ಅಪರಾಧ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾದದ್ದು : ಸಿಪಿಐ ರಾಘವೇಂದ್ರ

0
37

ಚನ್ನಮ್ಮ ಕಿತ್ತೂರು: ಅಪರಾಧ ತಡೆಗಟ್ಟುವಲ್ಲಿ ಯುವಕರು ಪೊಲೀಸ್‌ ಇಲಾಖೆಯ ಜೊತೆಗೆ ಕೈಗೂಡಿಸಿದಲ್ಲಿ ಮುಂದೆ ಆಗುವ ಯಾವುದೇ ಅಪರಾಧವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಕಿತ್ತೂರು ಸಿ.ಪಿ.ಐ ರಾಘವೇಂದ್ರ ಹವಾಲ್ದಾರ ಹೇಳಿದರು.

ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದ ಚಂದರಗಿ ಸಭಾ ಭವನದಲ್ಲಿ ಪೊಲೀಸ್‌ ಠಾಣೆಯ ವತಿಯಿಂದ ಹಮ್ಮಿಕೋಳ್ಳಲಾಗಿದ್ದ ಅಪರಾಧ ತಡೆ ಮಾಸಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪರಾಧ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾಗಿದ್ದು, ಗ್ರಾಮೀಣರಿಗೆ ಕಾನೂನು ಅರಿವಿಲ್ಲದೇ ಕಾನೂನು ಪರಿಪಾಲನೆ ಮಾಡದೇ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುತ್ತಿರುವ ಮಾಹಿತಿ ದೊರೆತರೆ ಕೂಡಲೇ ಪೋಲಿಸ್‌ ಇಲಾಖೆಗೆ ತಿಳಿಸಿ ಎಂದರು. ಕಾನೂನು ದುರ್ಬಳಕೆಯ ಅಂಶ ಕಂಡುಬಂದರೆ ವಿದ್ಯಾರ್ಥಿಗಳು ದೂರವಾಣಿ ಅಥವಾ ಗೌಪ್ಯ ಪತ್ರದ ಮೂಲಕ ಪೊಲೀಸ್‌ ಇಲಾಖೆಗೆ ತಿಳಿಸಿದರೆ ಸಾಮಾಜಿಕ ಸ್ವಾಸ್ತ್ಯ ಕಾಪಾಡಲು ಸಹಕರಿಸಿದಂತಾಗುತ್ತದೆ ಮತ್ತು ಅಪರಾಧಗಳನ್ನು ವಿದ್ಯಾರ್ಥಿಗಳು ಮಾಡದಂತೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯವಿದೆ ಎಂದು ಕಿತ್ತೂರು ಸಿಪಿಐ ರಾಘವೇಂದ್ರ ಹವಾಲ್ದಾರ ಹೇಳಿದರು.

ಕಿನಾವಿವ ಸಂಘದ ಚೇರಮನ್ನರಾದ ಜಗದೀಶ ವಸ್ತ್ರದ ಮಾತನಾಡಿ ಅಪರಾಧಗಳು ನಮ್ಮ ದಿನನಿತ್ಯದ ಸಾಮಾನ್ಯ ಚಟುವಟಿಕೆಗಳಲ್ಲಿ ಹೆಚ್ಚಾಗಿದ್ದು ಎಲ್ಲದಕ್ಕೂ ಪೊಲೀಸ್‌ ಇಲಾಖೆಯನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ನಾವೂ ಕಾನೂನನ್ನು ತಿಳಿದುಕೊಂಡು ಅಪರಾಧಗಳು ಆಗದಂತೆ ಎಚ್ಚರ ವಹಿಸುವುದು ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ಕುಲಕರ್ಣಿ, ವಕೀಲರ ಸಂಘದ ಅದ್ಯಕ್ಷ ವಿಶ್ವನಾಥ ಬಿಕ್ಕನ್ನವರ, ಮಾಜಿ ತಾ ಪಂ ಅಧ್ಯಕ್ಷ ದಿನೇಶ ವಳಸಂಗ, ಪಪಂ ಅಧ್ಯಕ್ಷ ಮಹ್ಮದ ಹನೀಫ ಸುತಗಟ್ಟಿ, ಪೊಲೀಸ್‌ ಸಿಬ್ಬಂದಿ, ಮಹಿಳಾ ಸಂಘಟನೆಯ ಕಾರ್ಯಕರ್ತರು ಸೇರಿದಂತೆ ಇತರರು ಹಾಜರಿದ್ದರು . ಪೇದೆಗಳಾದ ಲಿಂಗರಾಜ ಗಳಗಿ ಸ್ವಾಗತಿಸಿದರು, ಮಂಜುನಾಥ ಶಾಂಡಿಗಿ ವಂದಿಸಿದರು.

loading...

LEAVE A REPLY

Please enter your comment!
Please enter your name here