ಕ್ಯಾಲಿಫೋರ್ನಿಯಾದ ಕಾನೂನು ಕಚೇರಿಯಲ್ಲಿ ಗುಂಡಿನ ದಾಳಿ

0
19
loading...

ಲಾಂಗ್ ಬೀಚ್(ಅಮೆರಿಕ): ಹೊಸ ವರ್ಷಾಂತ್ಯದಲ್ಲಿ ಅಮೆರಿಕದ ವಿವಿಧೆಡೆ ಗುಂಡಿನ ದಾಳಿ ಪ್ರಕರಣಗಳು ತೀವ್ರವಾಗುತ್ತಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ಕಾನೂನು ಕಚೇರಿಯಲ್ಲಿ ನಡೆದ ಶೂಟಿಂಗ್‍ನಲ್ಲಿ ಬಂದೂಕುಧಾರಿ ಸೇರಿ ಇಬ್ಬರು ಮೃತಪಟ್ಟು ಕೆಲವರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ಉದ್ಯೋಗ ಸ್ಥಳದಲ್ಲಿ ನಡೆದ ಹಿಂಸಾಚಾರ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆ ಬಗ್ಗೆ ತನಿಖೆ ಲಾಂಗ್ ಬೀಚ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಎರಡು ಅಂತಸ್ತುಗಳ ಕಟ್ಟಡದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬನನ್ನು ಗನ್‍ಮ್ಯಾನ್ ಕೊಂದು ಹಾಕಿದ. ನಂತರ ಆ ಬಂದೂಕುದಾರಿಯೂ ಗುಂಡಿಗೆ ಬಲಿಯಾದ. ಹಂತಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಅಥವಾ ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ಇದು ಉದ್ಯೋಗ ಸ್ಥಳದಲ್ಲಿ ನಡೆದ ಹಿಂಸಾಚಾರ ಮತ್ತು ಹತ್ಯೆ ಪ್ರಕರಣವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಲಾಂಗ್ ಬೀಚ್ ಮೇಯರ್ ರಾಬರ್ಟ್ ಗಾರ್ಸಿಯಾ ತಿಳಿಸಿದ್ದಾರೆ.

loading...