ಅನಧೀಕೃತ ಸರಾಯಿ ಮಾರಾಟ, ಬಂಧನ

0
25

ಗೋಕಾಕ ಡಿ, 24 ;- ಚಿಕ್ಕೊ   ಡಿ ತಾಲೂಕಿನ ಗಜಬರವಾಡಿ ಗ್ರಾಮದಲ್ಲಿ ಅನಧೀಕೃತವಾಗಿ ಆಟೋರಿಕ್ಷಾದಲ್ಲಿ ದೇಶಿ ಸಾರಾಯಿಯನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ ಅವರಿಂದ ಸುಮಾರು 1 ಲಕ್ಷ 92 ಸಾವಿರ 620 ರೂ,ಗಳ ಮಾಲನ್ನು ಶನಿವಾರದಂದು ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಸಿಪಿಐ ಎ.ಎಸ್.ಗೂದಿಗೊಪ್ಪ ಹಾಗೂ ಪಿಎಸ್ಐಗಳಾದ ರಮೇಶ ಗೋಕಾಕ ಮತ್ತು ಬಿ.ಎಮ್.ಹೊಸಮನಿ ಅವರು ತಮಗೆ ಬಂದ ಖಚಿತ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಮಹಾರಾಷ್ಟ್ತ್ರದಿಂದ ಅನಧೀಕೃತವಾಗಿ ಸಾಗಿಸುತ್ತಿದ್ದ 21 ಸಾವಿರ 120 ರೂ,ಗಳ ಮೌಲ್ಯದ ಸಾರಾಯಿ ಹಾಗೂ ಇದಕ್ಕೆ ಬಳಸಲಾಗಿದ್ದ 1 ಲಕ್ಷ 70 ಸಾವಿರ ರೂಗಳ ಮೌಲ್ಯದ ಆಟೋ ರಿಕ್ಷಾ ಮತ್ತು 15 ಸಾವಿರ ರೂ,ಗಳ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕೋಲ್ಹಾಪೂರ ಜಿಲ್ಲೆಯ ಕಸಬಾಸಂಗವ ಗ್ರಾಮದ ಬಾಬುರಾವ ದೀಲೀಪ ಹೆಗಡೆ ಹಾಗೂ ಚಿಕ್ಕೌಡಿ ತಾಲೂಕಿನ ಗಜಬರವಾಡಿ ಗ್ರಾಮದ ರಮೇಶ ಪಾಂಡುರಂಗ ಸಾಲಪೆ ಎಂಬುವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಬಗ್ಗೆ ಗೋಕಾಕ ವಲಯ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here