ಅಜಿತ್‌ರ ಹತ್ಯೆ ಖಂಡಿಸಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮನವಿ

0
24

ಕನ್ನಡಮ್ಮ ಸುದ್ದಿ-ಶಿರಸಿ: ದಾಂಡೇಲಿಯ ಹಿರಿಯ ವಕೀಲ ಅಜಿತ್‌ ನಾಯಕ ಹತ್ಯೆ ಖಂಡಿಸುವ ಜೊತೆಗೆ ತಕ್ಷಣ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಶಿರಸಿ ವಕೀಲರ ಸಂಘದ ಸದಸ್ಯರು ಶನಿವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಮೌನ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಕೀಲರ ಸಂಘದ ಸಭಾಂಗಣದಿಂದ ಉಪವಿಭಾಗಾಧಿಕಾರಿಗಳ ಕಚೇರಿಯವರೆಗೆ ನೂರಾರು ವಕೀಲರು ಬೀದಿಗಿಳಿದು ಮೌನ ಮೆರವಣಿಗೆಯೊಂದಿಗೆ ತೆರಳಿ ಮನವಿ ಸಲ್ಲಿಸಿದರು. ಅಜಿತ ನಾಯಕ ಹತ್ಯೆಯಿಂದ ವಕೀಲರ ಸಮೂಹದಲ್ಲಿ ಆತಂಕ ಸೃಷ್ಟಿಯಾಗಿದ್ದು ರಾಜ್ಯಾದ್ಯಂತ ವಕೀಲರ ಮೇಲೆ ಹಲ್ಲೆ ಮತ್ತು ಹತ್ಯೆ ಪ್ರಕರಣಗಳು ಪುನರಾವರ್ತನೆ ಆಗುತ್ತಿವೆ. ಇಂಥಹ ಪ್ರಕರಣಗಳು ಪುನರಾವರ್ತನೆ ಆಗದಂತೆ ಸರ್ಕಾರವು ಹೆಚ್ಚಿನ ಮುತುವರ್ಜಿ ವಹಿಸಬೇಕು. ಅಜಿತ ನಾಯಕರ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಲಾಪ ಬಹಿಷ್ಕಾರ….
ಹಿರಿಯ ವಕೀಲ ಅಜಿತ ನಾಯಕರ ದುಷ್ಕರ್ಮಿಗಳ ಹತ್ಯೆಗೈದಿರುವ ಕೃತ್ಯವನ್ನು ಖಂಡಿಸಿ ವಕೀಲ ಸಂಘದ ಸದಸ್ಯರು ಶನಿವಾರದ ನ್ಯಾಯಾಲಯದ ಕಲಾಪ ಬಹಿಷ್ಕರಿಸಿದರು. ಈ ವೇಳೆ ವಕೀಲರ ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ, ವಕೀಲರಾದ ಎಸ್‌.ಎನ್‌.ನಾಯ್ಕ, ಆರ್‌.ಆರ್‌.ಹೆಗಡೆ, ಸದಾನಂದ ಭಟ್ಟ, ಸರಸ್ವತಿ ಹೆಗಡೆ, ಶ್ರೀಪಾದ ನಾಯ್ಕ, ರಾಜೇಶ ಶೆಟ್ಟಿ, ಎಂ.ಎನ್‌.ನಾಯ್ಕ, ಶಿವರಾಯ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...