ಎಚ್1 ಬಿ ವೀಸಾದಾರರಿಗೆ ಡೊನಾಲ್ಡ್ ಟ್ರಂಪ್ ಸರ್ಕಾರದಿಂದ ಪರಿಹಾರ

0
20
loading...

ವಾಷಿಂಗ್ಟನ್ – ಅಮೆರಿಕದಿಂದ ಪರೋಕ್ಷವಾಗಿ ಗಡಿಪಾರಿನ ಆತಂಕ ಎದುರಿಸುತ್ತಿದ್ದ ಅನಿವಾಸಿ ಭಾರತೀಯರಿಗೆ ಟ್ರಂಪ್ ಸರ್ಕಾರ ಬಹುದೊಡ್ಡ ರಿಲೀಫ್ ನೀಡಿದೆ. ಎಚ್1 ಬಿ ವೀಸಾದಾರರ ಗಡಿಪಾರು ಪ್ರಸ್ತಾಪ ಇಲ್ಲ ಎಂದು ಹೇಳಿದೆ.
ಈ ಹಿಂದೆ ಎಚ್ 1 ಬಿ ವೀಸಾ ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದಿದ್ದ ಅಮೆರಿಕದಲ್ಲಿರುವ ಕೋಟ್ಯಂತರ ವಿದೇಶಿ ಉದ್ಯೋಗಸ್ಥರಿಗೆ ಶಾಕ್ ನೀಡಿದ್ದ ಟ್ರಂಪ್ ಸರ್ಕಾರ ಇದೀಗ ತನ್ನ ನಿಯಮವನ್ನು ಸಡಿಲಗೊಳಿಸಿದೆ.
ಎಚ್1 ಬಿ ವೀಸಾದಾರರ ಗಡಿಪಾರು ಪ್ರಸ್ತಾಪ ಇಲ್ಲ ಎಂದು ಹೇಳಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಟ್ರಂಪ್ ಸರ್ಕಾರ, ವೀಸಾ ಅವಧಿ ವಿಸ್ತರಣೆಗೆ ವೀಸಾದರರು ಮನವಿ ಮಾಡಿಕೊಳ್ಳಬಹುದು ಎಂದು ಅಮೆರಿಕ ತಿಳಿಸಿದೆ.

loading...