ಅಬ್ಬರಿಸಿದ ಬಿಜೆಪಿ: ಸೋತು ಸುಣ್ಣವಾದ ಕಾಂಗ್ರೆಸ್

0
217

ಫಲ ಕಂಡ ಕವಟಗಿಮಠ- ಜೊಲ್ಲೆ ಫಾರ್ಮುಲಾ

ಚಿಕ್ಕೋಡಿ ೦೩ : ಜಿದ್ದಾಜಿದ್ದಿನ ಕಣವಾಗಿದ್ದ ಚಿಕ್ಕೋಡಿ ತಾಲೂಕಿನ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಅಚ್ಚರಿಯ ಫಲಿತಾಂಶ ದೊರೆತಿದ್ದು, ಆಡಳಿತಾರೂಢ ಕಾಂಗ್ರೆಸ್‍ಗೆ ಚುನಾವಣೆಯಲ್ಲಿ ತೀವ್ರ ಮುಖಭಂಗವಾಗಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ನಾಯಕರಿಗೆ ನಿಪ್ಪಾಣಿ ನಗರಸಭೆ, ಚಿಕ್ಕೋಡಿ ಪುರಸಭೆ, ಸದಲಗಾ ಪುರಸಭೆಯಲ್ಲಿ ಉತ್ತಮ ಫಲಿತಾಂಶ ದೊರೆತಿದ್ದರೆ, ನಮ್ಮ ಆಡಳಿತ ಶತಸಿದ್ಧ ಎಂಬ ನಿರೀಕ್ಷೆಯಲ್ಲಿದ್ದ ಆಡಳಿತಾರೂಢ ಕಾಂಗ್ರೆಸ್ ನಾಯಕರು ಸ್ಥಳೀಯ ಸಂಸ್ಥೆಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡು ಕಾಂಗ್ರೆಸ್ ಮುಗ್ಗರಿಸಲು ಪ್ರಮುಖ ಕಾರಣವಾಗಿದೆ.

ಕಳೆದ ಐದು ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕರನ್ನು ಮತದಾರ ಪ್ರಭುಗಳು ತಿರಸ್ಕರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು,      ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಅನ್ನಸಾಹೇಬ ಜೊಲ್ಲೆ ದಂಪತಿಗಳ ಪ್ರಯತ್ನ ಫಲ ನೀಡಿದ್ದು, ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ಅತಿಯಾದ ಆತ್ಮವಿಶ್ವಾಸ ಸೋಲಿಗೆ ದೂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಚಿಕ್ಕೋಡಿ ಪುರಸಭೆ:

ಅಶ್ವಿನಿ ಬಾಬುರಾವ್ ಮಿರ್ಜೆ(558), ರಾಜಶ್ರೀ ಸೋಮನಾಥ ಗವನಾಳೆ(718), ಸಂಜಯ  ಚಂದ್ರಶೇಖರ ಕವಟಗಿಮಠ(515), ಭಾಗವ್ವ ಸಿದ್ದಪ್ಪ ಡಂಗೇರ(621), ತಾನಾಜಿ ಹಿರಾಚಂದ ಕದಮ್(576), ಸ್ವಪ್ನಾ ವಿಜಯಭಾಸ್ಕರಗೌಡ ಇಟಗೋನಿ(861), ನಾಗರಾಜ ಸದಾಶಿವ ಮೇದಾರ(250), ಆದಮ್ ಇಮಾಮಹುಸೇನ ಗಣೇಶವಾಡಿ(838), ರಂಜನಾ ವಿಶ್ವನಾಥ ಕಾಮಗೌಡ(860), ವೀಣಾ ಜಗದೀಶ ಕವಟಗಿಮಠ(497), ಸಂತೋಷ ಮಹಾದೇವ ಜೋಗಳೆ(590), ಜಗದೀಶ ಮಲ್ಲಿಕಾರ್ಜುನ ಕವಟಗಿಮಠ(599), ಪ್ರವೀಣ ಬಾಜಿರಾವ್ ಕಾಂಬಳೆ(470) ಸೇರಿದಂತೆ 13 ಸದಸ್ಯರು ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾಗಿದ್ದಾರೆ. ಯೋಗಾ ವರ್ಧಮಾನ ಸದಲಗೆ(453), ಅನೀಲ ಸದಾಶಿವ ಮಾನೆ(603), ಇರ್ಫಾನ ಮಹ್ಮದಲಿ ಬೇಪಾರಿ(800), ಗುಲಾಬಹುಸೇನ ಅಬ್ದುಲ್‍ರಹೀಮ್ ಬಾಗವಾನ(592), ನೂರ್‍ಹ್ಮದ ಮೃತುಜಾ ಜಮಾದಾರ(553), ಸಾಬೀರ ಮೃತುಜಾ ಜಮಾದಾರ(553), ಶಿಲ್ಪಾ ಶ್ರೀಮಂತ ಮಾಳಗೆ(739), ರಾಮಾ ಲಿಂಬಾಜಿ ಮಾನೆ(696), ಶ್ಯಾಮ ರಾಜಾರಾಮ ರೇವಡೆ(540), ಲತಾ ವಿನೋದ ಮಾಳಗೆ(403) ಸೇರಿದಂತೆ 10 ಸದಸ್ಯರು ಕಾಂಗ್ರೆಸ್‍ನಿಂದ ಆಯ್ಕೆಯಾಗಿದ್ದಾರೆ.

ಸದಲಗಾ ಪುರಸಭೆ

ಮಾಲು ಜಿನಪ್ಪಾ ಭೆಂಡವಾಡೆ(314), ಮಹಿಬೂಬ ಮೀರಾಸಾಬ ಕಾಳೆ(408), ಲಕ್ಷ್ಮೀಕಾಂತ ಸುಭಾಷ ಹಾಲಪ್ಪನವರ(248), ಆನಂದ ದೇವಗೌಡ ಪಾಟೀಲ(405), ಲಕ್ಷ್ಮೀ ತಾತ್ಯಾಸಾಬ ನಿಡಗುಂದೆ(429), ಸುರೇಶ ಅನ್ನಾಸಾಹೇಬ ಉದಗಾಂವೆ(310), ಶುಭಾಂಗಿ ಧರೆಪ್ಪ ಹವಾಲ್ದಾರ(434), ಪ್ರಶಾಂತ ಮಹಾದೇವ ಕರಂಗಳೆ(177), ನವಶಾದಬಿ ಅಬೂಬಕರ ಮುಜಾವರ(436), ಸುಜಾತಾ ಸುರೇಶ ಕುಂಬಾರ(228), ಹೇಮಂತ ಮಾಯಪ್ಪ ಶಿಂಗೆ(524), ಮನುಜಾ ಅಭಿನಂದನ ಪಾಟೀಲ(412), ಲಕ್ಷ್ಮೀಬಾಯಿ ಭೀಮು ಸಮಗಾರ(391) ಬಿಜೆಪಿಯಿಂದ 13 ಸದಸ್ಯರು ಆಯ್ಕೆಯಾಗಿದ್ದಾರೆ. ರಾಜಶ್ರೀ ಪ್ರಕಾಶ ಆನೂರೆ(154), ಉದಯಕುಮಾರ ಬದನಿಕಾಯಿ(346), ಅಭಿಜೀತ ದಾದಾಸಾಹೇಬ ಪಾಟೀಲ(183), ಭೀಮರಾವ ಮಹಾದೇವ ಮಾಳಗೆ(416), ಬಸವರಾಜ ಶಂಕರ ಹಣಬರ (202), ಶೋಭಾ ವಿಜಯ ನವಲೆ(501) ಸೇರಿ 7 ಜನ ಆಯ್ಕೆಯಾಗಿದ್ದು, ರವಿ ದಶರಥ ಗೋಸಾವಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಒಟ್ಟು ಕಾಂಗ್ರೆಸ್‍ನಿಂದ 8 ಸದಸ್ಯರು ಆಯ್ಕೆಯಾಗಿದ್ದಾರೆ. ಇನ್ನೂ ಜೆಡಿಎಸ್‍ನಿಂದ ಸುಹಾಸ ಸದಾಶಿವ ವಾಳಕೆ(309), ಸುಗಂಧಾ ಮಹಾದೇವ ವಾಳಕೆ(391) ಆಯ್ಕೆಯಾಗಿದ್ದಾರೆ.

ನಿಪ್ಪಾಣಿ ನಗರಸಭೆ:

ಸುಜಾತಾ ರವಿ ಕದಂ(329), ಸಂತೋಷ ಇಂದುರಾವ ಸಾಂಗಾವಕರ(467), ಪ್ರಭಾವತಿ ಮಹೇಶ ಸೂರ್ಯವಂಶಿ(431), ಸೋನಾಲ ರಾಜೇಶ ಕೊಠಾಡಿಯಾ(765), ರಾಣಿ ಸುನೀಲ ಶೇಲಾರ(411), ಜಯವಂತ ಗಂಗಾರಾಮ ಬಾಟಲೆ(579), ರಂಜನಾ ರವೀಂದ್ರ ಇಂಗವಾಲೆ(519), ವಿನಾಯಕ ದೊಂಢಿರಾಮ ವಾಡೆ(541), ಅರುಣಾ ಅಭಿನಂದನ ಮುದಕುಡೆ(713), ಸದ್ದಾಂ ಸಲಿಂ ನಾಗಾರ್ಜೆ(614), ನೀತಾ ವಿನೋದ ಬಾಗಡೆ(456), ಆಶಾ ವಿಜಯ ಟವಳೆ(502), ಕಾವೇರಿ ಸಾಗರ ಮಿರ್ಜೆ(564) ಸೇರಿದಂತೆ 13 ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ.
ರಾಜೇಂದ್ರ ಶಾಂತಿಲಾಲ ಶಹಾ(578), ಸಂಜಯ ಸುಭಾಷ ಸಾಂಗಾವಕರ(536), ರವೀಂದ್ರ ತುಕಾರಾಮ ಶಿಂಧೆ(596), ಗೀತಾ ಸುನೀಲ ಪಾಟೀಲ(873), ದೀಪಾಲಿ ವಿಶಾಲ ಗಿರಿ(548), ಅನೀತಾ ದಿಲೀಪ ಪಠಾಡೆ(920), ದತ್ತಾತ್ರೇಯ ಕಲ್ಲಪ್ಪಾ ನಾಯಿಕ(658), ನಗಿನಾ ಹೈದರ ಮುಲ್ಲಾ(573), ಗಿರೆ ಜಸರಾಜ ಕಮಲಾಕರ(582), ಸಂಜಯ ಶ್ರೀಕಾಂತ ಪಾವಲೆ(449), ಶೌಕತ್ ಅಲ್ಲಾವುದ್ದೀನ ಮನಿಯಾರ(565), ಸಂತೋಷ ಪ್ರಭಾಕರ ಮಾನೆ(308), ಸರ್ಫರಾಜ ದಾದಾಸಾಬ ಬಡೇಘರ(544), ವಿಲಾಸ ಲಕ್ಷ್ಮಣ ಗಾಡಿವಡ್ಡರ(1063), ಬಾಳಾಸಾಹೇಬ ವಿಶ್ವಾಸರಾವ ದೇಸಾಯಿ(720), ಶಾಂತಿ ದೀಪಕ ಸಾವಂತ(930), ಉಪಾಸನಾ ಸಚೀನ ಗಾರವೆ(212), ವಿಲಾಸ ಲಕ್ಷ್ಮಣ ಗಾಡಿವಡ್ಡರ(867) ಸೇರಿದಂತೆ 18 ಪಕ್ಷೇತರರಾಗಿ ಆಯ್ಕೆಯಾಗಿದ್ದು, ಇದರಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ 12 ಜನ ಸ್ವತಂತ್ರ ಅಭ್ಯರ್ಥಿಗಳಾಗಿ 6 ಜನ ಆಯ್ಕೆಯಾಗಿದ್ದಾರೆ.

ತಾಯಿ-ಮಗ ಗೆಲುವು:

ತಾಯಿ ಚಿಕ್ಕೋಡಿ ಪುರಸಭೆಯ ವಾರ್ಡ ನಂ. 14ರಲ್ಲಿ ನೂರಅಹ್ಮದ ಮೃತುಜಾ ಜಮಾದಾರ ಆಯ್ಕೆಯಾಗಿದ್ದರೆ, ಮಗ ವಾರ್ಡ ನಂ.15ರಲ್ಲಿ ಸಾಬೀರ ಮೃತುಜಾ ಜಮಾದಾರ ಆಯ್ಕೆಯಾಗಿರುವುದು ಚುನಾವಣೆಯ ವಿಶೇಷವಾಗಿದೆ.

ಪತಿ-ಪತ್ನಿ ಗೆಲುವು:

ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಹಾಗೂ ಹಿರಿಯ ಪುರಸಭೆ ಸದಸ್ಯ ಜಗದೀಶ ಮಲ್ಲಿಕಾರ್ಜುನ ಕವಟಗಿಮಠ ವಾರ್ಡ ನಂ.22ರಲ್ಲಿ ಆಯ್ಕೆಯಾಗಿದ್ದರೆ, ಇವರ ಪತ್ನಿ ವೀಣಾ ಜಗದೀಶ ಕವಟಗಿಮಠ ವಾರ್ಡ ನಂ.20ರಲ್ಲಿ ಆಯ್ಕೆಯಾಗಿದ್ದಾರೆ.

ಎರಡು ಕಡೆ ಗೆಲುವು:

ಇತ್ತೀಚಿಗೆ ಬಿಜೆಪಿ ಸದಸ್ಯರು ಹಾಕಿದ್ದ ಸವಾಲು ಸ್ವೀಕರಿಸಿದ ನಿಪ್ಪಾಣಿ ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಅವರು ಎರಡು ಕಡೆ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ತಮ್ಮ ಪ್ರತಿಷ್ಠೆ ಹೊರಹಾಕಿದ್ದಾರೆ.

ಘಟಾನುಘಟಿಗಳ ಸೋಲು:

ಪುರಸಭೆಯಲ್ಲಿ ಹಲವು ವರ್ಷಗಳಿಂದ ತಮ್ಮ ಅಧಿಪತ್ಯ ಸ್ಥಾಪಿಸಿದ್ದ ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷ ನರೇಂದ್ರ ನೇರ್ಲಿಕರ, ಪ್ರಭಾಕರ ಈರಪ್ಪಾ ಕೋರೆ ಕಾಂಗ್ರೆಸ್‍ನ ಸೋಲುಂಡಿದ್ದರೆ, ನಾಗೇಶ ತುಕಾರಾಮ ಕಿವಡ, ಸುಕನ್ಯಾ ಬಾಬು ಸಮ್ಮತಶೆಟ್ಟಿ, ಅಕ್ರಂ ಅರ್ಕಾಟೆ, ಲಿಯಾಖತ್ ಡೊಂಗರಕ್ಕೆ, ಸಂದೀಪ ಶೇರಖಾನೆ, ರವೀಂದ್ರ ಅಪ್ಪಾಸಾಹೇಬ ಮಾಳಿ ಪರಾಭವಗೊಂಡಿದ್ದಾರೆ.

ಮಾಜಿ ಅಧ್ಯಕ್ಷರಿಗೆ ಸೋಲು:

 ಚಿಕ್ಕೋಡಿ ತಾಲೂಕಿನ ಸದಲಗಾ ಪುರಸಭೆ ಅಧ್ಯಕ್ಷರಾಗಿದ್ದ ಬಸವರಾಜ ಅನ್ನಾಸಾಹೇಬ ಗುಂಡಕಲ್ಲೆ ಸೋಲು ಅನುಭವಿಸಿದ್ದು, ಕಾಂಗ್ರೆಸ್ ತೊರೆದು ಇತ್ತೀಚಿಗೆ ಬಿಜೆಪಿ ಸೇರ್ಪಡೆಗೊಂಡಿದ್ದ ಅನ್ನಾಸಾಹೇಬ ಗುಂಡಕಲ್ಲೆ ಅವರ ಪುತ್ರರಾಗಿದ್ದಾರೆ.
loading...