ಅನುಮಾನಾಸ್ಪದವಾಗಿ ಮಹಿಳಾ ಟೆಕ್ಕಿ ಸಾವು

0
13

ಬೆಂಗಳೂರು:ನಗರದ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಮ್ಮಡಿಹಳ್ಳಿಯ ಕೈ ತೋಟದ ಬಳಿಯ ಮನೆಯೊಂದರಲ್ಲಿ ನಡೆದಿದೆ.
23ವರ್ಷದ ವಿಜಯಲಕ್ಷ್ಮಿ ಮೃತರಾದವರು.ದೆಹಲಿ ಮೂಲದ ವಿಜಯಲಕ್ಷ್ಮಿ ಕಳೆದ 1ವಾರದ ಹಿಂದಷ್ಟೇ ನಗರಕ್ಕೆ ಆಗಮಿಸಿದ್ದರು. ಇಮ್ಮಡಿಹಳ್ಳಿಯ ಕೈ ತೋಟದ ಬಳಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು.ನಿನ್ನೆ ರಾತ್ರಿ ವಿಜಯಲಕ್ಷ್ಮಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ವೈಟ್ ಫೀಲ್ಡ್ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಕತ್ತು ಹಿಸುಕಿ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.ಅಲ್ಲದೇ ಯುವತಿ ಪ್ರಿಯಕರನೇ ಕೃತ್ಯ ಎಸಗಿರಬಹುದು ಎಂಬ ಅನುಮಾನದಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

loading...