ಅದ್ಧೂರಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲು ನಿರ್ಧಾರ

0
49

ಕುಷ್ಟಗಿ: ಪ್ರತಿಯೊಂದು ಸರಕಾರಿ ಇಲಾಖೆಯಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿಯ ಮತ್ತು ಶ್ರೀ ಭಕ್ತ ಶ್ರೇಷ್ಠ ಕನಕದಾಸರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡಿ ರಾಷ್ಟ್ರದ ದ್ವಜವನ್ನು ಹಾರಿಸುವ ಮೂಲಕ ಭಕ್ತಶ್ರೇಷ್ಠ ಕನಕದಾಸರ ಜಯಂತಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಬೇಕು ಹಾಗೂ ಈ ವರ್ಷದ ಅತ್ಯಂತ ಅದ್ಧೂರಿಯಿಂದ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುತ್ತಿದ್ದು ಆದಕಾರಣ ಎಲ್ಲಾ ಸರಕಾರಿ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ಪೂಜೆಯನ್ನು ಸಲ್ಲಿಸಿ ಕಡ್ಡಾಯವಾಗಿ ಭಕ್ತ ಶ್ರೇಷ್ಠ ಕನಕಸಾದರ ಜಯಂತಿ, ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಮೆರವಣೆಗೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ತಹಶೀಲ್ದಾರ ಎಂ.ಗಂಗಪ್ಪ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಲಯದ ಸಂಭಾಗಣದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಭಕ್ತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವ ಅಂಗವಾಗಿ ಮೆರವಣೆಗೆಯಲ್ಲಿ ಶಾಲಾ ಮಕ್ಕಳಿಂದ ಈ ನಾಡಿನ ಮಾಹಾತ್ಮರ ಎರಡು ಸ್ತಬ್ದ ಚಿತ್ರಗಳನ್ನು ಮೆರವಣಗೆಯಲ್ಲಿ ಆಯೋಜನೆ ಮಾಡಲಾಗುವದು. ಈ ಸಂದರ್ಭದಲ್ಲಿ ಜಿಲ್ಲಾ ಹಾಲುಮತ ಸಮಾಜದ ಜಿಲ್ಲಾ ಉಪಾಧ್ಯಕ್ಷ ಪರಸಪ್ಪ ಪಂಚಮ್, ತಾಲೂಕು ಹಾಲುಮತ ಸಮಾಜದ ಆಧ್ಯಕ್ಷ ಮಲ್ಲಣ್ಣ ಪಲ್ಲೇದ, ಪುರಸಭೆ ಸದಸ್ಯರಾದ ಕಲ್ಲೇಶ ತಾಳದ್, ಹಾಲುಮತ ಸಮಾಜದ ಕಾರ್ಯಧರ್ಶಿ ಕೆ.ಎಚ್.ಮಾಲಿ ಪಾಟೀಲ, ತಾ.ಕಸಾಪ ಅ.ನಟರಾಜ ಸೋನಾರ, ರವೇಂದ್ರ ಬಾಕಳೆ, ತಾಜುದ್ಧೀನ್ ದಳಪತಿ, ಶರಣಪ್ಪ ಚೂರಿ, ಶರಣಪ್ಪ ಕತ್ತಿ, ಕೃಷ್ಣಮೂರ್ತಿ ಕಟ್ಟಿಮನಿ, ಶಾರಾದಾ ಕಟ್ಟಿಮನಿ. ಚಂದ್ರಕಾಂತ ವಡಗೇರಿ, ಪ್ರಭಾರಿ ಬಿಓ ಮಲ್ಲಿಕಾರ್ಜುನ ಸೇಬಿನಕಟ್ಟಿ, ದೇವಪ್ಪ ಕಟ್ಟಿಹೊಲ, ರಜನಿಕಾಂತ, ವಿ.ಬಿ ದಾದ್ಮಿ, ಶಾಂತಪ್ಪ ಸೇರಿದಂತೆ ಸರಕಾರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

loading...