ಅಲ್ಪಸಂಖ್ಯಾತರ ಓಲೈಕೆ ಮುಂದಾದ ಮೈತ್ರಿಕೂಟದ ಅಭ್ಯರ್ಥಿ ಅಸ್ನೊÃಟಿಕರ್: ಬಿಜೆಪಿ ಟೀಕೆ

0
9

 

ಕಾರವಾರ: ಕಾಂಗ್ರೆÃಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಅಸ್ನೊÃಟಿಕರ್ ಬಿಜೆಪಿ ಕಾರ್ಯಕರ್ತರನ್ನು ನಾಯಿಗೆ ಹೋಲಿಸಿ ತಮ್ಮ ಸಂಸ್ಕಾರವನ್ನು ಸಾರ್ವಜನಿಕರಿಗೆ ಬಹಿರಂಗ ಪಡಿಸಿದ್ದಾರೆಂದು ಬಿಜೆಪಿ ವಕ್ತಾರ ರಾಜೇಶ ನಾಯಕ ಟೀಕಿಸಿದ್ದಾರೆ.
ಇಲ್ಲಿನ ಜಿಲ್ಲಾಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೆÃಶಿಸಿ ಮಾತನಾಡಿದ ನಾಯಕ, ಬಿಜೆಪಿ ಆರೋಪಕ್ಕೆ ಉತ್ತರಿಸುವ ಬದಲು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರನ್ನು ನಾಯಿಗೆ ಹೋಲಿಸಿ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಿದ್ದಾರೆ. ಆ ಮೂಲಕ ಬಿಜೆಪಿ ಮಾಡಿದ ಆರೋಪಕ್ಕೆ ತನ್ನಲ್ಲಿ ಉತ್ತರವಿಲ್ಲ ಎಂದು ಅವರು ಒಪ್ಪಿಕೊಂಡಂತಾಗಿದೆ. ನಾಲಿಗೆ ಕುಲವನ್ನು ಹೇಳುತ್ತದೆ ಎಂಬ ದಾಸವಾಣಿಯಂತೆ ಆನಂದ ಅವರು ತನ್ನ ಸಂಸ್ಕಾರವನ್ನು ಬಹಿರಂಗ ಪಡಿಸಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಮೂರು ಪಕ್ಷಗಳನ್ನು ಬದಲಾಯಿಸುವ ಮೂಲಕ ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಆನಂದ ಅವರನ್ನು ನಾವೂ ಮಂಗನಿಗೆ ಹೋಲಿಕೆ ಮಾಡಬಹುದಿತ್ತು. ಈ ಮಂಗ ಕಾರವಾರದ ಕ್ಷೇತ್ರದಲ್ಲಿ ತನ್ನ ಮಂಗನಾಟದ ಮೂಲಕ ಇಡೀ ಕ್ಷೇತ್ರದಲ್ಲಿ ಮಂಗನ ಕಾಯಿಲೆ ಹರಡಿದ್ದರಿಂದ ಕಳೆದ ಎರಡು ಚುನಾವಣೆಯಲ್ಲಿ ಜನ ತಕ್ಕ ಚುಚ್ಚು ಮದ್ದು ನೀಡಿ ಮನೆಯಲ್ಲಿ ಕುಳ್ಳಿರಿಸಿದ್ದಾರೆ. ಆದರೆ ಈ ಮಂಗ ಈಗ ಮಂಗನಕಾಯಿಲೆಯನ್ನು ಇಡೀ ಕ್ಷೇತ್ರಕ್ಕೆ ಹರಡಲು ಪ್ರಯತ್ನಿಸುತ್ತಿದ್ದು ಅದಕ್ಕೆ ಪ್ರತಿಬಂಧಕ ಚುಚ್ಚುಮದ್ದು ಜಿಲ್ಲೆಯ ಜನ ನೀಡಲಿದ್ದಾರೆ ಎಂದು ನಾವು ಹೇಳಬಹುದಾದರೂ ನಾವು ಆ ಮಟ್ಟಕ್ಕೆ ಇಳಿಯುತ್ತಿಲ್ಲ ಎಂದು ಟಾಂಗ್ ನೀಡಿದರು. ಮುಸ್ಲಿಂರ ಓಲೈಕೆ: ಹಿಂದುಗಳ ಕುರಿತಾಗಿ ಕೇವಲವಾಗಿ ಮಾತನಾಡುತ್ತ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಅಸ್ನೊÃಟಿಕರ್ ಜಿಲ್ಲೆಯ ಭಟ್ಕಳ ಮೂಲದ ಯಾಸೀನ್ ಭಟ್ಕಳ, ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ರಂಥಹ ಜಾಗತಿಕ ಭಯೋತ್ಪಾದಕರು ಅಫಘಾನಿಸ್ಥಾನ, ಸಿರಿಯಾ ಹಾಗೂ ಭಾರತದಲ್ಲಿ ಭಯೋತ್ಪಾದನೆ ನಡೆಸುತ್ತಿದ್ದರೂ ಅವರ ವಿರುದ್ಧ ಚಕಾರ ಎತ್ತದೆ ಹಿಂದುಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಕೋಮು ಸೌಹಾರ್ದದ ಮಾತನಾಡುತ್ತಿದ್ದಾರೆ. ಜಿಲ್ಲೆಯ ಭಟ್ಕಳ ಮೂಲದ ಭಯೋತ್ಪಾದಕರು ಭಾರತದಲ್ಲಿ ಹಲವು ಕಡೆ ಬಾಂಬ್ ದಾಳಿ ನಡೆಸಿ ಹಲವು ಅಮಾಯಕ ಹಿಂದುಗಳ ಸಾವಿಗೆ ಕಾರಣವಾದರೂ ಆನಂದ ಆ ಬಗ್ಗೆ ಚಕಾರವೆತ್ತಿಲ್ಲ. ಆದರೆ ಹಿಂದು ಯುವಕರು ಜಿಲ್ಲೆಯಲ್ಲಿ ಗಲಭೆನಡೆಸಿ ರಕ್ತಪಾತವನ್ನು ನಡೆಸುತ್ತಿದ್ದಾರೆ ಎಂಬರ್ಥದಲ್ಲಿ ಎಲ್ಲ ಕಡೆ ಭಾಷಣ ಮಾಡಿ ಜಿಲ್ಲೆಯ ಹಿಂದುಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಅಸ್ನೋಟಿಕರ ಅವರಿಂದ ನಿರಂತರವಾಗಿ ನಡೆದಿದೆ. ತನ್ನ ಹಿಂದೂ ವಿರೋಧಿ ನೀತಿಯಿಂದ ಅಲ್ಪಸಂಖ್ಯಾತರ ಓಟು ಗಳಿಸುವ ಆನಂದ ಅವರು ಭಟ್ಕಳ ಮೂಲದ ಭಯೋತ್ಪಾದಕರ ಬಗ್ಗೆ ತನ್ನ ಅಭಿಪ್ರಾಯವನ್ನು ತಿಳಿಸಬೇಕು ಹಾಗೂ ವಿನಾಕಾರಣ ಹಿಂದುಗಳ ವಿರುದ್ಧ ಕಿಡಿ ಕಾರಿದ್ದ ಬಗ್ಗೆ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದರು. ತಾನು ಮಸೀದಿಯಲ್ಲಿ ನಮಾಜು ಸಲ್ಲಿಸುತ್ತಿರುವ ಫೋಟೊಗಳನ್ನು ತನ್ನ ಫೇಸ್ ಬುಕ್ ನಲ್ಲಿ ಹಾಕುವುದರ ಮೂಲಕ ತಾನು ಕಪಟ ಹಿಂದು ಎಂಬುದನ್ನು ಅಸ್ನೊÃಟಿಕರ್ ಬಹಿರಂಗ ಪಡಿಸಿದ್ದಾರೆ. ತನ್ನನ್ನು ತಾನು ಹಿಂದು ಎಂದು ತನ್ನ ಚುನಾವಣಾ ಅಫಿಡೆವಿಟ್ ನಲ್ಲಿ ನಮೂದಿಸಿದ ಆನಂದ ಅವರು ಮಸೀದಿಯಲ್ಲಿ ನಮಾಜು ಮಾಡುತ್ತಿರುವುದು ಯಾರನ್ನು ಓಲೈಸಲಿಕ್ಕೆ ಎಂಬುದನ್ನು ಸ್ಪಷ್ಟ ಪಡಿಸಬೇಕು. ನಾಮ ಹಾಕಿಕೊಳ್ಳುವವರನ್ನು, ಕೇಸರಿ ಬಟ್ಟೆ ಧರಿಸುವವರನ್ನು ಕೀಳಾಗಿ ಹಾಗೂ ಹೀನಾಯವಾಗಿ ನಿಂದಿಸುವ ಆನಂದ ಅವರು ಮಸೀದಿಯಲ್ಲಿ ನಮಾಜು ಮಾಡುತ್ತಿರುವ ಹಿನ್ನಲೆ ಏನು? ಇದು ಮುಸ್ಲಿಂ ಮತದಾರರ ಮೇಲೆ ಪ್ರಭಾವ ಬೀರುವ ತಂತ್ರವಲ್ಲವೇ? ಜಾತ್ಯಾತೀತ ಎಂದು ತೋರಿಕೊಳ್ಳಲು ಮಸೀದಿಗೆ ಹೋಗಿ ನಮಾಜು ನಡೆಸುವುದು ಅನಿವಾರ್ಯವೇ? ಹಾಗಾದರೆ ಆನಂದ ಅವರು ತಮ್ಮ ಸಭೆಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಿರುವ ಎಷ್ಟು ಮುಸ್ಲಿಂ ನಾಯಕರು ದೇವಾಲಯಗಳಲ್ಲಿ ಮೂರ್ತಿ ಪೂಜೆಗೆ ಸಿದ್ದರಿದ್ದಾರೆ ಎಂಬುದನ್ನು ಆನಂದ ಅವರು ಹೇಳಬೇಕು. ಕೇವಲ ಹಿಂದುಗಳನ್ನು ದೂಷಿಸುವ ಮೂಲಕ ಓಟು ಗಳಿಸುವ ಪ್ರಯತ್ನದಲ್ಲಿರುವ ಅವರು ತಮಗೆ ಹಿಂದೂಗಳ ಮತ ಬೇಡವೇ ಎನ್ನುವುದನ್ನು ಸ್ಪಷ್ಟ ಪಡಿಸಲಿ ಎಂದು ಸವಾಲು ಹಾಕಿದರು.

ಹಣಕೋಣ ದೌರ್ಜನ್ಯ: ಹಣಕೋಣದಲ್ಲಿ ನಡೆದ ಪೊಲೀಸ್ ದೌರ್ಜನ್ಯಕ್ಕೆ ತಾನು ಕಾರಣನಲ್ಲ. ಅದಕ್ಕೆ ಆಗಿನ (೨೦೧೦-೧೧ ರಲ್ಲಿ) ಕೇಂದ್ರ ಸರಕಾರ ಕಾರಣ. ಈ ಯೋಜನೆಗೆ ಅನುಮತಿಯನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ಆಗಿನ ಕೇಂದ್ರಸರಕಾರ ನೀಡಿತ್ತು ಎಂದು ಆರೋಪಿಸಿ ಅಸ್ನೊÃಟಿಕರ್ ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಹಣಕೋಣದಲ್ಲಿ ಪೋಲಿಸ್ ದೌರ್ಜನ್ಯ ನಡೆದಾಗ ಕೇಂದ್ರದಲ್ಲಿ ಸೋನಿಯಾ ನೇತೃತ್ವದ ಯುಪಿಎ (ಕಾಂಗ್ರೆಸ್) ಸರಕಾರವಿತ್ತು. ಕಾರವಾರದ ಆಗಿನ ಶಾಸಕ ಆನಂದ ಅಸ್ನೋಟೀಕರ ರಾಜ್ಯದ ಸರಕಾರದಲ್ಲಿ ಮಂತ್ರಿಯಾಗಿದ್ದರು. ಈಗ ಆನಂದ ಅವರ ಜೆಡಿಎಸ್ ಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೇ ಚುನಾವಣೆಯಲ್ಲಿ ಬೆಂಬಲ ನೀಡುತ್ತಿದೆ. ಹೀಗಿರುವಾಗ ತನ್ನ ಹಣಕೋಣದ ಪಾಪದ ಮೂಟೆಯನ್ನು ಆನಂದ ಅವರು ಬಹಿರಂಗವಾಗಿ ಕಾಂಗ್ರೆಸ್ ಪಕ್ಷ ಹಾಗೂ ಅದರ ಮುಖಂಡ ಮಾಜಿ ಶಾಸಕ ಸತೀಶ ಸೈಲ್ ಅವರ ಹೆಗಲಿಗೆ ಆನಂದ ಅವರು ಜಾರಿಸುತ್ತಿದ್ದಾರೆ. ಅಲ್ಲದೇ ಆಗ ವಿರೋಧ ಪಕ್ಷದಲ್ಲಿ ಇದ್ದ ಸಂಸದ ಅನಂತ ಕುಮಾರ ಹಾಗೂ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮೈತ್ರಿಧರ್ಮವನ್ನು ಪಾಲಿಸುವುದಾಗಿ ಹೇಳುತ್ತಲೇ ಸೈಲ್‌ಗೆ ಖೆಡ್ಡಾ ತೋಡುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್ ಮುಖಂಡರು ಹಾಗೂ ಆಗಿನ ಕಾಂಗ್ರೆಸ್ಸಿನ ಕೇಂದ್ರ ಸರಕಾರ ಇಂಡ್-ಭಾರತ ಕಂಪನಿಯ ಆಮಿಷಕ್ಕೆ ಒಳಗಾಗಿ ತನ್ನ ವಿರೋಧವಿದ್ದಾಗಲೂ ಆಗಿನ ಕಾಂಗ್ರೆಸ್ ನೇತೃತ್ವದ ಕೇಂದ್ರಸರಕಾರ ಈ ಯೋಜನೆಗೆ ಮಂಜೂರಿ ನೀಡಿತ್ತು ಹಾಗೂ ಜನರ ಮೇಲೆ ದೌರ್ಜ್ಯನ್ಯ ನಡೆಸಿತ್ತು ಎಂಬ ಆನಂದ ಅಸ್ನೋಟಿಕರ ಪರೋಕ್ಷ ಆರೋಪಕ್ಕೆ ಕಾಂಗ್ರೆಸ್ಸಿನ ಸಚಿವ ಆರ್ ವಿ ದೇಶಪಾಂಡೆ ಹಾಗೂ ಮಾಜಿ ಶಾಸಕ ಸೈಲ್ ಸ್ಪಷ್ಟನೆ ನೀಡಲಿ. ಅಲ್ಲದೇ ಈ ದೌರ್ಜ್ಯನ್ಯದ ಬಗ್ಗೆ ಮಾತನಾಡುತ್ತ ಅದನ್ನು ಪ್ರತಿಭಟಿಸದಂತೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ಅನಂತ ಕುಮಾರ ಅವರು ತನ್ನ ಮೇಲೆ ಒತ್ತಡ ಹೇರಿದ್ದರು ಎಂದು ಆನಂದ ಸುಳ್ಳು ಹೇಳಿದ್ದಾರೆ. ಇದು ನಿಜವೇ ಆದಲ್ಲಿ ಆನಂದ ಹಣಕೋಣದ ಸಾತೇರಿ ದೇವಾಲಯದ ಎದುರು ನಿಂತು ಆಣೆ-ಪ್ರಮಾಣ ಮಾಡಿ ಹೇಳಲಿ. ಇಲ್ಲದಿದ್ದಲ್ಲಿ ಸಾರ್ವಜನಿಕರ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜೇಶ ನಾಯ್ಕ ಸಿದ್ದರ, ಕಿಶನ ಕಾಂಬ್ಳೆ ಇನ್ನಿತರರು ಇದ್ದರು.

loading...