ಆಮಿಷಗಳಿಗೆ ಒಳಗಾಗದೇ ಮತ ಚಲಾಯಿಸಿ

0
8

ಕನ್ನಡಮ್ಮ ಸುದ್ದಿ-ಧಾರವಾಡ: ಸರ‍್ವತ್ರಿಕ ಲೋಕಸಭಾ ಚುನಾವಣೆಗಳಲ್ಲಿ ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತಚಲಾಯಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕರಿಗೂ ಒಂದು ಮತದ ಪವಿತ್ರವಾದ ಹಕ್ಕನ್ನು ಕಲ್ಪಿಸಿದೆ. ಮತದಾನ ಮಾಡುವುದು ಎಲ್ಲರ ರ‍್ತವ್ಯವೂ ಆಗಿದೆ. ಯಾರೊಬ್ಬರೂ ಮತದಾನದಿಂದ ಹೊರಗುಳಿಯಬಾರದು ಎಂದು ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.
ಕಮಲಾಪುರ ಸುತ್ತಮುತ್ತಲಿನ ಮತಗಟ್ಟೆ ಸಂಖ್ಯೆ ೧೪೦,೧೪೫, ೧೫೮ ಹಾಗೂ ೨೧೬ ಮತ್ತು ಹುಬ್ಬಳ್ಳಿಯ ಗಿರಣಿ ಚಾಳ ಸುತ್ತಮುತ್ತಲಿನ ಮತಗಟ್ಟೆ ಸಂಖ್ಯೆ ೧೮೯,೧೯೦,೧೯೧ ಹಾಗೂ ೧೯೨ ರ ವ್ಯಾಪ್ತಿಯ ಮತದಾರರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತನಾಡಿದರು.
ಭಾರತದ ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುತ್ತಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿರುವ ಭಾರತದಲ್ಲಿ ಕಳೆದ ೭೦ ರ‍್ಷಗಳಿಂದ ನಿಷ್ಪಕ್ಷಪಾತ ಚುನಾವಣೆ ನಡೆಸಿಕೊಂಡು ಬರುತ್ತಿರುವ ಹಿರಿಮೆ ನಮ್ಮ ಚುನಾವಣಾ ಆಯೋಗಕ್ಕೆ ಇದೆ. ಮತದಾರರು ಯಾವುದೇ ಪ್ರಭಾವ, ಆಸೆ,ಆಮಿಷಗಳಿಗೆ ಒಳಗಾಗದೇ ಸ್ವವಿವೇಚನೆಯಿಂದ ತಮ್ಮ ಹಕ್ಕು ಚಲಾಯಿಸಬೇಕು.ಹಿರಿಯ ನಾಗರಿಕರು,ವಿಕಲಚೇತನರಿಗೆ ಮತಗಟ್ಟೆಗಳಿಗೆ ಬರಲು ಸೌರ‍್ಯಗಳನ್ನು ಕಲ್ಪಿಸಲಾಗುವುದು ಎಂದರು.
ಉಪವಿಭಾಗಾಧಿಕಾರಿ ಮಹ್ಮದ್‌ ಜುಬೇರ, ಸಹಾಯಕ ಪೊಲೀಸ್‌ ಆಯುಕ್ತ ಎಂ.ಎನ್‌.ರುದ್ರಪ್ಪ, ಧಾರವಾಡ ತಹಸೀಲ್ದಾರ ಪ್ರಕಾಶ ಕುದರಿ,ಹುಬ್ಬಳ್ಳಿ ತಹಸೀಲ್ದಾರ ಶಶಿಧರ ಮಾಡ್ಯಾಳ, ಪೊಲೀಸ್‌ ಇನ್ಸಪೆಕ್ಟರ್‌ ಗಳಾದ ಮಾಲತೇಶ ಬಸಾಪುರ, ಲಕ್ಷೀಕಾಂತ ತಳವಾರ ಇದ್ದರು.

loading...