ಅಧ್ಯಕ್ಷರಾಗಿ ಜಡಿಯಪ್ಪಗೌಡ, ಉಪಾಧ್ಯಕ್ಷೆಯಾಗಿ ನೀಲವ್ವ ಆಯ್ಕೆ

0
15

ಕನ್ನಡಮ್ಮ ಸುದ್ದಿ-ನರಗುಂದ: ತಾಲೂಕಿನ ಚಿಕ್ಕನರಗುಂದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಡಿಯಪ್ಪಗೌಡ ಚನ್ನಪ್ಪಗೌಡ್ರ ಹಾಗೂ ಉಪಾಧ್ಯಕ್ಷರಾಗಿ ನೀಲವ್ವ ಹಂಚಿನಾಳ ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣೆ ಅಧಿಕಾರಿ ಪ್ರಶಾಂತ ಮುಧೋಳ ಆಯ್ಕೆಗೊಂಡವರ ಹೆಸರುಗಳನ್ನು ಘೋಷಿಸಿದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಈರಣ್ಣ ಹೊಂಗಲ ಹಾಗೂ ಉಪಾಧ್ಯಕ್ಷರಾಗಿದ್ದ ಚನ್ನವ್ವ ಅರೆಬೆಂಚಿ ಒಳ ಒಪ್ಪಂದದಂತೆ ಆ.29 ರಂದು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ಜರುಗಿತು. ಮುಂದಿನ ಎರಡೂವರೇ ವರ್ಷದ ಅವಧಿಯವರೆಗೆ ನೂತನ ಅಧ್ಯಕ್ಷ,ಉಪಾಧ್ಯಕ್ಷರು ಕಾರ್ಯ ನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ಧೆಶಕ ಮಂಡಳಿ ಸದಸ್ಯರಾದ ಎಂ.ಎಸ್‌.ತೋರಗಲ್‌, ಎಸ್‌.ಎಂ.ಗಾಣಿಗೇರ, ಐ.ಎಸ್‌.ಹೊಂಗಲ, ಎ.ಬಿ.ಜ್ಞಾನೋಪಂಥ, ಎಸ್‌.ಬಿ.ಕಂಚಗಾರ, ಟಿ.ಬಿ.ಕಲಹಾಳ, ಜಿ,ಬಿ.ಸಾತಣ್ಣವರ, ಎಂ.ಬಿ.ಗಾಣಿಗೇರ, ಕೆ.ಎಚ್‌.ಚಲವಾದಿ, ಚಿನ್ನವ್ವ ಗಣೇಶಿ ಮತ್ತು ಎಸ್‌.ಎಸ್‌. ಭೂಮಣ್ಣವರ, ಬಿ.ಬಿ. ಬ್ಯಾಳಿ, ಎಸ್‌.ಎಸ್‌. ಸಾಲೂಟಗಿ, ಸಿ.ಎಸ್‌. ಸಾಲೂಟಗಿ, ವ್ಹಿ.ಬಿ. ಸವದಿ ಉಪಸ್ಥಿತರಿದ್ದರು.

loading...