೆ ಜಾಣಕುರುಡುತನ ಪ್ರದರ್ಶಿಸುತ್ತಿದೆ. ಇದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಆಯುಕ್ತ ಎಸ್.ರವಿ ಸರಗಳ್ಳತನ ಹೆಚ್ಚಾಗುತ್ತಿದ್ದಂತೆ ದೊಡ್ಡ ದೊಡ್ಡ ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ಈ ಹಿಂದೆ ನಗರ ವ್ಯಾಪ್ತಿಯಲ್ಲಿ ಗಲಾಟೆ ಮಾಡಿದವರನ್ನು ಮುಂಜಾಗೃತಾ ಕ್ರಮವಾಗಿ ಅವರನ್ನು ಸರಗಳ್ಳತನದ ಪ್ರಕರಣದಲ್ಲಿ ಜೈಲಿಗೆ ಅಟ್ಟುತ್ತಿದ್ದಾರೆ. ಇದರಿಂದ ಆರೋಪಿ ಪ್ರಕರಣದಿಂದ ಶಿಕ್ಷೆ ಅನುಭವಿಸಿ ಸಮಾಜದಲ್ಲಿ […]

Continue Reading →

ಹೋರಾಡಿ ಸೋತ ಆಫ್ರೀಕಾ

Continue Reading →

ವೀರಶೈವ ರಾಜ್ಯ ಮಟ್ಟದ ವಧು ವರರ ಸಮಾವೇಶ

ಬೆಳಗಾವಿ22 ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಏ. 5 ರಂದು ಬೆಳಗ್ಗೆ 10 ರಿಂದ ಸಂಜೆ 5 ವರೆಗೆ ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡದವರಿಗಾಗಿ ವಧು-ವವರ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 9986486013, 7829125763 ಇಲ್ಲಿಗೆ ಸಂಪರ್ಕಿಸಬಹುದು.

Continue Reading →

ದೇವರ ದಾಸಿಮಯ್ಯನ ಜಯಂತಿಗೆ ಹೆಚ್ಚಿನ ಅನುದಾನ ನೀಡುವಂತೆ ಉಮಾಶ್ರೀಗೆ ಮನವಿ

  ಬೆಳಗಾವಿ:22 ದೇವರ ದಾಸಿಮಯ್ಯನವರ ಜಯಂತಿ ಆಚರಣೆಗೆ ರಾಜ್ಯ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಿತ್ತು. ಈಗ ಮಾಡಿರುವ ಹಣ ಸಾಕಾಗುವುದಿಲ್ಲವೆಂದು ಕನ್ನಡ ಮತ್ತು ಸಂಸ್ಕøತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀಯವರಿಗೆ ಮನವಿ ಮಾಡಿಕೊಂಡಿದ್ದಾರೆ. ನೇಕಾರ ಸಮುದಾಯದವರು ಭಾನುವಾರ ಉಮಾಶ್ರೀ ಅವರೊಂದಿಗೆ ಮಾತನಾಡಿ ದೇವರ ದಾಸಿಮಯ್ಯ ವಿದ್ಯುತ್ ಮಗ್ಗಗಳ ಕೂಲಿ ನೇಕಾರ ಸಂಘದ ಸಂಚಾಲಕ ಭೋಜಪ್ಪ ಹಜೇರಿ, ಕಾಂಗ್ರೆಸ್ ಮುಖಂಡರು, ತಾಳೂಕರ ಚಿತ್ರಕಲಾ ಹಾಗೂ ಸಮಾಜ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣರಾಜೇಂದ್ರ ತಾಳೂಕರ, ನೇಕಾರ […]

Continue Reading →

ಎಲ್‍ಕೆ ಪಿಂಪ್ರೆ ನಿಧನ

ಬೆಳಗಾವಿ:22 ನಗರದ ಮಾರ್ಕೇಟ ಪೊಲೀಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಪೊಲೀಸ ಉಪನಿರೀಕ್ಷಕ ಎಲ್.ಕೆ. ಪಿಂಪ್ರೆ ಹೃದಯಾಘಾತದಿಂದ ಇತ್ತೀಚೆಗೆ ನಿಧನರಾಗಿದ್ದಾರೆ. ಕರ್ತವ್ಯದ ಮೇಲಿದ್ದಾಗಲೇ ಅಸ್ವಸ್ಥಗೊಂಡಿದ್ದರು. ಕೆಎಲ್‍ಇ ಆಸ್ಪತ್ರೆಗೆ ದಾಖಲಿಸಲಾಗಿತ್ತುಸಿ. ಚೇತರಿಸಿಕೊಳ್ಳದೆ ಮೃತಪಟ್ಟರು. ಪೊಲೀಸ ಇಲಾಖೆಯ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಮೃತ ಎಲ್.ಕೆ. ಪಿಂಪ್ರೆ 3 ಜನ ಹೆಣ್ಣು ಮಕ್ಕಳು, 1 ಗಂಡು ಮತ್ತು ಬಂಧುಬಳಗ ಅಗಲಿದ್ದಾರೆ.

Continue Reading →

ಆರ್‍ಟಿಓ ಇಲಾಖೆಗೆ ಆಟೋ ಮೀಟ್‍ರ ಅಳವಡಿಸುವ ಆಸಕ್ತಿಯಿಲ್ಲ.. ! ಡಿಸಿ ಆದೇಶ ನೀಡಿ ತಿಂಗಳು ಸಮೀಪಿಸಿದರೂ ಓಡದ ಆಟೋ ಮೀಟರ್ ರಾಜಶೇಖರಯ್ಯಾ ಹಿರೇಮಠ

ಬೆಳಗಾವಿ:22 ನಗರದ ವ್ಯಾಪ್ತಿಯಲ್ಲಿ ಸಂಚರಿಸುವ ಆಟೋಗಳಿಗೆ ಜಿಲ್ಲಾಧಿಕಾರಿಗಳು ಮೀಟರ್ ಅಳವಡಿಸುವಂತೆ ಆದೇಶ ನೀಡಿ ಒಂದು ತಿಂಗಳು ಕಳೆದರೂ ಪೂರ್ಣ ಪ್ರಮಾಣದಲ್ಲಿ ಎಲ್ಲ ಆಟೋಗಳಿಗೆ ಮೀಟರ್ ಅಳವಡಿಸಲು ಆರ್‍ಟಿಓ ಇಲಾಖೆಯ ನಿಧಾನಗತಿ ಕಾರ್ಯಚರಣೆಯಿಂದ ಪ್ರಯಾಣಿಕರ ಸುಲಿಗೆಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಪ್ರಾದೇಶಿಕ ಸಾರಿಗೆ ಆಯುಕ್ತ ವಿ.ಕೆ.ಹೇಮಾದ್ರಿ ಅವರಿಗೆ ಈ ಕುರಿತು ಮಾಹಿತಿ ಕೇಳಲು ಪತ್ರಿಕೆ ಹೊದ ಸಂದರ್ಭದಲ್ಲಿ ತಮಗೂ ಆಟೋ ಮೀಟರ್ ಅಳವಡಿಸುವ ಆದೇಶಕ್ಕೂ ಸಂಭಂದವಿಲ್ಲದಂತೆ ಉತ್ತರ ನೀಡುತ್ತಾರೆ. ಬಹುವರ್ಷಗಳ ನಗರದ ಸಾರ್ವಜನಿಕರ ಬೇಡಿಕೆಯಾಗಿದ್ದ ಆಟೋ ಮೀಟರ್ ಅಳವಡಿಕೆ […]

Continue Reading →

ಒಂದು ಮಗುವಿನ ತಾಯಿಗೆ ಮದುವೆ ಆಸೆ ನೀಡಿ ಕೈಕೊಟ್ಟ ಭೂಪ ನ್ಯಾಯಕ್ಕಾಗಿ ಪೊಲೀಸ್ ಮೆಟ್ಟಿಲೇರಿದ ನೊಂದ ಮಹಿಳೆ

ಬೆಳಗಾವಿ:22 ವಿವಾಹಿತ ಮಹಿಳೆಯನ್ನು ಮದುವೆಯಾವುದಾಗಿ ನಂಬಿಸಿ ನಂತರ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ ಎಂದು ಆರೋಪಿಸಿ ರೇಖಾ ಎನ್ನುವ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ರವಿವಾರದಂದು ನಡೆದಿದೆ. ಕಿತ್ತೂರಿನ ಈರಣ್ಣÀ (29) ಎಂಬ ಯುವಕ ಸುಮಾರು 1 ವರ್ಷ ಎರಡು ತಿಂಗಳುಗಳಿಂದ ತನ್ನನ್ನು ಮದುವೆಯಾಗುದಾಗಿ ನಂಬಿಸಿ ದೈಹೀಕವಾಗಿ ಬಳಸಿಕೊಂಡು ನಂತರ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ಅಲ್ಲದೇ ಮದುವೆ ಆಗಿರುವ ವಿಷಯವವು ಸುಮಾರು ಎರಡು ತಿಂಗಳುಗಳ ನಂತರ ತನಗೆ ಗೊತ್ತಾಗಿದೆ. ಈ ವಿಷಯವಾಗಿ ತಾನು ಅವರ ಮನೆಗೆ ತೆರಳಿ […]

Continue Reading →

ಇಂದಿನಿಂದ ಚಿಲ್ಲರೆ ಮದ್ಯ ಮಾರಟಗಾರರ ಬೇಡಿಕೆ ಇಡೇರಿಕೆಗೆ ಹೋರಾಟ : ಮೆಹರವಾಡೆ

ಬೆಳಗಾವಿ:22 ಚಿಲ್ಲರೆ ಮದ್ಯ ಮಾರಾಟಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದಿ.23 ರಿಂದ 31ರ ವರೆಗೆ ರಾಜ್ಯದ ಜಿಲ್ಲಾಮದ್ಯ ಮಾರಾಟಗಾರರ ಅಸೋಸಿಯೇಶನಗಳ ಒಕ್ಕೂಟ ಹೋರಾಟ ನಡೆಸಲಿವೆ ಎಂದು ಅಸೋಸಿಯೇಶನ್ ಕೋಶಾಧಿಕಾರಿ ಟಿ.ಎಮ್. ಮೆಹರವಾಡೆ ಇಂದಿಲ್ಲಿ ಹೇಳಿದರು. ಅವರು ಬಾನುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, 45 ವರ್ಷಗಳಿಂದ ಮದ್ಯದ ಮಾರಾಟ ನಿದಾನಗತಿಯಲ್ಲಿ ಸಾಗಿದ್ದರೂ ಇಂದಿನ ದಿನಮಾನಗಳಲ್ಲಿ ಸರಕಾರಕ್ಕೆ ಹೆಚ್ಚಿನ ಆದಾಯ ತರುವ ಉದ್ಯಮ ಎಂದರೆ ಅದು ಮದ್ಯದ್ದಾಗಿದೆ. ಆದರೆ ಮದ್ಯಮಾರಾಟಗಾರರ ತೊಂದರೆಯನ್ನು ಆಲಿಸಲು ಸರಕಾಕ್ಕೆ ಸಮಯವಿಲ್ಲ ಎಂದು ಆರೋಪಿಸಿದರು. […]

Continue Reading →

ತಂದೆ ಸಾವಿನ ನೊವಿನಿಂದ ಪುತ್ರಿ ಆತ್ಮಹತ್ಯೆ

ಬೆಳಗಾವಿ:22 ಅಪ್ಪನ ಸಾವಿನಿಂದ ಆಘಾತಕ್ಕೊಳಗಾದ ಪುತ್ರಿಯೊಬ್ಬಳು ಅದರಿಂದ ಚೇತರಿಸಿಕೊಳ್ಳಲಾಗದೆ ಬಾವಿ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಭಾನುವಾರ ನಗರದಲ್ಲಿ ನಡೆದಿದೆ. ಮೃತ ದುರ್ದೈವಿ ಯುವತಿಯನ್ನು ಕಾಂಚನಾ ದೇವಾಡಿಗ (23) ಎಂದು ಗುರುತಿಸಲಾಗಿದೆ. ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಈಕೆಯ ತಂದೆ ಎಲ್.ಕೆ. ಪಿಂಪ್ರೆಸಿ, ಕರ್ತವ್ಯದ ಮೇಲೆ ಇದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದರಿಂದ ಯುವತಿ ತೀವ್ರವಾಗಿ ನೊಂದುಕೊಂಡು ಶನಿವಾರ ಸಂಜೆಯಿಂದಲೇ ಮನೆಯಿಂದ ನಾಪತ್ತೆಯಾಗಿದ್ದಳು. ಕಾಂಚನಾಳಿಗಾಗಿ ಕುಟುಂಬದವರು ಎಲ್ಲ ಕಡೆಗೆ ಹುಡುಕಾಟ ಮಾಡಿದ್ದರು. ಆದರೆ ಪತ್ತೆಯಾಗಿರಲಿಲ್ಲಸಿ. […]

Continue Reading →

ಕೈಗಾರಿಕೆ ಉದ್ಯಮಿಗಳಿಂದ ಪಾಲಿಕೆಗೆ ಬರಬೇಕಾದ ತೆರಿಗೆ 31 ಕೊನೆಯ ದಿನ ಇದೇ 25ಕ್ಕೆ ಕೈಗಾರಿಕೆ ಉದ್ಯಮಿಗಳ ಸಭೆ : ಸಚಿವ ಜಾರಕಿಹೊಳಿ

  ಬೆಳಗಾವಿ:20 ಕೈಗಾರಿಕೆ ಉದ್ಯಮಿಗಳಿಂದ ಬರಬೇಕಾದ ಆಸ್ತಿ ಮತ್ತು ನೀರಿನ ತೆರಿಗೆಯನ್ನು ಮಾ.31 ರೊಳಗೆ ತುಂಬಿಸಿಕೊಳ್ಳಿ ಎಂದು ಮಹಾನಗರ ಪಾಲಿಕೆ ಆಯುಕ್ತ ರವಿಕುಮಾರ್‍ಗೆ ಸಚಿವ ಸತೀಶ್ ಜಾರಕಿಹೊಳಿ ಸೂಚಿಸಿದರು. ಶುಕ್ರವಾರ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಉದ್ಯಮಿಗಳು ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ನೇತೃತ್ವ ವಹಿಸಿ ಮಾತನಾಡಿದರು. ಕೈಗಾರಿಕೆ ಉದ್ಯಮಿಗಳು ತೆರಿಗೆ ತುಂಬುವುದಕ್ಕೆ ಆಗುವುದಿಲ್ಲವೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅದೇ ಹೈಕೋರ್ಟ್ ಖಡ್ಡಾಯವಾಗಿ ಮಾ.31ರೊಳಗೆ ತೆರಿಗೆ ತುಂಬೇಕು ಎಂದು ಸೂಚಿಸಿದೆ. ಆ ನಿಟ್ಟಿನಲ್ಲಿ ಎಲ್ಲ ಉದ್ಯಮಿಗಳಿಂದ ಲಿಖಿತವಾಗಿ ಬರೆಸಿಕೊಂಡು ತೆರಿಗೆ […]

Continue Reading →