ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿ: ಪಿ.ರಾಜೀವ್‌

0
23

ಹಾರೂಗೇರಿ : ಮರಗಳನ್ನು ಕಡಿದು ನಾಶ ಮಾಡುವುದನ್ನು ಬಿಟ್ಟು ಪರಿಸರ ರಕ್ಷಣೆಗೆ ಪ್ರಾಧಾನ್ಯತೆ ಕೊಡಬೇಕು. ಗೃಹಿಣಿಯರು ಸುಲಭವಾಗಿ ಅಡುಗೆ ಮಾಡಲು ಅಡುಗೆ ಅನೀಲ ತುಂಬಾ ಸಹಾಯಕಾರಿಯಾಗಿದೆಯೆಂದು ಶಾಸಕ ಪಿ.ರಾಜೀವ್‌ ಹೇಳಿದರು.ಅವರು ಅಲಖನೂರಿನ ಶಾಸಕರ ಕಛೇರಿಯಲ್ಲಿ ಅರಣ್ಯ ಇಲಾಖೆ ರಾಯಬಾಗ ವತಿಯಿಂದ ಎಸ್‌.ಸಿ.ಪಿ ಟಿಎಸ್‌ಪಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಉಚಿತ ಅಡುಗೆ ಅನೀಲಗಳನ್ನು ವಿತರಣೆ ಮಾಡಿ ಮತನಾಡಿದರು. ಅರಣ್ಯ ಇಲಾಖೆಯಿಂದ ನಿಮಗೆ ಈ ಯೋಜನೆಯಲ್ಲಿ ಉಚಿತ ಅಡುಗೆ ಅನೀಲ ದೊರೆಯುತ್ತಿರುವುದು ಪರಿಸರ ಪ್ರೇಮ ತಮ್ಮಲ್ಲಿ ಬೆಳೆಯಲಿ ಎಂಬ ಉದ್ದೇಶಕ್ಕಾಗಿ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದ್ದ ಶಾಸಕರು ಸ್ಥಳೀಯ ಸಾರ್ವಜನಿಕ ಸಮಸ್ಯೆಗಳ ಆಹವಾಲುಗಳನ್ನು ಸ್ವೀಕರಿಸಿ ಅರ್ಜಿದಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ನೀಡುವುದಾಗಿ ಅವರು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಆನಂದ ಹಾಲವರ, ಡಿಆರ್‌ಎಫ್‌ಓ ಬಸವರಾಜ ಹನಗಂಡಿ, ಅರಣ್ಯ ರಕ್ಷಕ ಮಹಾಲಿಂಗ ಕೊಳವಿ, ಬಸವರಾಜ್‌ ಖೋತ, ಕಾಂತು ಬಾಡಗಿ, ಹನಮಂತ ಕುರಿ, ರಾಮಣ್ಣ ಕುರಿ, ಬಸವರಾಜ್‌ ಠಕ್ಕಣ್ಣವರ, ಮಾರುತಿ ಕಲ್ಯಾಣಕರ ಸಂತೋಷ ಸಿಂಗಾಡಿ, ಶಿವಾನಂದ ದಳವಾಯಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

loading...