ಅಘಾತಕರ ಸಂಗತಿ

0
21

ಈಗ ನಡೆಯುತ್ತಿರುವ  ಐಪಿಎಲ್ ಪಂದ್ಯಾವಳಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಲಾಗಿದೆ ಎಂಬ ಗುರುತರವಾದ ಆಪಾದನೆಯ ಮೇರೆಗೆ ದೆಹಲಿ ಪೋಲಿಸರು ರಾಜಸ್ಥಾನ ರಾಯಲ್ಸ ತಂಡದ ಆಟಗಾರರಾದ ಶ್ರೀಶಾಂತ್, ಅಂಕಿತ ಚವ್ಹಾಣ, ಅಜಿತ  ಚಾಂಡಿಲಾ ಅವರನ್ನು ಗುರುವಾರ ಬೆಳಗಿನ ಜಾವ  2-30 ರ ಸುಮಾರಿಗೆ ಬಂಧಿಸಿದ್ದಾರೆ. ಜೊತೆಗೆ ಬಿಸಿಸಿಐ ಈ ಮೂವರು ಆಟಗಾರರನ್ನು ಅಮಾನತು ಮಾಡಿದೆ. ದೆಹಲಿ ಪೋಲಿಸರು ಮೂವರು ಆಟಗಾರೆರ ಜೊತೆಗೆ ಏಳು ಜನ ಬುಕ್ಕಿಗಳನ್ನು ಬಂಧಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಈ ಫಿಕ್ಸಿಂಗ್ ಕಾರ್ಯಾಚರಣೆ ದುಬೈದಿಂದ ನಡೆದಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಅಂತರರಾಷ್ಟ್ತ್ರೀಯ ಕುಖ್ಯಾತಿ ಇರುವ ದಾವುದ್ ಇಬ್ರಾಹಿಂ ನಂಟು ಇದೆ ಎಂದು ಹೇಳಲಾಗಿದೆ.

ಈ ಫಿಕ್ಸಿಂಗ್ ವ್ಯವಹಾರದಲ್ಲಿ 40 ಸಾವಿರ ಕೋಟಿ ರೂಪಾಯಿಗಳನ್ನು ತೊಡಗಿಸಲಾಗಿದೆ ಎಂದು ಹೇಳಲಾಗಿದೆ. ಒಂದು ವೈಲ್ಡ ಬಾಲ್ ಹಾಕಿದರೆ 60 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಯವುದೇ ಒಬ್ಬ ಆಟಗಾರ ಒಂದು ಓವ್ಹರ್ದಲ್ಲಿ 20 ರನ್ ಗಳಿಸಿದರೆ ಬೌಲಿಂಗ್ ಮಾಡಿದ ಆಟಗಾರನಿಗೆ  60 ಲಕ್ಷ ರೂಪಾಯಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಕಳೆದ ದಿನಾಂಕ 14 ರಂದು ನಡೆದ ಪಂದ್ಯದಲ್ಲಿ ಶ್ರೀಶಾಂತ್ ವೈಲ್ಡ ಬಾಲ್ ಹಾಕಿದ್ದರೆಂದು ಹೇಳಲಾಗಿದೆ.

ಆಟಗಾರರಿಗೆ ಯಾವುದೇ ಹಣದ ಕೊರತೆ ಇರುವುದಿಲ್ಲ ಪಂದ್ಯಗಳಿಂದ ಅವರು ಮಾಡುವ ಉದ್ಯೌಗದಿಂದ ಜಾಹೀರಾತುಗಳಿಂದ ಅವರಿಗೆ ಅಪಾರ ಹಣ ಹರಿದು ಬರುತ್ತದೆ. ಹೀಗಿದ್ದರೂ ಈ ಮೂವರು ಆಟಗಾರರು ಹಣದ ಬೆನ್ನು ಬಿದ್ದು  ಫಿಕ್ಸಿಂಗ್ ಮಾಡಿದ್ದನ್ನು ನೋಡಿದರೆ  ಇವರಲ್ಲಿ ಹಣದ ದಾಹ ಯಾವ ರೀತಿಯಲ್ಲಿ ಇದೆ. ಎಂಬುದು ಗೊತ್ತಾಗಿ ನಾವು ಹುಬ್ಬೇರಿಸುವ ಪ್ರಸಂಗ ಉಂಟಾಗಿದೆ.

ಈಗಾಗಲೇ ಕೇಂದ್ರ ಕ್ರೀಡಾ ಸಚಿವ ಜಿತೇಂದ್ರಸಿಂಗ್ ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ  ಹೇಳಿಕೆ ನೀಡಿ  ಈ ಆಟಗಾರರ ಮೇಲೆ ಅತ್ಯಂತ ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾಜಸ್ಥಾನ ರಾಯಲ್ ತಂಡದ  ನಾಯಕ ರಾಹುಲ್ ದ್ರಾವಿಡ್ ಈಗ ಉಂಟಾದ ಬೆಳವಣಿಗೆಗಳ ಬಗ್ಗೆ ತುರ್ತು ಸಭೆ ಕರೆದು ಸಮಾಲೋಚನೆಗಳನ್ನು ನಡೆಸತೊಡಗಿದ್ದಾರೆ.

ಈ ಎಲ್ಲ ಬೆಳವಣಿಗೆಗಳು ಬಯಲಿಗೆ ಬಂದ ಬೆನ್ನ ಹಿಂದೆ ಈ ಫಿಕ್ಸಿಂಗ್ ಬಗ್ಗೆ ತನಿಖೆ ನಡೆಸುತ್ತಿದ್ದ ಅಧಿಕಾರಿ ಒಂದು ವಾರದ ಹಿಂದೆ ಅನುಮಾನಸ್ಪದ ರೀತಿಯಲ್ಲಿ ನಿಧನ ಹೊಂದಿರುವುದು ಬೆಳಕಿಗೆ ಬಂದಿದೆ  ಇದರಿಂದ ಈ ಜಾಲ ಎಷ್ಟೊಂದು ಆಘಾತಕರವಾದ ರೀತಿಯಲ್ಲಿ ಕಾರ್ಯ ಮಾಡುತ್ತಿದೆ ಎಂಬುದನ್ನು ನೋಡಿದರೆ ಉನ್ನತ ಆದರ್ಶದಿಂದ ನಡೆಸುತ್ತಿರುವ ಐಪಿಎಲ್ ಪಂದ್ಯಾವಳಿಗೆ ಯಾವ ರೀತಿಯ ದುರ್ಗತಿ ಬಂದಿದೆ. ಎಂಬುದು ಗೊತ್ತಾಗಿ ಕ್ರಿಕೇಟ ಪ್ರೀಯರು ಆಘಾತಗೊಳ್ಳುವ ಪರಿಸ್ಥಿತಿ ಈಗ ಉಂಟಾಗಿದೆ.

ದೆಹಲಿ ಪೋಲಿಸರು ಈ ಬಗ್ಗೆ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ತೀವ್ರ ಕ್ರಮ ತೆಗೆದುಕೊಳ್ಳುವ ಕಾರ್ಯವನ್ನು ಮಾಡಬೇಕು

ಈ ಎಲ್ಲ ಬೆಳವಣಿಗೆಗಳಿಂದ ಬೇಸರ ಗೊಂಡಿರುವ ರಾಜಸ್ಥಾನ ರಾಯಲ್ ತಂಡದ ಒಡತಿ ಶಿಲ್ಪಾಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇದರಿಂದ ಭಾರತೀಯ ಕ್ರಿಕೇಟ ಪ್ರಪಂಚಕ್ಕೆ ಕೆಟ್ಟ ಹೆಸರು ಬಂದಿದ್ದು, ತಪ್ಪಿತಸ್ಥರ ಮೇಲೆ ಉಗ್ರ ಕ್ರಮ ತೆಗೆದುಕೊಳ್ಳುವ ಮೂಲಕ ಈಗ ಉಂಟಾಗಿರುವ ಕಪ್ಪು ಚುಕ್ಕೆಯನ್ನು ಅಳಿಸಿ ಹಾಕುವ ಪ್ರಯತ್ನ ನಡೆಯಬೇಕಾಗಿದೆ.

loading...

LEAVE A REPLY

Please enter your comment!
Please enter your name here