ಅಂತಾರಾಷ್ಟ್ರೀಯ ಯುವ ಕರಾಟೆ ಪಟು ಯಲಬುರ್ಗಾದ ಯುವ ಪ್ರತಿಭೆ ಹನುಮಂತಪ್ಪ ಬಂಗಾಳಿ

0
33

*ವ್ಹಿ.ಎಸ್.ಶಿವಪ್ಪಯ್ಯನಮಠ*

ಕನ್ನಡಮ್ಮ ಸುದ್ದಿ- ಯಲಬುರ್ಗಾ: ಕರಾಟೆ ಎಂದಾಕ್ಷಣ ಇದು ಕೇವಲ ಹೊಡೆದಾಟದ ಕಲೆ ಅಂತಾ ಭಾವಿಸಿಕೊಳ್ಳುವುದು ಉಂಟು.ಆದರೆ ಈ ಕರಾಟೆ ಕಲೆ ಆತ್ಮರಕ್ಷಣೆಯ ಚಾಣಕ್ಷತನದ ಸಾಹಸಮಯದ ಕಲೆ.ಈ ಕಲೆಯಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಮನುಷ್ಯನಿಗೆ ಚೈತನ್ಯ ಶಕ್ತಿಯು ಬರುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಕರಾಟೆ ರಂಗದಲ್ಲಿ ತನ್ನದೇ ಚಾಪು ಮೂಡಿಸಿ ಅಂತಾರಾಷ್ಟ್ರೀಯ ಮಟ್ಡದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಗ್ರಾಮೀಣ ಯುವ ಕರಾಟೆ ಪಟು ಹನಮಂತಪ್ಪ ಬಂಗಾಳಿ ಕೂಡಾ ಒಬ್ಬರು.
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎನ್ನುವಂತೆ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಈ ಕರಾಟೆ ಕ್ಷೇತ್ರದಲ್ಲಿ ಆಸಕ್ತಿ ವಹಿಸಿ ಹತ್ತಿರದ ಕೂಕನೂರಿನ ಮೈಕಲ್ ಭಂಡಾರಿ,ಕೊಪ್ಪಳದ ಎಮ್.ಡಿ.ಮುಜೀಫ್‍ಖಾನ್ ಹತ್ತಿರ ಸುಮಾರು ಒಂದು ವರ್ಷದಲ್ಲಿ ಕರಾಟೆ ತರಬೇತಿ ಪಡೆದ ಬಂಗಾಳಿ,ನಂತರ ಆರ್ಥಿಕ ಮುಗ್ಗಟ್ಟಿನಿಂದ ಕರಾಟೆ ತರಬೇತಿಗೆ ಹೋಗದೆ,ತಮ್ಮ ಸ್ವಇಚ್ಚೆಯಿಂದ ಯಾರ ಸಹಾಯ ಸಹಕಾರ ಪಡೆಯದೆ ಮನೆಯಲ್ಲಿಯೇ ಸಿಡಿ ಪ್ಲೇಯರ್ ಮೂಲಕ ಕರಾಟೆ ನೋಡಿ ಮತ್ತು ಕೆಲ ಶಿಕ್ಷಕರಿಂದ ಕರಾಟೆ ಕಲಿತ್ತಿದ್ದು ಒಂದು ವಿಶೇಷ ಎನ್ನಬಹುದು.

ಬಡ ಕುಟುಂಬದಲ್ಲಿ ಜನಿಸಿದ ಹನುಮಂತಪ್ಪ ಬಂಗಾಳಿ,ಪ್ರಾಥಮಿಕ ಹತದಿಂದ ಪದವಿ ಶಿಕ್ಷಣವನ್ನು ಯಲಬುರ್ಗಾದಲ್ಲಿಯೇ ಮುಗಿಸಿದ್ದಾರೆ.ಸದ್ಯ ಕೊಪ್ಪಳದ ಕಾನೂನು ಮಹಾ ವಿಧ್ಯಾಲಯದಲ್ಲಿ ಕಾನೂನು ಪದವಿ ಪಡೆಯುತ್ತಿದ್ದಾನೆ.ಕೂಕನೂರಿನಲ್ಲಿ ಕರಾಟೆಯನ್ನು ಒಂದು ವರ್ಷದಲ್ಲಿ ಕಲಿತು,ತಕ್ಕ ಮಟ್ಟಿಗೆ ಕರಾಟೆ ಮೈಗೂಡಿಸಿಕೊಂಡು ಏನಾದರೂ ಸಾಧನೆ ಮಾಡಬೇಕೆಂಬ ಗುರಿ ಹೊಂದಿದ್ದರು.2014ರಲ್ಲಿ ಕರಾಟೆ ಶಿಕ್ಷಕ ಮಹಾಂತೇಶರಿಂದ ಬ್ರೌನ್ ಬೆಲ್ಟ್ ವರೆಗೂ ತರಬೇತಿ ಪಡೆದುಕೊಂಡರು,ನಂತರ ತರಬೇತಿದಾರರ ಕೊರತೆಯಿಂದ ಕೈ ಬಿಡುವ ಪ್ರಸಂಗ ಹನುಮಂತಪ್ಪರಿಗೆ ಎದುರಾಗಿತ್ತು.ಇದರಿಂದ ವಿಚಲಿತರಾಗದೆ.ಸಿಡಿ ಪ್ಲೇಯರ್ ಮೂಲಕ ಕರಾಟೆ ವಿಡಿಯೋಗಳನ್ನು ನೀಡಿ ಸ್ವತ: ಕೆಲ ಪಟುಗಳನ್ನು ಕಲಿತರು.ನಂತರ ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನಿಡುವ ಶಿಕ್ಷಕರಾಗಬೇಕೆಂಬ ಮಹಾದಾಸೆಯಿಂದ ವಿಜಯಪುರ ಜಿಲ್ಲೆಯ ಬಸವನಬಾಗೆವಾಡಿಯಲ್ಲಿ ಕರಾಟೆ ಶಿಕ್ಷಕ ಗಂಗಾಧರ ರಾಠೋಡರಿಂದ ತರಬೇತಿ ಪಡೆದು,ಬ್ಲಾಕ ಡನ್ ಬೆಲ್ಟ್ ವರೆಗೆ ತರಬೇತಿ ಪೂರ್ಣಗೊಳಿಸಿದರು.ನಂತರ ಶಾಲಾ ಕಾಲೇಜು ವಿದ್ಯಾರ್ಥಿ/ನಿಯರಿಗೆ ಹನುಮಂತಪ್ಪ ಬಂಗಾಳಿ ಕರಾಟೆ ತರಬೇತಿ ನೀಡುವ ಮೂಲಕ ಅವರಲ್ಲಿ ಕೂಡಾ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.ತರಬೇತಿದಾರರಿಗೆ ಜಿಪಂ ನೀಡುವ ಅಲ್ಪ ಗೌರವ ಧನ ಶಾಲೆಗಳಿಗೆ ಓಡಾಡಲು ಸಾರಿಗೆ ವೆಚ್ಚಕ್ಕೆ ಸರಿ ಹೋಗುತ್ತದೆ.ಆದರೂ ಕರಾಟೆ ಹನುಮಂತಪ್ಪ ಮಾತ್ರ ಗೌರವ ಧನ ಲೆಕ್ಕಿಸದೇ ಹಲವು ಶಾಲೆಗಳಲ್ಲಿ ತನ್ನ ಕಾಯಕ ನಿಷ್ಠೆ ಮುಂದುವರಿಸಿದ್ದಾರೆ.
ಧಾರವಾಡದಲ್ಲಿ 2004ರಲ್ಲಿ ಜರಗಿದ 2ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ ಸಿಫ್‍ನಲ್ಲಿ ಭಾಗವಹಿಸಿ,ಅಲ್ಲಿ ಉತ್ತಮ ಪ್ರದರ್ಶನ ನೀಡಿ,ಪ್ರಶಸ್ತಿ ಪತ್ರಗಳನ್ನು ಬಾಚಿಕೊಂಡ ಬಂಗಾಳಿ,ನಂತರ 2005ರಲ್ಲಿ ಕೊಪ್ಪಳದಲ್ಲಿ ಜರಗಿದ ಬ್ರೇವ್ ಚಾಂಪಿಯನ್ ಸಿಫ್ ಪಸ್ಟ್ ನ್ಯಾಷನಲ್ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ,2007ರಲ್ಲಿ ಹಾವೇರಿಯಲ್ಲಿ ನಡೆದ ನ್ಯಾಷನಲ್ ಕರಾಟೆ ಸ್ಪರ್ಧೆಯಲ್ಲಿ ಭಗವಹಿಸಿ ಅಲ್ಲಿ ಸಹ ಅತ್ಯುತಮವಾಗಿ ತಮ್ಮ ಕರಾಟೆ ಕೌಶಲ್ಯವನ್ನು ಪ್ರದರ್ಶಿಸಿದ ಬಂಗಾಳಿ,ಅಲ್ಲಿ ಸಹ ಹಲವಾರು ಪ್ರಶಸ್ತಿ ಪದಕಗಳನ್ನು ಪಡೆದುಕೊಂಡು ತಮ್ಮ ಕಲಾ ಶಕ್ತಿಯನ್ನು ತೋರಿಸಿಕೊಟ್ಟರು.

ನಂತರ 2011 ರಲ್ಲಿ ಬೆಂಗಳೂರು ಮಹಾನಗರದಲ್ಲಿ ಜರಗಿದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಷಿಫ್‍ನಲ್ಲಿ ಹಾಗೂ 2011ರಲ್ಲಿ ಚಿಕ್ಕಮಂಗಳೂರು ಜಿಲ್ಲೆಯ ಮೂಡಬಿದರಿಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ಈ ಕರಾಟೆ ಕಲಿ ಅಲ್ಲಿ ಸ್ಪರ್ಧೆಯ ಎದುರಾಳಿಗಳನ್ನು ಎದುರಿಸಿ,ತಮ್ಮ ಕಲೆಯನ್ನು ಪ್ರದರ್ಶಿಸಿದ ಉತ್ತರ ಕರ್ನಾಟಕದ ಭರವಸೆಯ ಕರಾಟೆ ಪಟು ಹನಮಂತಪ್ಪ ಬಂಗಾಳಿ,ಉತ್ತಮ ಪ್ರದರ್ಶನ ನೀಡಿ ಅನೇಕ ಪ್ರಶಸ್ತಿ ಪತ್ರ ಸೇರಿದಂತೆ ಪದಕಗಳನ್ನು ಬಾಚಿಕೊಂಡರು.ಕರಾಟೆ ಕಲೆ ಒಂದೇ ಸಿಮಿತವಾಗದೆ ಹಲವಾರು ಕ್ರೀಡೆಯಲ್ಲಿ ತನ್ನದೆ ಆದಾ ಸಾಧನೆ ಮಾಡಿದ ಶ್ರೀಯುತ,ಕರ್ನಾಟಕ ಕ್ರೀಡೆ ಮತ್ತು ಆರೋಗ್ಯ ಸಂಸ್ಥೆಯಿಂದ 2010ರಲ್ಲಿ ಕೂಕನೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರು,ಅಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡರೆ,ಇದೇ ಸಂಸ್ಥೆ ವತಿಯಿಂದ ಕೂಕನೂರಿನಲ್ಲಿಯೇ 2011 ರಲ್ಲಿ ನಡೆದ ರಾಜ್ಯ ಮಟ್ಟದ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತೆ 6ನೇ sಸ್ಥಾನವನ್ನು ಪಡೆದುಕೊಂಡು ಈ ಕ್ರೀಡೆಯಲ್ಲಿ ಸಹ ತಮ್ಮದೇ ಆದಾ ಸಾಧನೆ ಮಾಡಿ ತೋರಿಸಿದ್ದಾರೆ. ಅಲ್ಲದೇ 100 ಮೀ ನಿಂದ 50 ಕಿ.ಮೀ.ಓಡುವ ಸಾಮರ್ಥ ಹೊಂದಿರುವ ಕರಾಟೆ ಯುವ ಪ್ರತಿಭೆ ಹನುಮಂತಪ್ಪ ಬಂಗಾಳಿ ಕಾನೂನು ಮಹಾವಿದ್ಯಾಲಯದಿಂದ ಹುಬ್ಬಳ್ಳಿ,ಪುತ್ತೂರು,ಧಾರವಾಡದಲ್ಲಿ ನಡೆದ 13 ಕಿ.ಮೀ.ಓಡ ಸ್ಪರ್ಧೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.ಅಲ್ಲದೇ ಪ್ರಸ್ತಕ ಸಾಲಿನಲ್ಲಿ ಆಂದ್ರ ಪ್ರದೇಶದ ವಿಶಾಖಪಟ್ಟಣಂ ರಾಜೀವ್ ಗಾಂಧಿ ಸ್ಪೋಟ್ರ್ಸ ಸ್ಟೇಡಿಯಂನಲ್ಲಿ ಕಳೆದ ಫೆ.1 ರಿಂದ 4 ರವರೆಗೆ ನಡೆದ 18 ರಾಷ್ಟ್ರಗಳ ಬ್ಲಾಕ್ ಬೆಲ್ಟ್ ಡನ್ ಕುಮೇಟು(ಎದುರಾಳಲಿ ಸ್ಪರ್ಧೆ)ಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವುದರ ಜೋತೆಗೆ ಚಿನ್ನದ ಪದಕ ಪಡೆಯುವ ಮೂಲಕ ರಾಷ್ಟ್ರ ಮಟ್ಟದ ಪ್ರತಿಭೆಯಾಗಿ ಯಲಬುರ್ಗಾದ ಹನಮಂತಪ್ಪ ಬಂಗಾಳಿ ಮಿಂಚುವ ಮೂಲಕ ದೇಶಕ್ಕೆ,ರಾಜ್ಯಕ್ಕೆ,ಅದರಲ್ಲಿ ಜಿಲ್ಲೆಯ ಮತ್ತು ಹಿಂದುಳಿದ ಯಲಬುರ್ಗಾ ತಾಲೂಕಿಗೆ ಹೆಸರು ತಂದಿದ್ದಾರೆ.
ಯುವ ಕರಾಟೆಪಟು ಹನುಮಂತಪ್ಪ ಬಂಗಾಳಿ, ಇಂದಿನ ಈ ನಾಗರಿಕ ಸಮಾಜದಲ್ಲಿ ಎಷ್ಟೋ ಜನರಿಗೆ ಅದರಲ್ಲಿ ಮಹಿಳೆಯರಿಗೆ ಈ ಕರಾಟೆ ಕಲೆ ಗೊತ್ತಿಲ್ಲ.ಅದ್ದರಿಂದ ಯುವಕ ಯುವತಿಯುರು ತಮ್ಮ ಆತ್ಮ ರಕ್ಷಣೆಗಾಗಿ ಈ ಕಲೆಯನ್ನು ಕಲೆಬೇಕೆಂಬುವದು ನನ್ನ ಆಸೆ ಎನ್ನುವ ಇವರು,ಯಲಬುರ್ಗಾ ಪಟ್ಟಣದಲ್ಲಿ ಯುವಕರಿಗಾಗಿ ಉಚಿತ ಕರಾಟೆ ಕಲೆಯನ್ನು ಕಲಿಸಿಕೊಟ್ಟಿದ್ದಾರೆ.ಅಲ್ಲದೇ ಪ್ರಾರಂಭದಲ್ಲಿ ಆರೋಗ್ಯದ ದೃಷ್ಠಿಯಿಂದ ಯೋಗ ಮತ್ತು ಕರಾಟೆ ಕಲಿಯಲಾರಂಬಿಸಿದೆ.ಬ್ಲಾಕ್ ಬೆಲ್ಟ್ ತರಬೇತಿ ಪಡೆದ ನಂತರ ಸಿನಿಮಾದಲ್ಲಿ ಅವಕಾಶ ದೊರೆಯುವ ಕನಸಿದೆ.ವಿದ್ಯಾರ್ಥಿಗಳಿಗೆ ಕರಾಟೆ ತರಬೇತಿ ನೀಡುತ್ತಿರುವುದು ನನಗೆ ಮನಸ್ಸಿಗೆ ನೆಮ್ಮದಿ ತಂದಿದೆ ಎನ್ನುವ ಇಂಥ ಪ್ರತಿಭಾವನೀತ ಯುವ ಕರಾಟೆ ಪಟು ಹನಮಂತಪ್ಪ ಬಂಗಾಳಿ ಅವನಿಗೆ ಸರಕಾರ,ಸಂಘ ಸಂಸ್ಥೆಗಳು ಗುರ್ತಿಸಿ ಆರ್ಥಿಕ ಸಹಾಯ,ಪ್ರೋತ್ಸಾಹ ನೀಡಿದ್ದಾಗ,ಇವನು ಇನ್ನು ಈ ಕರಾಟೆ ರಂಗದಲ್ಲಿ ಎತ್ತರ ಮಟ್ಟದಲ್ಲಿ ಮಿಂಚಲು ಸಾಧ್ಯ.

loading...