ಆಹಾರ ಮತ್ತು ಆರೋಗ್ಯ ಭದ್ರತೆಗಾಗಿ ದಿ.13 ರಂದು ಮನವಿ

ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ಡಾ. ಜಗದೀಶ ಹಾರುಗೊಪ್ಪ
ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ಡಾ. ಜಗದೀಶ ಹಾರುಗೊಪ್ಪ

 

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು.
ನಾಡಿಗೆ, ಸಮಾಜಕ್ಕೆ ಅತ್ಯವಶ್ಯಕವಾದ ಆಹಾರ ಮತ್ತು ಆರೋಗ್ಯೆದ ಭದ್ರತೆಯು ರೈತರು ಕೃಷಿ ಮಾಡುವುದರಿಂದ ಸಾಧ್ಯವಾಗಿದೆ. ರೈತರ ನೂರಾರು ಸಮಸ್ಯೆಗಳಿಂದ ಕೃಷಿಕರು ಮತ್ತು ಆತನ ಮಕ್ಕಳು ಕೃಷಿಯನ್ನು ತೊರೆದು ಬೇರೆ ಕ್ಷೇತ್ರಗಳ ಕಡೆಗೆ ಮುಖಮಾಡಿದ್ದಾರೆ7ಎಂದು ಕಸಾಪ ತಾಲೂಕಾ ಆದ್ಯಕ್ಷ ಡಾ.ಜಗದೀಶ ಹಾರೂಗೊಪ್ಪ ಹೇಳಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 18 ರಿಂದ 40 ವಯಸ್ಸಿನ ಯುವಕರ ಪ್ರಮಾಣ ಕೃಷಿಯಲ್ಲಿ ತುಂಬ ಕಡಿಮೆ ಆಗಿದೆ. ಕೃಷಿಯಲ್ಲಿ ತೊಡಗಿದ ಯುವಕರ ಮದುವೆಯೂ ಅಸಾದ್ಯವೆನಿಸಿz.É ಈ ಪರಿಸ್ಥಿತಿಗೆ ಕೃಷಿ ಕಷ್ಟದಾಯಕ ಮತ್ತು ಕಡಿಮೆ ಪ್ರತಿಫಲದಾಯಕ ಉದ್ಯೋಗವಾಗಿರುವುದೆ ಕಾರಣ. ಹೀಗೆಯೇ ಮುಂದುವರೆದಲ್ಲಿ ಮಕ್ಕಳ ಅಕ್ಕಿ, ರೇಶನ್ ಹಾಗೂ ಹಾಲು ಪಾಕೇಟನಲ್ಲಿ ನೋಡಿ ಕೃಷಿಯನ್ನು ಕೃಷಿ ಕಾಲೇಜಗಳಲ್ಲಿ ಮಾತ್ರ ಕಲಿಯ ಬೇಕಾಗಿ ಬಂದರೂ ಆಶ್ಚರ್ಯವಿಲ್ಲ. ನಾಡಿನ ಮುಂದಿನ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡ ಕೃಷಿಗೆ ಪೂರಕ ಯೋಜನೆಗಳನ್ನು ರೂಪಿಸಿ,ಕೃಷಿಯಲ್ಲಿ ಜಾತಿ ಬೇಧ ಮಾಡುದೆ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು, ಇಲ್ಲವಾದಲ್ಲಿ ದೂರದೃಷ್ಟಿಯ ಕೊರೆತೆಯಿಂದಾಗಿ ಕೇಂದ್ರ ಸರ್ಕಾರ ನೀಡುವ ಸಬ್ಬಡಿ ಅಕ್ಕಿ ಮತ್ತು ಗೋದಿಯನ್ನು ನೆಚ್ಚಿ. ನಾಡಿನಲ್ಲಿ ಆಹಾರ ಮತ್ತು ಆರೋಗ್ಯದ ಅಬದ್ರತೆಯಿಂದ ಹಾಹಾಕಾರವೆದ್ದೀತು.
ಸರ್ಕಾರ ರೈತರಿಗೆ ನೀಡುವ ನೇರ ಸಹಾಯಧನ ಪರೋಕ್ಷವಾಗಿ ನಾಡಿನ ಎಲ್ಲ ಜನರಿಗೂ ಲಾಭ. ಆಹಾರ,ಆರೋಗ್ಯ ಮತ್ತು ಉದ್ಯೋಗ ಭದ್ರತೆಯನ್ನು ನೀಡಿ ಮರಳಿ ಸರ್ಕಾರದ ಖಜಾನೆಯನ್ನೇ ಸೇರುತ್ತದೆ ಎಂದರು.
ಸರ್ಕಾರಗಳು ಬರುತ್ತವೆ ಹೋಗುತ್ತವೆ ಮುಖ್ಯ ಮಂತ್ರಿ, ಕೃಷಿ ಸಚಿವರು ಶಾಸಕರು ಬರುತ್ತಾರೆ ಹೋಗುತ್ತಾರೆ ಆದರೆ ಇಡೀ ಸಮುದಾಯ ಆ ಮೂಲಕ ಸಮಗ್ರ ನಾಡಿಗೆ ಒಳ್ಳೆಯದಾಗಿ ಸುಸ್ಥಿರ ಬೆಳವಣಿಗೆಯ ಮೂಲಕ ಸಮೃದ್ದ ಕರ್ನಾಟಕವನ್ನಾಗಿ ರೂಪಿಸುವ ಸಮಗ್ರ ಕೃಷಿ ನೀತಿ ಮತ್ತು ಕೃಷಿ ಪೂರಕ ಬಜೆಟ್ ಮಂಡಿಸಿ ಜನಮಾನಸದಲ್ಲಿ ಶಾಸ್ವತವಾಗಿ ನೆಲೆಯೂರಲು, ಸಮಗ್ರ ಕೃಷಿ ಭಾಗ್ಯವನ್ನು ನೀಡಲು ಆಗ್ರಹಿಸುತ್ತೇವೆ.

ಈ ವಿಷಯ ಕುರಿತು ಕಿತ್ತೂರು ತಹಶೀಲ್ದಾರರಿಗೆ ಮನವಿ ಸಲ್ಲಿಸಲ್ಲಿದ್ದೆವೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

loading...