ಅಂಬೇಡ್ಕರ ಪರಿನಿರ್ವಾಣ ಪುಣ್ಯತಿಥಿ ಆಚರಣೆ

0
37

ಕುಷ್ಟಗಿ,9: ಪಟ್ಟಣದ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ಡಾ. ಅಂಬೇಡ್ಕರ ರವರ 59ನೇ ಮಹಾ ಪರಿನಿರ್ವಾಣ ಪುಣ್ಯ ತಿಥಿಯನ್ನು ಆಚರಣೆ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗಂಗಾಧರ ಕಾಳಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಅಂಬೇಡ್ಕರರವರು ಮಹಾನ್ ಜ್ಞಾನದಾಹಿಯಾಗಿದ್ದರು. ಯಾವುದೇ ವಿಷಯವನ್ನು ಅವರು ಬಿಡದೇ ಸಂಗ್ರಹ ಮಾಡುತ್ತ ದೇಶದ ಒಳಿತಿಗಾಗಿ, ದೀನ ದಲಿತರ ಉದ್ದಾರಕ್ಕಾಗಿ ಚಿಂತನೆ ಮಾಡುತ್ತಿದ್ದರು. ಅವರ ಕೊಡುಗೆ ಈ ಜಗತ್ತಿಗೇ ಮಾದರಿಯಾಗಿದ್ದಲ್ಲದೇ ಅವರ ತತ್ವಗಳು ಹಾಗೂ ಆಲೋಚನೆಗಳು ತುಂಬಾ ಮೆಚ್ಚುಗೆ ಪಡೆದು ದೇಶಾಧ್ಯಂತ ಹೆಸರು ವಾಸಿಯಾದರು. ಅವರಂತೆ ವಿದ್ಯಾಥಿಗಳಾದ ತಾಔಉ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಸದೃಢ ರಾಷ್ಟ್ರವನ್ನು ಕಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ನಂತರ ಮುಖ್ಯೋಪಾಧ್ಯಯರಾದ ಅರವಿಂದಕುಮಾರ ದೇಸಾಯಿ ಮಾತನಾಡಿ ಅಂಬೇಡ್ಕರರವರು ದೇಶದ ಮಹಾನ್ ಸಂವಿಧಾನವನ್ನು ರಚಿಸಿ ಇಡೀ ಪ್ರಪಂಚಕ್ಕೆ ಹೊಸ ನಾಂದಿ ಹಾಡಿದರು. ಭಾರತೀಯ ನಾಗರೀಕರಿಗೆ ಮೂಲಭೂತ ಹಕ್ಕುಗಳು ದೊರೆಯುವಂತೆ ಮಾಡಲು ಅನೇಕ ಶ್ರಮ ಹಾಗೂ ಹೋರಾಟವನ್ನು ಮಾಡಿ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕ ಬಿಜೆಪಿ ಯುವ ಘಟಕದ ಅಧ್ಯಕ್ಷ ಜಯತೀರ್ಥ ದೇಸಾಯಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಶರಣಪ್ಪ ಚೊಳಚಗುಡ್ಡ, ಡಿ.ಟಿ. ಗಡಾದ, ಮಹಾಂತೇಶ ಜಾಲಿಗಿಡದ, ಶ್ರೀಧರ ಕುಲಕರ್ಣಿ, ದ್ರಾಕ್ಷಾಯಣಿ ಮೇಟಿ, ನವೀನಕುಮಾರ ಎಬಿವಿಪಿ ವಿದ್ಯಾರ್ಥಿ ಘಟಕ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸೋಹಿಲ್ ದಳವಾಯಿ ನಿರ್ವಹಿಸಿದರು. ಇದೇ ವೇಳೆ ಸಹ ಶಿಕ್ಷಕರಿಂದ ಮುಖ್ಯೋಪಾಧ್ಯಯರಾಗಿ ಬಡ್ತಿ ಹೊಂದಿದ ಅರವಿಂದಕುಮಾರ ದೇಸಾಯಿ ಇವರಿಗೆ ಶಾಲಾ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.

loading...

LEAVE A REPLY

Please enter your comment!
Please enter your name here