ಅಕ್ಕತಂಗೇರಹಾಳದಲ್ಲಿ ಸಂಭ್ರಮದ ದುರ್ಗಾದೇವಿ ಜಾತ್ರೆ

0
22

ಅಂಕಲಗಿ. 25- ಅಕ್ಕತಂಗೇರಹಾಳದ ಸುಪ್ರಸಿಧ್ಧ ಶಕ್ತಿ ದೇವತೆ  ದುರ್ಗಾ ಮಾತೆಯ  ವಿಜಯ ದಶಮಿಯ ಜಾತ್ರೆಯ ನಿಮಿತ್ತ  ಬುಧವಾರ ಗುಡಿಯ ಆವರಣದಲ್ಲಿ  ಉತ್ಸಾಹದಿಂದ  ಸೇರಿದ ಅಸಂಖ್ಯಾತ  ಭಕ್ತಸಮೂಹ.

ದೇವಿಯ ಪಲ್ಲಕ್ಕಿಯ ಮುಂದೆ  ಸಂಕಲ್ಪದಿಂದ  ಆರಾಧಕನೊಬ್ಬ  ಹರಿತ ವಾದ ಖಡ್ಗದಿಂದ ರಭಸವಾಗಿ ತನ್ನ ಹೊಟ್ಟೆಗೆ ಹೊಡೆದುಕೊಳ್ಳುತ್ತಿರುವದು. ಇಚ್ಛಾನುಸಾರ ತನ್ನೆಲ್ಲ ಕಾರ್ಯಗಳು ಸಾಂಗವಾಗಿ ನೆರವೇರಲಿ ಎಂದು ಸಂಕಲ್ಪ ಮಾಡಿ ಹೀಗೆ  ಅಸಂಖ್ಯಾತ ಚಿಕ್ಕವರಿಂದ ಹಿಡಿದು ದೊಡ್ಡವರೆಲ್ಲರೂ  ಈ ರೀತಿಯ ದೇವಿಯ ಅಲಗ ಹಾಯ್ದು ಭಕ್ತಿ ಮೆರೆದರು.  ಇಲ್ಲಿ ದುರ್ಗಾ ದೇವಿಯ ಗುಡಿ ಸ್ಥಾಪನೆಯಾದಾಗಿನಿಂದಲೂ ಈ ಪರಂಪರೆ ಯು ಇಲ್ಲಿ ನಡೆಯುತ್ತಾ ಬಂದಿದೆ.  ಈ ಹಬ್ಬಕ್ಕೆ ಕರ್ನಾಟಕದ ಮತ್ತು ನೆರೆಯ ಮಹಾರಾಷಾ್ತ್ರ, ಗೋವಾ, ಮತ್ತು ಆಂದ್ರಾ ದಿಂದಲೂ  ಈ ಗ್ರಾಮಕ್ಕೆ ಬಂದ  ಭಕ್ತ ಜನ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳಲು ಸಾಲು ಸಾಲು ನಿಂತು  ಅಲಗ ಹಾಯ್ದು ಹರಕೆ ತೀರಿಸಿದರು.  ಜಾತ್ರೆಯ ಮುನ್ನಾ ದಿನವೇ ಈ ಗುಡಿಯಲ್ಲಿ ಜನರು ಜಮಾಯಿಸಿ ಮರು ದಿನ ಬೆಳಗಿನ ಜಾವ ಜರುಗಿದ ದುರ್ಗಾ ದೇವಿಯ ರೋಮಾಂಚ ನಗೊಳಿಸುವ ದೃಶ್ಯಗಳನ್ನು ಕಂಡು ಆನಂದಿ ಸಿದರು. ಬೆಳಗಿನ ಜಾವ ಗುಡಿಯಲ್ಲಿ ಆಕರ್ಷಕ ಡೊಳ್ಳು ವಾಧ್ಯ ಜರುಗಿತು. ಇದೇ ಸಂದರ್ಭದಲ್ಲಿ ದೇವರ ನುಡಿಗಳನ್ನು ಆಲಿಸಿದ ಭಕ್ತರು ಮಹಾಪ್ರಸಾದ ಸ್ವೀಕರಿಸಿ ಧನ್ಯರಾದರು.

 

loading...

LEAVE A REPLY

Please enter your comment!
Please enter your name here