ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಕ್ಕೆ ಹೃದಯಪೂರ್ವಕ ಸ್ವಾಗತ

0
20

ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಕ್ಕೆ ಹೃದಯಪೂರ್ವಕ ಸ್ವಾಗತ
ಕನ್ನಡಮ್ಮ ಸುದ್ದಿ-ಬೈಲಹೊಂಗಲ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ (ಅಸ್ಥಿ ಕಳಶ) ರಥವನ್ನು ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ, ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಪಟ್ಟಣದಲ್ಲಿ ಭರಮಾಡಿಕೊಂಡು, ಭಕ್ತಿಯಿಂದ ಪೂಜೆ ಸಲ್ಲಿಸಿದರು.
ವಾಜಪೇಯಿ ಅವರ ಅಸ್ಥಿ ಕಳಶ ರಥವನ್ನು ಪಟ್ಟಣದ ಚನ್ನಮ್ಮನ ಆಶ್ವಾರೂಢ ಮೂರ್ತಿಯಿಂದ ಇಂಚಲ ಕ್ರಾಸ್, ಬಸ್ ನಿಲ್ದಾಣ, ಎಸ್.ಆರ್.ಸರ್ಕಲ್ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಅಟಲ್ ಬಿಹಾರಿ ವಾಜಪೇಯಿ ಭಾವಚಿತ್ರಕ್ಕೆ ನಾಗರಿಕರು ಪಕ್ಷಾತೀತವಾಗಿ ಹಾಗೂ ಅಭಿಮಾನಿಗಳು, ವಿದ್ಯಾರ್ಥಿಗಳು ಭಕ್ತಿಯಿಂದ ನಮಸ್ಕರಿಸಿದ್ದು ವಿಶೇಷವಾಗಿತ್ತು. ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ನಿಸ್ವಾರ್ಥದಿಂದ ದೇಶದ ಪ್ರಗತಿಗೆ ಶ್ರಮಿಸಿದ ಧೀಮಂತ ನಾಯಕರು. ತಮಗೆ ವೈಯಕ್ತಿಕವಾಗಿ ಆಸ್ತಿ, ಸಂಪತ್ತು ಗಳಿಸಿದವರಲ್ಲ. ಭಾರತದ ಪ್ರಗತಿಗೆ ತಮ್ಮ ಪ್ರಾಣವನ್ನೆÃ ಮುಡಿಪಾಗಿಟ್ಟಿದ್ದರೆಂದು ಸ್ಮರಿಸಿದರು. ವಾಜಪೇಯಿ ಅವರು ಅಪರೂಪದ ವ್ಯಕ್ತಿತ್ವ ಹೊಂದಿದ್ದರು. ಅವರ ತತ್ವಾದರ್ಶಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ವಾಜಪೇಯಿ ಅವರ ಚಿತಾಭಸ್ಮ ವಿಸರ್ಜನೆ ಕಾರ್ಯಕ್ರಮವನ್ನು ದೇಶದ ೧೦೦ ಪ್ರಮುಖ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತಿದೆ ಎಂದರು.
ಈರಣ್ಣಾ ಕಡಾಡಿ, ಮುರಳೀಧರ ಮಾಳೋದೆ, ಗುರುಪಾದ ಕಳ್ಳಿ, ಶ್ರಿÃಶೈಲ ಯಡಳ್ಳಿ, ಮಡಿವಾಳಪ್ಪಾ ಹೋಟಿ, ಮುರಗೇಶ ಗುಂಡ್ಲೂರ, ಮಹೇಶ ಹರಕುಣಿ, ಗುರು ಮೆಟಗುಡ್ಡ, ಆನಂದ ಮೂಗಿ, ಸಂಜಯ ಗಿರೆಪ್ಪಗೌಡರ, ಆಸೀಫ್ ಗೋವೆ, ಬಸವರಾಜ ಶಿಂತ್ರಿ, ಐ.ಎಲ್.ಪಾಟೀಲ, ಬಿ.ಬಿ.ಸಂಗನಗೌಡರ, ಬಸವರಾಜ ನೇಸರಗಿ, ಉಮೇಶಗೌಡ ಪಾಟೀಲ ಹಾಗೂ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ವಾಜಪೇಯಿ ಅಭಿಮಾನಿಗಳು ಉಪಸ್ಥಿತರಿದ್ದರು. ಇದೇ ವೇಳೆ ಅಟಲ್ ಬಿಹಾರಿ ವಾಜಪೇಯಿ ಅಸ್ಥಿ ಕಳಶವನ್ನು ಘಟಪ್ರಭಾ ನದಿಯಲ್ಲಿ ಅಸ್ಥಿ ವಿಸರ್ಜನೆಗೆ ಕಳುಹಿಸಿ ಕೊಡಲಾಯಿತು.

loading...