ಅಭಿವೃದ್ಧಿಗಾಗಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಿ: ಶಾಸಕಿ ಶಾರದಾ

0
26

ಕನ್ನಡಮ್ಮ ಸುದ್ದಿ-ಕುಮಟಾ: ನನ್ನ ಹಿಂದಿನ ಅಧಿಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಎಂದೂ ಆಗದ ಅಭಿವೃದ್ದಿ ಕಾರ್ಯಗಳನ್ನು ಮಾಡಿz್ದೇನೆ. ಪುರಸಭೆ ವ್ಯಾಪ್ತಿಯ ಅಭಿವೃದ್ಧಿಗೂ ವಿಶೇಷ ಅನುದಾನ ತಂದುಕೊಟ್ಟಿz್ದೇನೆ. ಹೀಗಾಗಿ ಪುರಸಭೆಯನ್ನು ಇನ್ನಷ್ಟು ಅಭಿವೃದ್ಧಿಗೆ ಮತದಾರರು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಿ, ಆಯ್ಕೆ ಮಾಡಬೇಕು ಎಂದು ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಮನವಿ ಮಾಡಿದರು.
ಅವರು ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮಿಶ್ರ ಸರ್ಕಾರವಿದೆ. ಉಸ್ತುವಾರಿ ಸಚಿವ ಆರ್‌ ವಿ ದೇಶಪಾಂಡೆ ಅವರಿದ್ದಾರೆ. ಹೀಗಾಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರ, ಸಚಿವರು ನಿಶ್ಚಿತವಾಗಿ ಅಭಿವೃದ್ಧಿ ಮನೋಭಾವನೆಯನ್ನು ಹೊಂದಿರುತ್ತಾರೆ. ನನ್ನ ಅಧಿಕಾರದ ಐದು ವರ್ಷಗಳ ಅವಧಿಯಲ್ಲಿ ಐಟಿಐ ಕಾಲೇಜ್‌, ಕೃಷಿ ಡಿಪ್ಲೋಮಾ ಕಾಲೇಜ್‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ ಕಟ್ಟಡ, ಸರ್ಕಾರಿ ಆಸ್ಪತ್ರೆಯನ್ನು ನೂರು ಹಾಸಿಗೆಗೆ ಮೇಲ್ದರ್ಜೆಗೇರಿಸಿದ್ದೇನೆ. ಸ್ಯ್ಕಾನಿಂಗ್‌, ಎಕ್ಸರೆ, ಡಯಾಲಿಸಸ್‌ ಮಶೀನಗಳ ಅಳವಡಿಕೆ, ನಗರೋತ್ಥಾನ ಕಾಮಗಾರಿಗಳಿಗೆ ಅನುದಾನ, ಕಿತ್ತೂರು ಚೆನ್ನಮ್ಮ ಪಾರ್ಕ್‌ಗೆ 30 ಲಕ್ಷ ರೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ದಿಗೆ ಅನುದಾನ , ಶೇಷಾದ್ರಿಪುರದಲ್ಲಿ ಇಕೋ ಪಾರ್ಕ್‌ಗೆ ಅನುದಾನ, ಮೀನು ಮಾರುಕಟ್ಟೆ ಸುಸಜ್ಜಿತ ಕಟ್ಟಡಕ್ಕೆ 90 ಲಕ್ಷ ರೂ ಅನುದಾನ ಹೀಗೆ ಮೂಲ ಸೌಕರ್ಯಗಳ ಸೌಲಭ್ಯಗಳು ಸೇರಿದಂತೆ ಸುಮಾರು 1200 ಕೋಟಿ ರೂ ಗಳ ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ನಮ್ಮ ಪಕ್ಷದ ಆಡಳಿತ ಪುರಸಭೆಯಲ್ಲಿದರೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಹಾಗಾಗಿ ಎಲ್ಲ ವಾರ್ಡ್‌ಗಳ ಮತದಾರರು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪುರಸಭೆಯಲ್ಲಿ ಕಾಂಕ್ರೆಸ್‌ ಆಡಳಿತ ನಡೆಸಲು ಸಹಕಾರ ನೀಡಬೇಕು. ಅಲ್ಲದೇ ಮತದಾರರು ಕಾಂಗ್ರೆಸ್‌ನನ್ನು ಬೆಂಬಲಿಸಬೇಕೆಂದು ವಿನಂತಿಸಿದರು.
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿ ಎಲ್‌ ನಾಯ್ಕ ಮಾತನಾಡಿ, ಕಾಂಗ್ರೆಸ್‌ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹೆಚ್ಚಿನ ಹೊಸ ಮುಖಗಳಿವೆ. ಹಿಂದಿನ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸುವವರಿದ್ದಾರೆ. ಈಗಾಗಲೇ ಕಾಂಗ್ರೆಸ್‌ ಅಭ್ಯರ್ಥಿಯೊಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ಅಭಿವೃದ್ಧಿಗೆ ಮತದಾರರು ಈ ಬಾರಿ ಪುರಸಭೆ ಆಡಳಿತವನ್ನು ಕಾಂಗ್ರೆಸ್‌ ಪಕ್ಷಕ್ಕೆ ನೀಡುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಪುರಸಭೆ ನಿಕಟಪೂರ್ವ ಅಧ್ಯಕ್ಷ ಮಧುಸೂಧನ ಶೇಟ್‌ ಮಾತನಾಡಿ, ಪುರಸಭೆಗೆ ಅಧ್ಯಕ್ಷನಾದ ನನ್ನ ಅಲ್ಪ ಅವಧಿಯಲ್ಲಿ ರಸ್ತೆಗಳ ಸುಧಾರಣೆಗೆ 5.93 ಕೋಟಿ ರೂ ಖರ್ಚು ಮಾಡಿ, ಅಭಿವೃದ್ಧಿಪಡಿಸಿz್ದೇನೆ. ಪಟ್ಟಣದಲ್ಲಿ ಈಗಾಗಲೇ 22 ಮೀ ರಸ್ತೆಗಳ ಅಗಲವನ್ನು 13 ಮೀ.ಗೆ ತಗ್ಗಿಸಲಾಗಿದೆ. ಮನೆಗಳ ರಚನೆಗೆ ಅನುಮತಿ ಸರಳೀಕರಣಗೊಳಿಸಲಾಗಿದೆ. ನೀರು ಸಮರ್ಪಕವಾಗಿ ಪೂರೈಸಲು ಸಕಲ ಸೌಲಭ್ಯಗಳನ್ನು ಮಾಡಲಾಗಿದೆ. ಸ್ವಚ್ಛತೆ ಎಲ್ಲೆಲ್ಲೂ ಕಾಪಾಡಿಕೊಳ್ಳಲಾಗುತ್ತಿದೆ. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ. ಪಟ್ಟಣದ ಅಭಿವೃದ್ಧಿ ಮತ್ತು ಪಾರದರ್ಶಕ ಆಡಳಿತ ನಡೆಸಲು ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಯುವ ಮುಖಂಡ ರವಿಕುಮಾರ ಮೋಹನ ಶೆಟ್ಟಿ, ಜಿ ಪಂ ಸದಸ್ಯ ರತ್ನಾಕರ ನಾಯ್ಕ, ಹೊನ್ನಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಪ ತೆಂಗೇರಿ, ವೀಕ್ಷಕ ಯೋಗೇಶ ರಾಯ್ಕರ್‌, ಕಾಂಗ್ರೆಸ್‌ ಪ್ರಮುಖರಾದ ಹೊನ್ನಪ್ಪ ನಾಯಕ, ನಾಗೇಶ ನಾಯ್ಕ, ಪ್ರಾನ್ಸಿಸ್‌ ಫರ್ನಾಂಡಿಸ್‌, ಕೃಷ್ಣಾನಂದ ವೆರ್ಣೇಕರ್‌, ಮೈಕಲ್‌, ಸುರೇಖಾ ವಾರೆಕರ್‌, ತಾರಾ ಗೌಡ, ಪಕ್ಷದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ಉಪಸ್ಥಿತರಿದ್ದರು.

loading...