ಆಮೆ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

0
41

ಬೆಳಗಾವಿ

ಎರಡು ಜೀವಂತವಾಗಿರುವ ಆಮೆಗಳನ್ನು ಮಹಾರಾಷ್ಟ್ರಕ್ಕೆ ಸಾಗಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರ ದಳಸ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ತಾಲೂಕಿನ ಕಟ್ಟಣಬಾವಿ ಗ್ರಾಮದ ಅರ್ಜುನ ನಾಯಿಕ (45) ಬಂಧಿತ ಆರೋಪಿ. ಅರಣ್ಯ ಪ್ರದೇಶದಿಂದ ಎರಡು ಆಮೆಗಳನ್ನು ತಂದು ತನ್ನ ಮನೆಯ ನೀರಿನ ಟ್ಯಾಂಕ್ ನಲ್ಲಿ ಕೂಡಿಟ್ಟಿದ್ದ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಗ್ರಾಮದ ಹಿರಿಯರ ಸಮ್ಮುಖದಲ್ಲಿ 2.1ಕೆ.ಜಿ ಹಾಗೂ 1.6 ಕೆ.ಜಿ ತೂಕದ ಎರಡು ಆಮೆಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯ ವಿರುದ್ಧ ಕಲಂ 9, 39,44,49 ಬ(ಎ,ಬಿ,ಸಿ) 50,51 ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ನೇ ಪ್ರಕಾರ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

loading...