ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗೆ ಸಲಹೆ: ಸಾಯಿಸೃತಿ

0
20

ಕನ್ನಡಮ್ಮ ಸುದ್ದಿ-ಬೆಳಗಾವಿ: ಮಹಿಳೆರು ಸಮತೋಲನ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಡಾ. ಸಾಯಿಸೃತಿ ಹೇಳಿದರು.
ಗುರುವಾರ ಕಾಗವಾಡದ ಶಿವಾನಂದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾದ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರದಲ್ಲಿ ಮಾತನಾಡಿದ ಅವರು. ಇಂದಿನ ಮಹಿಳೆಯರು ಆರೋಗ್ಯದ ದೃಷ್ಟಿಯಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಉತ್ತಮ ಆಹಾರ ಸೇವಿಸಿ ಪೋಷಕಾಂಶಗಳು ಇರುವ ದಾನ್ಯಗಳನ್ನು ಊಟದಲ್ಲಿ ಉಪಯೋಗಿಸಬೇಕು ಅಂದಾಗ ಮಹಿಳೆ ಸದೃಡವಾಗಿ ಆರೋಗ್ಯದಿಂದ ಇರಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಪಿ ಬಿ. ನಂದಾಳೆ ವಹಿಸಿದ್ದರು. ವಿಶಾಲ ಮಾಳವದಕರ, ವೀಣಾ, ಗವೀಶ ರಾಮದುರ್ಗ, ಎಲ್ಲ ಪ್ರಾದ್ಯಾಪಕರು ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಇದ್ದರು. ಜೆ ಎನ್‌. ನಾಯ್ಕ ಸ್ವಾಗತಿಸಿದರು. ಪಿ ಬಿ. ಹವಾಲ್ದಾರ ವಂದಿಸಿದರು. ಎಸ್‌ ಎಸ್‌ ಗಣೆ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here