ಅನಂತನ ವಿರುದ್ಧ ಮತ್ತೊಂದು ಆಯೋಗ ನೇಮಕ, ವಿಷ್ಣುಕಾಂತ ಚಟಪಲ್ಲಿ ವಿರುದ್ದವೂ ಕ್ರಮ

0
38

ಬೆಳಗಾವಿ:17 ಬೆಳೆಯುವ ಹಂತದಲ್ಲಿರುವ ಇಲ್ಲಿಯ ಇಲ್ಲಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಈಗ ಹಗರಣಗಳಿಂದ ಸುದ್ದಿ ಮಾಡುತ್ತಿರುವದು ಈ ಭಾಗದ ಜನರಲ್ಲಿ ಕಳವಳವನ್ನುಂಟು ಮಾಡಿದ್ದು, ಈಗ ಮತ್ತೆ ಎರಡು ಹಗರಣಗಳಿಂದ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಲು ಸಜ್ಜಾಗಿದೆ.
ವಿಶ್ವ ವಿದ್ಯಾಲಯದ ಮಾಜಿ ಕುಲಪತಿ ಅನಂತನ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಗಲೊಂದಿಗೆ ಈಗ ವಿವಿಯ ವಿಶೇಷಾಧಿಕಾರಿ ವಿಷ್ನುಕಾಂತ ಚಟಪಲ್ಲಿ ಅವರ ವಿರುದ್ಧ ಸರಕಾರ ಕ್ರಮಕ್ಕೆ ಮುಂದಾಗಿದೆ.
ತಮ್ಮ ವಿರುದ್ಧ ತನಿಖೆ ನಡೆಸಲು ಆಯೋಗ ನೇಮಿಸುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು, ಅನಂತನ ಅವರು, ನ್ಯಾಯಾಲಯದ ಮೊರೆ ಹೋಗಿ, ವಿಚಾರಣಾ ಆಯೋಗ ರಾಜ್ಯಪಾಲರು ನೇಮಿಸಿದ್ದ ಆಯೋಗದ ವಿರುದ್ಧ ತಡೆಯಾಜ್ಞೆ ತಂದಿದ್ದರು.
ಅನಂತನ ಅವರು ತಡೆಯಾಜ್ಞೆ ಪಡೆದ ನಂತರ ರಾಜ್ಯ ಸರಕಾರವು ತನ್ನ ಅಧಿಕಾರವನ್ನು ಚಲಾಯಿಸಿ ಅನಂತನ ವಿರುದ್ಧ ತನಿಖೆಗೆ ನ್ಯಾಯಮೂರ್ತಿ ಫಾರೂಕ್ ಅವರನ್ನು ನೇಮಿಸಿದೆ. ಇನ್ನೊಂದೆಡೆ ರಾಜ್ಯಪಾಲರ ಕಾರ್ಯಾಲಯವು ಅನಂತನ ಅವರು ಪದ್ಮರಾಜ ಆಯೋಗದ ವಿರುದ್ಧ ಪಡೆದಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವ ಯತ್ನ ನಡೆಸುತ್ತಿದೆ.
ಅನಂತನ ಸುದ್ದಿ ಒಂದೆಡೆಯಾದರೆ, ಇನ್ನೊಂದೆಡೆ ವಿವಿಯ ವಿಶೇಷಾಧಿಕಾರಿ ವಿಷ್ಣುಕಾಂತ ಚಟಪಲ್ಲಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ಕ್ರಮ ಜರುಗಿಸುವಂತೆ ಸರಕಾರವು ವಿಶ್ವ ವಿದ್ಯಾಲಯಕ್ಕೆ ಆದೇಶಿಸಿದೆ.
ಏನಿದು ಪ್ರಕರಣ: ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ ಅವರನ್ನು ಕ್ರಿಮಿನಾಲಜಿ ವಿಭಾಗದ ಸಂದರ್ಶಕ ಪ್ರಾಧ್ಯಾಪಕರೆಂದು ನೇಮಿಸಿಕೊಳ್ಳುವ ಕರಾರಿಗೆ ವಿಷ್ಣುಕಾಂತ ಚಟಪಲ್ಲಿ ಅವರು ರಜಿಸ್ಟ್ರಾರ್ ಎಂದು ಸಹಿ ಹಾಕಿದ್ದಾರೆ. ಆದರೆ, ವಿವಿ ಮೂಲಗಳ ಪ್ರಕಾರ ಆಗ ಶಾಂತಿನಾಥ ದಿಬ್ಬದ ಅವರು ರಜಿಸ್ಟ್ರಾರ್ ಆಗಿದ್ದರು. ಚಟಪಲ್ಲಿ ಅವರು, ವಿಶೇಷ ಕರ್ತವ್ಯಾಧಿಕಾರಿಯಾಗಿದ್ದರು.
ಈ ಪ್ರಕರಣ ಇನ್ನೊಂದು ಅಂಶವೆಂದರೆ, 1-7-2014 ರಂದು ಆಗಿರುವ ಈ ನೇಮಕಾತಿ ಒಪ್ಪಂದಕ್ಕೆ ವಿಷ್ಣುಕಾಂತ ಚಟಪಲ್ಲಿ ಹಾಗೂ ಜಾಮದಾರ ಇಬ್ಬರೂನ ಸಹಿ ಹಾಕಿದ್ದಾರೆ. iÁದರೆ, ಈ ಒಪ್ಪಂದವನ್ನು ಟೈಪ್ ಮಾಡಿರುವ ಛಾಪಾ ಕಾಗದವನ್ನು 20-8-2014 ರಂದು ಖರೀದಿಸಲಾಗಿದೆ. ಆಗಷ್ಟನಲ್ಲಿ ಛಾಪಾ ಕಾಗದ ಖರೀದಿಸಿ ಅದರ ಮೇಲೆ ಜುಲೈ ತಿಂಗಳ ಒಪ್ಪಂದ ಮಾಡಿಕೊಳ್ಳಲಾಗಿದೆ.
ವಿಶ್ವ ವಿದ್ಯಾಲಯಗಳ ಮೂಲಗಳ ಪ್ರಕಾರ, ಯುಜಿಸಿ ನಿಯಮದಂತೆ ಸಂದರ್ಶಕ ಪ್ರಾಧ್ಯಾಪಕರನ್ನು ಗರಿಷ್ಟ ಎರಡು ವರ್ಷ ನೇಮಿಸಿಕೊಳ್ಳಬಹುದು ಹಾಗೂ ಗರಿಷ್ಟ 15 ಸಾವಿರ ವೇತನ ನೀಡಬಹುದು. ಆದರೆ, ಜಾಮದಾಋ ಅವರನ್ನು ಎರಡು ವರ್ಷಗಳ ನಂತರ ಮತ್ತೆ ಎರಡು ವರ್ಷ ನೇಮಿಸಿಕೊಳ್ಳಲಾಗಿದೆ. ಅಲ್ಲದೆ ಮಾಸಿಕ 80 ಸಾವಿರ ರೂ. ವೇತನ ನೀಡಲಾಗಿದೆ.
ಈ ಹಿಂದೆ ವಿವಿಯ ಸಿಂಡಿಕೇಟ್ ಸಭೆಯಲ್ಲಿ ಜಾಮದಾರ ಅವರನ್ನು ವಜಾ ಮಾಡಬೇಕು ಹಾಗೂ ಹೆಚ್ಚುವರಿ ವೇತನ ಹಿಂಪಡೆಯಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅಲ್ಲದೆ ವಿವಿಯ ಕಾನೂನು ಸಲಹೆಗಾರ ಗಂಗಾಧರ ಗವತಿ ಅವರು ಸಿಂಡಿಕೇಟ್ ಸಭೆಯ ನಿರ್ಣಯವನ್ನು ಕ್ರಮ ಬದ್ದ ಎಂದು ಸಲಹೆ ನೀಡಿದ್ದರು.
ಈಗ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಸಂಧ್ಯಾ ನಾಯಕ ಅವರು ವಿವಿಗೆ ಪತ್ರ ಬರೆದು ಚಟಪಲ್ಲಿ ವಿರುದ್ಧ ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ.

loading...

LEAVE A REPLY

Please enter your comment!
Please enter your name here