ಅಭಿಪ್ರಾಯ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ: ಗುಡಸಿ

0
97

ಕನ್ನಡಮ್ಮ ಸುದ್ದಿ-ಹಾರೂಗೇರಿ: ಸ್ಪರ್ಧಾತ್ಮಕ ಇಂದಿನ ಯುಗದಲ್ಲಿ ಏಡ್ಸ್‌ ಎಂಬುದು ಹೆಮ್ಮಾರಿ ರೋಗವಾಗಿದೆ, ಪ್ರತಿಯೊಬ್ಬ ವಿದ್ಯಾರ್ಥಿ/ನಿಯರು ಏಡ್ಸ್‌ ಎಂಬ ಪೆಡಂಭೂತವನ್ನು ಕಿತ್ತೊಗೆಯಲು ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕೆಂದು ಬೆಳಗಾವಿಯ ರೆಡ್‌ಕ್ರಾಸ್‌ ಸಂಸ್ಥೆಯ ಕಾರ್ಯಕಾರಣಿ ಸದಸ್ಯ ಡಾ.ಸಿ.ಆರ್‌ ಗುಡಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ವಿಶ್ವಏಡ್ಸ್‌ ದಿನಾಚರಣೆಯ ಅಂಗವಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ರೆಡ್‌ಕ್ರಾಸ್‌ ಸಂಸ್ಥೆ, ರೋಟರಿ ಕ್ಲಬ್‌, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್‌, ಜನಜಾಗೃತಿ ಗೆಳೆಯರ ಬಳಗ, ಪುರಸಭೆ ಸುಧಾರಣಾ ಸಮಿತಿ, ಪೊಲೀಸ್‌ ಇಲಾಖೆ ಸೇರಿದಂತೆ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವಕ-ಯುವತಿಯರಲ್ಲಿ ಸಹನ ಶೀಲತೆ ಹಾಗೂ ಆಮಿಷಗಳಿಗೆ ಬಲಿಯಾಗದೇ ಸಂಯಮದಿಂದ ತಮ್ಮ ಬಾಳನ್ನು ಕಟ್ಟಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಆರೋಗ್ಯಕರ ವಾತಾವರಣ ಉಂಟಾಗಿ ಸರ್ವಾಂಗೀಣ ಸಮಾಜಿಕ ಅಭಿವೃದ್ಧಿ ಸಾಧಿಸಬಹುದಾಗಿದೆ ಎಂದು ಸಿ.ಆರ್‌ ಗುಡಸಿ ಮಾರ್ಗದರ್ಶನ ನೀಡಿದರು.

ಕು.ಪ್ರಭಾವತಿ ಬ್ರಹ್ಮಕುಮಾರಿ ಮಾತನಾಡಿ, ನೈತಿಕ ಬದುಕು ಅತ್ಯಅಮೂಲ್ಯ ಕಾರಣ ಎಲ್ಲರೂ ನೈತಿಕವಾಗಿ ಬದುಕಲು ಶ್ರಮಪಡಬೇಕು ಎಂದು ತಿಳಿಸಿದರು.

ವಿಶ್ವ ಏಡ್ಸ್‌ ದಿನಾಚರಣೆ ನಿಮಿತ್ಯ ಮುಂಜಾನೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪಟ್ಟಣದ ಪ್ರಮುಖ ಬಿದಿಗಳಲ್ಲಿ ನಿಮ್ಮನಡೆ ಏಡ್ಸ್‌ತಡೆ, ಏಡ್ಸ್‌ ನಿಗ್ರಹಿಸುವುದು ನಿಮ್ಮಕೈಯಲ್ಲಿದೆ, ಸುರಕ್ಷಿತ ಲೈಗಿಂಕತೆ ಅತ್ಯವಶ್ಯಕ ಎಂಬ ಮುಂತಾದ ವಾಕ್ಯ ಘೋಷಣೆಗಳೊಂದಿಗೆ ಶಾಲಾ ಮಕ್ಕಳು ಹಾಗೂ ಪಟ್ಟಣದ ಎಲ್ಲ ಅಧಿಕಾರಿಗಳು, ಸದಸ್ಯರು ಘೋಷಣೆ ಕೂಗುತ್ತಾ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ್ಯೆ ಕಲಾವತಿ ನಡೋಣಿ ಮುಖ್ಯಾಧಿಕಾರಿ ಜೆ.ವ್ಹಿ ಹಣ್ಣಿಕೇರಿ, ಎಮ್‌.ಬಿ ಬೋರನ್ನವರ, ವೈದ್ಯಾಧಿಕಾರಿ ಸೋಮಶೇಖರ ಪಾಟೀಲ, ಶ್ರೀಶೈಲ ದಾಶ್ಯಾಳ, ಶಂಕರ ಪಾಗೆ, ಸದಾಶಿವ ಗಸ್ತಿ, ಹುಸೇನಸಾಬ ಜಮಾದಾರ, ವಸಂತ ಲಾಳಿ, ಸದಾಶಿವ ಹಡಪದ, ಹಣಮಂತ ಕುರಿ, ಹಣಮಂತ ಅಥಣಿ, ಸರದಾರ ಜಮಾದರ, ಜಗದೀಶ ಕುಲಕರ್ಣಿ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿಯವರು, ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here