ಅಮರೂತಾ ಕಂಪನಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ

0
24

ನಾಲತವಾಡ: ಭಾರಿ ಪ್ರಮಾಣದ ಸ್ಪೋಟಕವನ್ನು ಬಳಿಸಿ ಕಾಲುವೆ ಕಾಮಗಾರಿ ನಿರ್ವಹಿಸುತ್ತಿರುವ ಅಮರೂತಾ ಕಂಪನಿಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಮೀಪದ ನಾಗಬೇನಾಳ ಗ್ರಾಮದಿಂದ ನಾಗಬೇನಾಳ ತಾಂಡಾ ರಸ್ತೆ ಮಧ್ಯದಲ್ಲಿ ಬೂದಿಹಾಳ ಪೀರಾಪೂರ ಏತ ನೀರಾವರಿ ಕಾಮಗಾರಿಯ ಪೈಪ ಜೋಡನೆ ಕಾರ್ಯ ಮಾಡುತ್ತಿರುವ ಅಮರೂತಾ ಕಂಪನಿಯವರು ಸುತ್ತ ಮುತ್ತ ಇರುವ ಮನೆಗಳನ್ನು ಲೆಕ್ಕಿಸದೇ ಹಾಗೂ ಹೊಲದಲ್ಲಿ ಕೂಲಿಕಾರರನ್ನು ಲೆಕ್ಕಿಸದೇ ಭಾರಿ ಪ್ರಾಮಾಣದ ಸ್ಪೋಟಕವನ್ನು ಬಳಿಸಿ ಕಲ್ಲು ತೆಗೆಯುತಿದ್ದಾರೆ. ಸೋಮವಾರದಂದು ಮೂರು ಭಾರಿ ಪ್ರಮಾಣದ ಸ್ಪೋಟಕ ಬಳಿಸಿದ್ದರಿಂದ ಸುತ್ತ ಮುತ್ತ ಇರುವ ಮನೆಗೆ ಕಲ್ಲು ಬಂದು ಬಿದ್ದೀವೆ ಹಾಗೂ ಹೊಲದಲ್ಲಿ ದೊಡ್ಡ ಗಾತ್ರದ ಕಲ್ಲುಗಳು ಬಿದ್ದಿರುವದರಿಂದ ಭಯದ ವಾತಾವರ್ಣ ನಿರ್ಮಾಣವಾಗಿದೆ, ಗ್ರಾಮದ ಸಮೀಪ ಸ್ಪೋಟಕ ವಸ್ತುಗಳನ್ನು ಬಳಸಬಾರದು ಎಂದು ಕನಿಷ್ಠ ಅರಿವು ಸಂಭಂದ ಪಟ್ಟ ಅಧಿಕಾರಿಗಳಿಗೆ ಇಲ್ಲ, ಈ ಕಾಮಗಾರಿಗೆ ಸಂಭಂದಿಸಿದಂತೆ ಇಲಾಖೆಯ ಜೆಇ ಸ್ಥಳದಲ್ಲಿ ಇರುವದಿಲ್ಲ ಇದರಿಂದ ಗುತ್ತಿಗೆದಾರ ತನಗೆ ಇಷ್ಠ ಬಂದಂತೆ ಕಾಮಗಾರಿ ಮಾಡುತಿದ್ದಾರೆ, ಈ ಬಗ್ಗೆ ಸಂಭಂದ ಪಟ್ಟ ಅಧಿಕಾರಿಗಳಿಗೆ ಹೇಳಿದರು ಯಾವದೇ ಪ್ರಯೋಜನವಾಗಿಲ್ಲ, ಕೂಡಲೆ ಸಂಭಂದಿಸಿದ ಇಲಾಖೆಯ ಜೆಇ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿ ನಿರ್ವಹಿಸಲು ಸೂಚಿಸಬೇಕು ಮತ್ತು ಸ್ಪೋಟಕ ಬಳಸದೇ ಕಲ್ಲುಗಳನ್ನು ತೆಗೆಯುವ ವ್ಯವಸ್ಥೆ ಮಾಡಬೇಕು, ಸುತ್ತ ಮುತ್ತ ಹೊಲಗಳಲ್ಲಿ ಕೂಲಿಕಾರರು ಹಾಗೂ ರೈತರಿಗೆ ಸ್ಪೋಟಿಸಿದ ಕಲ್ಲುಗಳು ಬಿದ್ದು ಏನಾದರು ಅನಾಹುತವಾದರೆ ಇದಕ್ಕೆ ಅಧಿಕಾರಿಗಳನ್ನೆ ನೇರ ಹೊಣೆ ಮಾಡಲಾಗುವುದು ಎಂದು ಸ್ಥಳಿಯರಾದ ಮೃತ್ಯೋಂಜಯ ಮಠ, ಮೌನೇಶ ಮಾದರ, ಮಲ್ಲಯ್ಯ ಮಠ, ಬಸವರಾಜ ಮಾದರ ಎಚ್ಚರಸಿದಿದ್ದಾರೆ.

loading...