ಅಡ್ಡಪಲ್ಲಕ್ಕಿ ಯಶಸ್ವಿ: ಶ್ವಾನ ಪಲ್ಲಕ್ಕಿ ಯಾತ್ರೆ

0
21

ಬೆಂಗಳೂರು, ಅ.13- ತೀವ್ರ

ವಿವಾದ ಸೃಷ್ಠಿಸಿದ್ದ ರಂಭಾಪುರಿ ಶ್ರೀಗಳ

ಅಡ್ಡ ಪಲ್ಲಕಿ ಉತ್ಸವ ಪೊಲೀಸರ

ಬಿಗಿ ಭದ್ರತೆಯಲ್ಲಿ ನಡೆಯಿತು. ಇದಕ್ಕೆ

ಪ್ರತಿಯಾಗಿ ಪ್ರಗತಿಪರರು ಅಣಕು

ಶವಯಾತ್ರೆ ನಡೆಸಿ ಪ್ರತಿಭಟಿಸಿದರು.

ಗುಲ್ಬರ್ಗ ಜಿಲ್ಲೆಯ ಜೇವರ್ಗಿಯ

ಪಟ್ಟಣದಲ್ಲಿ ನಡೆದ ಅಡ್ಡ ಪಲ್ಲಕ್ಕಿ ಉತ್ಸವಕ್ಕೆ

ಪೊಲೀಸರು ಸರ್ಪಗಾವಲು ಹಾಕಿದ್ದರು.

ಮಾನವ ಹಕ್ಕುಗಳ ಉಲ್ಲಂಘನೆ ಎಂಬ

ಆಕ್ಷೇಪದಿಂದ ಸುಮಾರು 40ಕ್ಕೂ ಹೆಚ್ಚು

ಮಠಾಧೀಶರು ಅಡ್ಡಪಲ್ಲಕ್ಕಿ ಉತ್ಸವವನ್ನು

ವಿರೋಧಿಸಿದ್ದರು.

ಬೆಳಗ್ಗೆ ಪಂಚಪೀಠಗಳ

ವಿರುದ್ಧ ಅಣಕು ಶವಯಾತ್ರೆಯನ್ನು

ನಡೆಸಲಾಯಿತು. ಪಂಚಪೀಠಗಳ

ಪ್ರತಿಕೃತಿಗಳನ್ನು ದಹಿಸಿ ಘೋಷಣೆ

ಕೂಗಲಾಯಿತು.

ಇದ್ಯಾವುದಕ್ಕೂ ಜಗ್ಗದ

ರಂಭಾಪುರಿ ಶ್ರೀಗಳು ಅಡ್ಡ ಪಲ್ಲಕ್ಕಿ

ಉತ್ಸವ ನಡೆಸಿದರು.

ಮಹಾಲಕ್ಷ್ಮೀ ದೇವಸ್ಥಾನದಿಂದ

ಸಮಾವೇಶ ನಡೆಯವ ಬಿಜಾಪುರ

ಕ್ರಾಸ್ ಬಳಿಯ ಇಷ್ಟಲಿಂಗ ಪೂಜಾ

ಸ್ಥಳದವರೆಗೆ ರಂಭಾಪುರಿ ಶ್ರೀಗಳ ಅಡ್ಡ

ಪಲ್ಲಕ್ಕಿ ಉತ್ಸವ ನಡೆಯಿತು.ಅಂದೋಲಾ

ಶ್ರೀಗಳು, ಕಡಕೊಳ ರುದ್ರಮುನಿ

ಶಿವಾಚಾರ್ಯ ಸ್ವಾಮಿ ಸೇರಿದಂತೆ

ಹಲವಾರು ಮಂದಿ ಭಾಗವಹಿಸಿದ್ದರು.

ಭದ್ರತೆಗಾಗಿ ಎಎಸ್ಪಿ ನೇತೃತ್ವದಲ್ಲಿ

5 ಮಂದಿ ಡಿವೈಎಸ್ಪಿಗಳು, 30

ಮಂದಿ ಸಿಪಿಐಗಳು,

50 ಮಂದಿ ಪಿಎಸ್ಐಗಳನ್ನು

ನಿಯೋಜಿಸಲಾಗಿತ್ತು.

loading...

LEAVE A REPLY

Please enter your comment!
Please enter your name here