ಅಮೆರಿಕ – ಹೆಪ್ಪುಗಟ್ಟಿದ ಹಿಮ, ಸಂಚರಿಸದ ವಿಮಾನಗಳು

0
22
loading...

ವಾಷಿಂಗ್ಟನ್‌:  ಅಮೆರಿಕವನ್ನು ಹೆಪ್ಪುಗಟ್ಟಿಸಿರುವ ಹಿಮಪ್ರವಾಹದ ತೀವ್ರತೆ ಇನ್ನಷ್ಟು ಹೆಚ್ಚಿದ್ದು, ಇಲ್ಲಿನ ಜಾನ್‌ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6 ಸಾವಿರ ವಿಮಾನಗಳ ಸಂಚಾರ ರದ್ದಾಗಿದೆ. ಗುರುವಾರ ಸ್ಥಗಿತಗೊಂಡಿದ್ದ ವೈಮಾನಿಕ ಸೇವೆ ಶುಕ್ರವಾರ ಬೆಳಗ್ಗೆ ಪುನಾರಂಭಗೊಂಡಿತ್ತು.
ಆದರೆ, ಭಾನುವಾರ ಮತ್ತೆ ಹಿಮ ವರ್ಷ ಹೆಚ್ಚಿದ ಕಾರಣ, ವಿಮಾನಗಳ ಸಂಚಾರ ರದ್ದು ಮಾಡಲಾಯಿತು. ಇದರಿಂದಾಗಿ, ಸಾವಿರಾರು ಪ್ರಯಾಣಿಕರು ಅತಂತ್ರರಾಗಿದ್ದಾರೆ.
ಎಲ್ಲರೂ ವಿಮಾನ ನಿಲ್ದಾಣದಲ್ಲೇ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಕುವೈತ್, ಚೀನಾ ಸೇರಿದಂತೆ ಹಲವು ವಿಮಾನಗಳ ಸಂಚಾರದ ಮೇಲೂ ಇದರ ಪ್ರಭಾವ ಕಂಡುಬಂತು.

loading...