ಆಶ್ರಯ ಮನೆ ಹಂಚಿಕೆ ವಿಳಂಬ ಖಂಡಿಸಿ ಕರವೆ ಪ್ರತಿಭಟನೆ

0
29

ಕನ್ನಡಮ್ಮ ಸುದ್ದಿ-ನರೇಗಲ್ಲ : ಸಮೀಪದ ಜಕ್ಕಲಿ ಗ್ರಾ.ಪಂ ವತಿಯಿಂದ ಬಸವ ವಸತಿ ಯೋಜನೆಯಲ್ಲಿ ಮಂಜೂರಾದ 19 ಆಶ್ರಯ ಮನೆಗಳನ್ನು ಹಂಚಿಕೆಯಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ ಸ್ಥಳೀಯ ಕರವೆ ಕಾರ್ಯಕರ್ತರು ಗುರುವಾರ ಗ್ರಾ.ಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕರವೆ ತಾಲೂಕ ಅಧ್ಯಕ್ಷ ಉಮೇಶ ಮೇಟಿ ಮಾತನಾಡಿ, 2017-16ನೇ ಸಾಲಿನ ಬಸವ ವಸತಿ ಯೋಜನೆಯಡಿ ಜಕ್ಕಲಿ ಗ್ರಾ.ಪಂ ಗೆ 19 ಮನೆಗಳು ಮಂಜೂರಾಗಿ 8 ತಿಂಗಳು ಕಳೆದರೂ ಸಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೇಜವಾಬ್ದಾರಿ ಮಾಡುತ್ತಿದ್ದಾರೆ. ಆದ್ದರಿಂದ ತಕ್ಷಣವೇ ಗ್ರಾಮ ಸಭೆ ಕರೆದು ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಗ್ರಾ.ಪಂ ಬೀಗ ಹಾಕಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಗ್ರಾ.ಪಂ ಕಾರ್ಯದರ್ಶಿ ಎಸ್‌.ಎಫ್‌. ತಿಮ್ಮಿಶೆಟ್ಟಿಯವರಿಗೆ ಮನವಿ ಸಲ್ಲಿಸಿದರು. ಗ್ರಾಮ ಘಟಕಾಧ್ಯಕ್ಷ ಮಲ್ಲಿಕಾರ್ಜುನ ಮೂಧೋಳ, ಹನುಮಂತ ಭಜಂತ್ರಿ, ಮಂಜುನಾಥ ಆದಿ, ರುದ್ರಪ್ಪ ಬೂದಿಹಾಳ, ವಿಜಯ ತಳವಾರ, ಸಂತೋಷ ವಾಲಿ, ದಾವಲಸಾಬ ಬಾಲೇಸಾಬನವರ್‌, ನಾಗರಾಜ ಸಂಗನಬಸೇಟ್ಟೆರ, ಬಸವರಾಜ ಶಿವಶಿಂಪಿ, ರಾಜು ಮಸಲವಾಡ, ಬಸಪ್ಪ ಬಂಡಿ ಸೇರಿದಂತೆ ಇತರರಿದ್ದರು.

loading...