ಆಸ್ಪತ್ರೆಗಳಿಗೆ ಶಾಕ್ ನೀಡಿದ ಮಜ್ಜಿಗೆ

0
24

ಬೆಂಗಳೂರು, ಸೆ.15: ಇದುವರೆಗೂ ತಣ್ನಗಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಎಸ್.ಬಿ. ಮಜ್ಜಿಗೆ ಇಂದು ದಿಢೀರ್ ಕಾರ್ಯಾಚರಣೆಗೆ ಇಳಿದಿದ್ದಾರೆ.

ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿರುವ ನಗರದ ವಾಣಿ ವಿಲಾಸ್ ಆಸ್ಪತ್ರೆ ಮತ್ತು ವಿಕ್ಟೌರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಅವರು ರೋಗಿಗಳು ಹಾಗೂ ಅವರ ಸಂಬಂಧಿಕರಿಂದ ಆಹವಾಲುಗಳನ್ನು ಕೇಳಿಕೊಂಡರು. ಈ ಸಂದರ್ಭದಲ್ಲಿ ರೋಗಿಗಳು ಹಾಗೂ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳ ಬಗ್ಗೆ ತೋರಿಸುತ್ತಿರುವ ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿತನದ ಬಗ್ಗೆ ಉಪಲೋಕಾಯುಕ್ತರಿಗೆ ವಿಷಯವನ್ನು ಮನವರಿಕೆ ಮಾಡಿಕೊಟ್ಟರು. ರೋಗಿಗಳ ಸಮಸ್ಯೆಗಳನ್ನು ಆಲಿಸಿದ ಮಜ್ಜಿಗೆ ಅವರು ವೈದ್ಯರನ್ನು ಈ ಸಂದರ್ಭದಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ರೋಗಿಗಳನ್ನು ನೋಡಿಕೊಳ್ಳಬೇಕು. ಅವರಿಗೆ ಸರಿಯಾದ ಸೂಕ್ತ ಚಿಕಿತ್ಸೆ ನೀಡಬೇಕು ಇಲ್ಲದಿದ್ದರೆ ನಿಮ್ಮ ಮೇಲೆ ಯಾವುದೇ ಮುಲಾಜು ಇಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಆಸ್ಪತ್ರೆಯ ಸಿಬ್ಬಂದಿಯ ಹಾಜರಾತಿಯ ಪುಸ್ತಕವನ್ನು ಪರೀಶೀಲನೆ ಮಾಡಿದ ಅವರು ನಿಗದಿತ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಿಂದ ವ್ಯಾಪಕ ದೂರುಗಳು ಟೀಕೆಗಳು ಕೇಳಿ ಬರುತ್ತೀವೆ. ಸರ್ಕಾರ ನೀಡಿದ ಓಷಧಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮಾರಾಟಮಾಡುವುದ ಓಷಧಿ ನೀಡುವುದು ಲಂಚ ಕೇಳುವುದು ಸರಿಯಾಗಿ ಚಿಕಿತ್ಸೆ ನೀಡದಿರುವ ಬಗ್ಗೆ ದೂರುಗಳು ಬರುತ್ತಲೇ ಇವೆ. ಯಾವುದೇ ವೈದ್ಯರು ಸ ಾ ವ  ರ್ ಜ ನಿ ಕ  ರಿ ಂ ದ  ಬಲವಂತವಾಗಿ ಹಣ ಪಡೆದುಕೊಂಡರೆ ಲಂಚ ಕೇಳಿದರೆ ಲೋಕಾಯುಕ್ತರಿಗೆ ದೂರು ನೀಡುವಂತೆ ಮಜ್ಜಿಗೆ ಅವರು ಆಸ್ಪತ್ರೆಗೆ ಬಂದಿದ್ದ ರೋಗಿಗಳಿಗೆ ತಿಳಿಸಿದರು.

ಆಸ್ಪತ್ರೆಯ ಕೆಲವು ಹಿರಿಯ ವೈದ್ಯಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಅವರು ವಿಚಾರಣೆಗೆ ಒಳಪಡಿಸಿದರು. ಅಲ್ಲದೆ ಉಪಲೋಕಾಯುಕ್ತರು ಮತ್ತು ಅವರ ಸಿಬ್ಬಂದಿ ಆಸ್ಪತ್ರೆಯ ವಿವಿಧ ಚಿಕಿತ್ಸಾ ಕೇಂದ್ರಗಳಿಗೆ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿ ಶುಚಿತ್ವದ ಬಗ್ಗೆ ಪರೀಶೀಲನೆ ಮಾಡಿದರು.

ಶೌಚಾಲಯವನ್ನು ಸಹ ಪರೀಶೀಲನೆ ಮಾಡಿದ ಅವರು ಕೇಂದ್ರ ಪ್ರಯೋಗಾಲಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿರುವ ಅವ್ಯವಸ್ಥೆಯ ಬಗ್ಗೆ ಕಿಡಿ ಕಾರಿದರು.

 

loading...

LEAVE A REPLY

Please enter your comment!
Please enter your name here