ಅಭ್ಯಾಸಕ್ಕೆ ಮರಳಿದ ವಿಜಯ್‌ ಶಂಕರ್‌

0
11

ಲಂಡನ್‌:- ಗಾಯದಿಂದಾಗಿ ಮೊದಲ ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದ ಭಾರತ ತಂಡದ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅವರು ಇಂದು ಬೆಳಗ್ಗೆ ನೆಟ್ಸ್‌ ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು.
ಆಲ್‌ರೌಂಡರ್ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಅಪ್ಲೋಡ್‌ ಮಾಡಿದೆ. “ದಿ ಓವಲ್‌ ಅಂಗಳದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ವೇಳೆ ಗಾಯಗೊಂಡಿದ್ದ ವಿಜಯ್‌ ಶಂಕರ್‌ ಅವರ ಇಂದು ಬ್ಯಾಟಿಂಗ್‌ ಅಭ್ಯಾಸ ನೋಡಲು ಸಂತಸವಾಗುತ್ತಿದೆ” ಎಂದು ಬಿಸಿಸಿಐ ಟ್ವಿಟ್‌ ಮಾಡಿದೆ.
ಕಳೆದ ಶುಕ್ರವಾರ ಮೊದಲನೇ ಅಭ್ಯಾಸ ಅವಧಿಯಲ್ಲಿ ಖಲೀಲ್‌ ಅಹಮದ್‌ ಅವರ ಎಸೆತದಲ್ಲಿ ಫುಲ್‌ ಶಾಟ್‌ ಹೊಡೆಯಲು ಯತ್ನಿಸಿದ್ದ ವಿಜಯ್‌ ಶಂಕರ್‌ ಅವರು ತನ್ನ ಮುಂದೋಳಿಗೆ ಚೆಂಡು ತಗುಲಿಸಿಕೊಂಡು ಗಾಯಗೊಂಡಿದ್ದರು. ಇದರಿಂದಾಗಿ ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಅಭ್ಯಾಸ ಪಂದ್ಯಕ್ಕೆ ಅವರು ಲಭ್ಯರಾಗಿರಲಿಲ್ಲ. ಈ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಭಾರತ ತಂಡ ಇಂದು ಬಾಂಗ್ಲಾದೇಶದ ವಿರುದ್ಧ ಅಂತಿಮ ಅಭ್ಯಾಸವಾಡಲಿದೆ. ಇದಾದ ಬಳಿಕ ಜೂನ್‌ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಐಸಿಸಿ ವಿಶ್ವಕಪ್‌ ಮೊದಲನೇ ಪಂದ್ಯವಾಡಲಿದೆ.

loading...