ಅಟಲ್‌ ಚಿತಾಭಸ್ಮ ಕೃಷ್ಣೆಯಲ್ಲಿ ವಿಸರ್ಜನೆ

0
21

ಬೀಳಗಿ: ದೇಶಕಂಡ ಶ್ರೇಷ್ಠ ಹಾಗೂ ಅಪರೂಪದ ರಾಜಕಾರಣಿಗಳಲ್ಲೊಬ್ಬರಾದ ನಮ್ಮ ನಿಮ್ಮೆಲ್ಲರ ಮೆಚ್ಚಿನ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಯವರನ್ನು ಕಳೆದುಕೊಂಡದ್ದು ತುಂಬಾ ದುಖ:ದ ವಿಷಯವಾಗಿದ್ದು, ನಾವು ಇಂದು ಅವರಿಗೆ ಗೌರವಸೂಚಿಸುದರೊಂದಿಗೆ ಅವರು ಹಾಕಿಕೊಟ್ಟ ಮಾರ್ಗದರ್ಶದಲ್ಲಿ ನಡೆದು ಅವರು ಕಂಡಕನಸನ್ನು ನನಸುಮಾಡಬೇಕಾಗಿದೆ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.
ಅವರು ತಾಲೂಕಿನ ಗಲಗಲಿ ಗ್ರಾಮದ ರಂಗಮಂಟಪದಲ್ಲಿ ಮಾಜಿ ಪ್ರಧಾನಿ ದಿ,ಅಟಲ್‌ ಬಿಹಾರಿ ವಾಜಪೇಯಿಯವರ ಚಿತಾಭಸ್ಮದ ಕೃಷ್ಣಾನದಿಯಲ್ಲಿ ವಿಸರ್ಜನಾ ಕಾರ್ಯಕ್ಕೂ ಮುಂಚೆ ನಡೆದ ಸಂತಾಪ ಸೂಚಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಾಜಪೇಯಜಿಯಂಥ ಶ್ರೇಷ್ಠ ಹಿರಿಯರ ಮಾರ್ಗದರ್ಶದಲ್ಲಿ ದೇಶಸೇವೆ ಮಾಡಿದ ನಾವು ಧನ್ಯರು ಎಂದರು.

ಶಾಸಕರಾದ ಮುರಗೇಶ ನಿರಾಣಿ, ದೊಡ್ಡನಗೌಡ ಪಾಟೀಲ, ಸಿದ್ದು ಸವದಿ, ವಿ.ಪ.ಸದಸ್ಯರಾದ ಅರುಣ ಶಾಹಪೂರ, ಹಣಮಂತ ನಿರಾಣಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಪಿ ಎಚ್‌ ಪುಜಾರ್‌ ಭಾಜಪ ಮುಖಂಡರಾದ ಮೋಹನ ಜಾಧವ, ವಿಜುಗೌಡ ಪಾಟೀಲ, ಮಲ್ಲಪ್ಪ ಶಂಬೋಜಿ, ಸಂಗಣ್ಣ ಕಟಗೇರಿ, ಹೊಳಬಸು ಬಾಳಶೆಟ್ಟಿ, ಆನಂದ ಇಂಗಳಗಾವಿ, ಸದಾಶಿವ ಹಂಗರಗಿ, ರಾಮಣ್ಣ ಶೇಬಾನಿ, ಶ್ರೀಶೈಲ ಗೋಳಿಪಲ್ಲೆ, ಜಗದೀಶ ಶಿರಾಳಶೆಟ್ಟಿ, ಮಲ್ಲೇಶ ಅಂಗಡಿ, ಕೃಷ್ಣಾ ಓಂಕಾರ, ಬಸವರಾಜ ಗಾಣಿಗೇರ, ರೇವಣೆಪ್ಪ ತುಪ್ಪದ, ಶಿವಾಜಿ ಪಟ್ಟಣಶೆಟ್ಟಿ, ಸೇರಿದಂತೆ ಅವಳಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರು ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

loading...