ಅನಧಿಕೃತ ಮದ್ಯ ಮಾರಾಟಕ್ಕೆ ಅಧಿಕಾರಿಗಳೇ ಹೊಣೆ

0
12

ಬೆಂಗಳೂರು, ಡಿ.19- ತಮ್ಮ ನೀರೀಕ್ಷೆಗೆ ತಕ್ಕಂತೆ ತೆರಿಗೆ ಸಂಗ್ರಹ

ಮಾಡದಿರುವ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿರುವ ಅನಧಿಕೃತ

ಮದ್ಯ ಮಾರಾಟ ತಡೆಯದಿದ್ದರೆ ಸಂಬಂಧಪಟ್ಟ ಇಲಾಖೆಯ ಹಿರಿಯ

ಅಧಿಕಾರಿಗಳನ್ನು ಹೊಣೆ ಮಾಡಿ, ಯಾವ ಮುಲಾಜಿಗೂ ಒಳಗಾಗದೆ

ಶಿಸ್ತು ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಎಚ್ಚರಿಕೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ

ಮತ್ತು ಸ್ಟಾಂಪ್ ಅಂಡ್ ಡ್ಯೂಟಿ ಇಲಾಖೆ ಅಧಿಕಾರಿಗಳೊಂದಿಗೆ

ಸಂಪನ್ಮೂಲ ಕ್ರೌಢೀಕರಣ, ಪ್ರಗತಿ ಪರೀಶೀಲನಾ ಸಭೆ ನಡೆಸಿದ

ಅವರು,ನನ್ನ ನೀರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ

ತಲೆ ದಂಡ ಖಚಿತ ಎಂಬ ಕಠಿಣ ಸಂದೇಶವನ್ನು ನೀಡಿದ್ದಾರೆ.

ಸರ್ಕಾರ ನಿಗಧಿಪಡಿಸುವ ತೆರಿಗೆಯನ್ನು ಸಂಗ್ರಹಿಸಲು

ಸಾಧ್ಯವಾಗದಿದ್ದರೆ ನೀವು ಸರ್ಕಾರಿ ಸಂಬಳ ತೆಗೆದುಕೊಳ್ಳಲು

ಇರಬೇಕೇ ಎಂದು ಖಾರವಾಗಿ ಪ್ರಶ್ನೆ ಮಾಡಿದ ಸಿದ್ದರಾಮಯ್ಯ

ಅವರು, ನಾನು ಯಾವ ಮುಲಾಜಿಗೂ ಬಗ್ಗುವುದಿಲ್ಲ. ನನ್ನ ಮೇಲೆ

ಒತ್ತಡ ತರಲು ಮುಂದಾದರೆ ತಲೆದಂಡವಾಗುವುದು ಖಚಿತ.

ಸರ್ಕಾರ ನಿಗಧಿ ಮಾಡಿದ ತೆರಿಗೆಯನ್ನು ಸಂಗ್ರಹಿಸಲು ನಿಮಗಿರುವ

ಅಡ್ಡಿಯಾದರೂ ಎನು ಎಂದು ಹಿರಿಯ ಅಧಿಕಾರಿಗಳನ್ನು

ತರಾಟೆಗೆತೆಗೆದುಕೊಂಡರೆಂದು ತಿಳಿದು ಬಂದಿದೆ.

ಈ ಹಿಂದೆ ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಗೆ 38 ಸಾವಿರ

ಕೋಟಿ ರೂ.ಗಳ ಗುರಿ ನಿಗದಿಪಡಿಸಲಾಗಿತ್ತು. ಆದರೆ ನವೆಂಬರ್

ವೇಳೆಗೆ 20 ಸಾವಿರ ಕೋಟಿ ರೂ. ಸಂಗ್ರಹವಾಗಿದೆ.ಉಳಿದಿರುವ

ನಾಲ್ಕು ತಿಂಗಳ ಅವಧಿಯಲ್ಲಿ 18 ಸಾವಿರ ಕೋಟಿ ರೂ.ಗಳನ್ನು

ಸಂಗ್ರಹಿಸಬೇಕು. ಯಾವ ಕಾರಣಕ್ಕಾಗಿ ಇಷ್ಟು ದೊಡ್ಡ ಮೊತ್ತದ

ಹಣವನ್ನು ಸಂಗ್ರಹಣೆ ಮಾಡಿಲ್ಲ ಎಂದು ಸಿಡಿಮಿಡಿಗೊಂಡರು.

ವಿರೋಧ ಪಕ್ಷಗಳು ಇದನ್ನೇ ಮುಂದಿಟ್ಟುಕೊಂಡು ಸರ್ಕಾರಕ್ಕೆ

ಕೆಟ್ಟ ಹೆಸರು ತರಲು ಯತ್ನಿಸುತ್ತಿವೆ.ಸರ್ಕಾರದ ಆರ್ಥಿಕ ನಿರ್ವಾಹಣೆ

ಸರಿಯಾಗಿಲ್ಲ ಎಂದು ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ.

ಅವರಿಗೆ ಉತ್ತರ ನೀವು ಕೊಡುತ್ತೀರಾ ಎಂದು ಹರಿಹಾಯ್ದರು.

ಸರ್ಕಾರ ಎಷ್ಟು ತೆರಿಗೆಯನ್ನು ನಿಗಧಿ ಮಾಡುತ್ತದೆಯೋ

ಅಷ್ಟುನ ್ನುಸ ಂಗ ್ರಹಿ ಸ ಬೆ ಕ ು. ನಿ ವ ುಶ ೇ60 ರಷ್ಟು ದಾಟಿದರೆ ಆರ್ಥಿಕ

ನಿರ್ವಾಹಣೆ ಮಾಡುವುದಾದರೂ ಹೇಗೆ.? ನೀರೀಕ್ಷೆಗಿಂತಲೂ ಹೆಚ್ಚು

ಸಂಗ್ರಹಿಸಿದ್ದರೆ ನಿಮ್ಮ ಕರ್ತವ್ಯವನ್ನು ಮೆಚ್ಚಿಕೊಳ್ಳಬಹುದಿತ್ತು. ಆದರೆ

ಗುರಿ ತಲುಪುವಲ್ಲಿ ವಿಫಲರಾಗಿದ್ದೀರಿ. ಮುಂದೆ ಇದೇ ರೀತಿ

ಮುಂದುವರೆದರೆ ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ತೆರಿಗೆ ಸಂಗ್ರಹದಲ್ಲಿ ಇಳಿಮುಖವಾಗಿದ್ದರಿಂದ ್ರ ವಾಣಿಜ್ಯ

ತೆರಿಗೆ ಇಲಾಖೆಯ ಜಂಟಿ ಆಯುಕ್ತರನ್ನು ಎತ್ತಂಗಡಿ ಮಾಡಿದ್ದೇನೆ.

ಅಬಕಾರಿ ಇಲಾಖೆ ಮತ್ತು ಕಂದಾಯ ಇಲಾಖೆ ವ್ಯಾಪ್ತಿಯ ಸ್ಟಾಂಪ್

ಮತ್ತು ರಿಜಿಸ್ಟ್ತ್ರೇಷನ್ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ

ಅವರಿಗೂ ಇದೇ ತಲೆದಂಡವಾಗಲಿದೆ.

ಇಲಾಖೆಗಳಲ್ಲೂ ತೆರಿಗೆ ಸೋರಿಕೆಯಾಗುತ್ತಿರುವುದನ್ನು

ತಡೆಗಟ್ಟಬೇಕು. ನಿಗದಿತ ಗುರಿಗಿಂತ ಹೆಚ್ಚು ತೆರಿಗೆ ಸಂಗ್ರಹಿಸದಿದ್ದರೆ

ತಲೆದಂಡ ಖಚಿತ ಎಂದು ಗುಡುಗಿದರು.

ಯಡಿ ಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಕೆಲವು

ಗಂಭೀರ ಕ್ರಮ ತೆಗೆದುಕೊಂಡು ಸೋರಿಕೆಗೆ ಕಡಿವಾಣ ಹಾಕಲು

ಯತ್ನಿಸಿದರು. ಆದರೆ, ಅನಂತರ ಬಂದ ಮುಖ್ಯಮಂತ್ರಿಗಳು

ಸಂಪನ್ಮೂಲ ಕ್ರೌಢೀಕರಣಕ್ಕೆ ಹೆಚ್ಚು ಒತ್ತು ನೀಡದಿದ್ದರಿಂದ ಸೋರಿಕೆ

ಮತ್ತೆ ಮುಂದುವರಿದಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳಲು

ಮುಂದಾದರು. ಆದರೆ ಇಂತಹ ಸಬೂಬುಗಳನ್ನು ಹೇಳಲೇ ಬೇಡಿ

ಎಂದು ಸಿ.ಎಂ ತಾಕೀತುಮಾಡಿದ್ದಾರೆ.

ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ

ಚಟುವಟಿಕೆಗಳನ್ನು ತಡೆಗಟ್ಟಲು ಗಂಭೀರ ಕ್ರಮ ತೆಗೆದುಕೊಳ್ಳಲು

ಸೂಚನೆ ನೀಡಿದರು. ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ

ನಿರ್ಮಿಸಿರುವ ಮದ್ಯ ಮಾರಾಟ ಅಂಗಡಿಗಳ ವಿರುದ್ಧ ಕಠಿಣ ಕ್ರಮ

ಕೈಗೊಳ್ಳಬೇಕು. ಅನಧಿಕೃತ ಮದ್ಯ ವಹಿವಾಟಿನಿಂದಾಗಿ ಸಾವಿರಾರು

ಕೋಟಿ ರೂ.ಗಳ ತೆರಿಗೆ ವಂಚನೆಯಾಗುತ್ತಿದೆ ಎಂದು ಸಿದ್ದರಾಮಯ್ಯ

ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನು ತಡೆಗಟ್ಟಲು ತಕ್ಷಣವೇ ಬಿಗಿಯಾದ ಕ್ರಮಕೈಗೊಳ್ಳಬೇಕೆ

ಎಂದು ಸಲಹೆ ಮಾಡಿದ್ದಾರೆ.

loading...

LEAVE A REPLY

Please enter your comment!
Please enter your name here