ಅತೀಸಾರ ಭೇದಿಯ ತೀವ್ರತರ ಪಾಕ್ಷಿಕ ಉದ್ಘಾಟನಾ ಸಮಾರಂಭ

0
43

ಕನ್ನಡಮ್ಮ ಸುದ್ದಿ-ಮುಂಡಗೋಡ: ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಅತೀಸಾರ ಭೇದಿಯ ತೀವ್ರತರ ಪಾಕ್ಷಿಕ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಜಿ.ಪಂ ಶಿಕ್ಷಕ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಟಿ ಪಾಟೀಲ್ ಉದ್ಘಾಟಿಸಿ ಮಾತನಾಡಿ, “ಅತೀಸಾರ ಭೇದಿಯಿಂದ ಮಕ್ಕಳ ಶೂನ್ಯ ಸಾವು” ಎನ್ನುವ ಘೋಷಣೆಯೊಂದಿಗೆ ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಜಿಲ್ಲಾ ಲೇರಿಯಾ ಅಧಿಕಾರಿ ಡಾ|| ರಮೇಶ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಅತೀಸಾರ ಭೇಧಿಯ ತೀವ್ರತರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವು 09-06-2018ರ ವರೆಗೆ ನಡೆಯುತ್ತದೆ. 0-5 ವರ್ಷದೊಳಗಿನ ಮಕ್ಕಳು ಇರುವ ಪ್ರತಿ ಮನೆಗೆ ಓ.ಆರ್.ಎಸ್. ವಿತರಿಸಿ ಅತೀಸಾರ ಭೇದಿ ನಿರ್ವಹಣೆ ಹಾಗೂ ಅತೀಸಾರ ಭೇದಿಯಿಂದ ಬಳಲುವ ಮಕ್ಕಳಿಗೆ ಜಿಂಕ್ ಮಾತ್ರೆ(14 ದಿನ) ಸೇವನೆಯ ಬಗ್ಗೆ ಹಾಗೂ ಅದರ ಮಹತ್ವದ ಬಗ್ಗೆ ಮತ್ತು ಸಾರ್ವಜನಿಕರಿಗೆ ವೈಯಕ್ತಿಕ ಸ್ವಚ್ಛತೆಯ ಕುರಿತು ಕೈ-ತೊಳೆಯುವ ಬಗ್ಗೆ ಹಾಗೂ ಬಯಲು ಮಲವಿಸರ್ಜನೆ ತಡೆಗಟ್ಟುವ ಕುರಿತು ಆರೋಗ್ಯ ಶಿಕ್ಷಣವನ್ನು ನೀಡಲಾಗುವುದು ಎಂದು ತಿಳಿಸಿದರು. ಪ.ಪಂ ಉಪಾಧ್ಯಕ್ಷ ಫಕ್ಕೀರಪ್ಪ ಅಂಟಾಳ, ತಜ್ಞ ವೈದ್ಯ ಡಾ|| ಪ್ರಭು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

loading...