ಅಧ್ಯಕ್ಷ,ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ

0
37

ಕಾಗವಾಡ: ಉಗಾರ ಬುದ್ರುಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡಾ ಉರ್ಫ ಶಿತಲ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ಅಪ್ಪಾಸಾಹೇಬ ಚೌಗುಲೆ ಇವರನ್ನು ಅವಿರೋಧವಾಗಿ ಆಯ್ಕೆಮಾಡಿದರು. ಬುಧವಾರ ಸಂಸ್ಥೆ ಕಾರ್ಯಾಲಯದಲ್ಲಿ ಚುನಾಯತ ಆಡಳಿತ ಮಂಡಳಿಯ ಸದಸ್ಯರ ಸಭೆ ಜರುಗಿತು. ಸಭೆಯಲ್ಲಿ ಆಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆರವೇರಿತು. ಮಹಾವೀರ ವಸವಾಡೆ ಇವರು ಹೆಸರಗಳು ಸೂಚಿಸಿದರು.
ಸಂಸ್ಥೆ ಕಾರ್ಯದರ್ಶಿ ರಾಜಶೇಖರ ವಿರೋಜೆ ಇವರು ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಮತ್ತು ಆಧ್ಯಕ್ಷ, ಉಪಾಧ್ಯಕ್ಷರನ್ನು ಸ್ವಾಗತಿಸಿ, ಸನ್ಮಾನಿಸಿದರು. ಸಂಸ್ಥೆಯ ದುಡಿಯುವ ಬಂಡವಳ 7 ಕೋಟಿ ರೂ.ವಿದ್ದು, ಅಹ್ವಾಲ ವರ್ಷದಲ್ಲಿ 24 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಕಾರ್ಯದರ್ಶಿಗಳು ಹೇಳಿದರು.
ಸಭೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ನೂತನ ಸಂಚಾಲಕರಾದ ಮಹಾವೀರ ವಸವಾಡೆ, ಪ್ರಶಾಂತ ಕುಸನಾಳೆ, ಪದ್ಮಕುಮಾರ ಆಳಪನ್ನವರ, ಸುರೇಶ ಕುಂಬಾರ, ಮಲ್ಲಪ್ಪಾ ಕುರುಬರ, ಪ್ರಕಾಶ ಕಾಂಬಳೆ, ಸದಾಶಿವ ನಾಯಿಕ್‌, ಮಹಿಳಾ ಸದಸ್ಯ ಸಂಗೀತಾ ಪ್ರವೀನಕುಮಾರ ಹೋಸುರೆ, ಪದ್ಮಾ ಭರತೇಶ ಖಂಡೆರಾಜುರೆ, ಪ್ರವೀನ ಪಾಟೀಲ ಉಪಸ್ಥಿತರಿದ್ದರು.

loading...