ಅತ್ಯಾಚಾರ ಖಂಡಿಸಿ ವೈದ್ಯರಿಂದ ಮನವಿ

0
11

ಅತ್ಯಾಚಾರ ಖಂಡಿಸಿ ವೈದ್ಯರಿಂದ ಮನವಿ

ಬೆಳಗಾವಿ :
ತೆಲಂಗಾಣದಲ್ಲಿ ಪಶು ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಈ ಕ್ರೂರ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು ಮತ್ತು ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪಶು ವೈದ್ಯಕೀಯ ಸಂಘದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತೆ

ಲಂಗಾಣದಲ್ಲಿ ಪಶು ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಿಯಂಕಾ ರೆಡ್ಡಿ ಅವರನ್ನು ಸಾಮೋಹಿಕವಾಗಿ ಅತ್ಯಾಚಾರಗೈದು ಅವರನ್ನು ಅಮಾನುಷವಾಗಿ ಸುಟ್ಟ ಹಂತಕರನ್ನು ಗಲ್ಲಿಗೇರಿಸಬೇಕು ಮತ್ತು ಅವಳ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಪಶು ವೈದ್ಯರು ಮೂಖ ಪ್ರಾಣಿಗಳ ಮದ್ಯ ಕೆಲಸ ನಿರ್ವಹಿಸುತ್ತಾರೆ ಅವರಿಗೆ ಭದ್ರತೆ ಅವಶ್ಯಕತೆ ಇದ್ದು ಇದರ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ತೆಲಂಗಾಣ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹುಂಡೇಕರ ಮಾತನಾಡಿ, ಪ್ರಿಯಂಕಾ ರೆಡ್ಡಿ ಕುಟುಂಬದೊAದಿಗೆ ನಾವಿದ್ದೇವೆ ಈ ಕ್ರೂರ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೆವೆ. ಈ ಹೇಯ ಕೃತ್ಯ ಎಸಗಿದವರನ್ನು ತೆಲೆಂಗಾಣ ಸರಕಾರ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೈದ್ಯರಾದ .ರಾಜು ಮೇತ್ರಿ, ಸಿ. ವ್ಹಿ ಧರಣೆಪ್ಪಗೌಡ್ರ, ಅನೀಲಕುಮಾರ ಗಂಗರೆಡ್ಡಿ, ರಾಜಶೇಖರ ಜಂಬಗಿ, ಮಹಾದೇವಗೌಡ ಪಾಟೀಲ, ವಿಶ್ವನಾಥ ಗಂಗಾದರ ಸೇರಿದಂತೆ ಇತರರು ಇದ್ದರು.
೦೪

loading...