ಇಂಗ್ಲೆಂಡ್ ವಿರುದ್ದದ ಮೂರು ಟೆಸ್ಟಗಳಿಗೆ ತಂಡ ಪ್ರಕಟ, ಕನ್ನಡಿಗರಿಗೆ ಅವಕಾಶ

0
129

ಮುಂಬೈ: ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿ ಕೈಚೆಲ್ಲಿದ ಬಳಿಕ ವಿರಾಟ್ ಪಡೆ ಟೆಸ್ಟ್ ಸರಣಿಗಾಗಿ ಸಿದ್ದವಾಗಿದ್ದು ಮೂರು ಟೆಸ್ಟ್​ ಪಂದ್ಯಗಳಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ಇಬ್ಬರು ವಿಕೆಟ್​​ ಕೀಪರ್​​ ಹಾಗೂ ಇಬ್ಬರು ಕನ್ನಡಿಗರಿಗೆ ತಂಡದಲ್ಲಿ ಸ್ಥಾನ ಲಭಿಸಿದೆ. ಸೀಮಿತ ಓವರ್​​ಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ರಿಸ್ಟ್​​ ಸ್ಪಿನ್​ ಬೌಲರ್​ ಕುಲ್​​​​ದೀಪ್​ ಯಾದವ್​​ಗೆ ಅವಕಾಶ ದೊರೆತಿದೆ.

ಆಗಸ್ಟ್​​​ 1 ರಿಂದ ಇಂಗ್ಲೆಂಡ್​ ವಿರುದ್ಧ ಕೊಹ್ಲಿ ಪಡೆ ಟೆಸ್ಟ್​​ ಆಡಲಿದೆ. ತಂಡದ ಖಾಯಂ ಸದಸ್ಯ ವೃದ್ಧಿಮನ್​ ಸಹಾ ಗಾಯಕ್ಕೆ ತುತ್ತಾಗಿದ್ದು, ಆರಂಭಿಕ ಟೆಸ್ಟ್​​ ಸರಣಿಗೆ ಫಿಟ್​​ ಇಲ್ಲ. ಹೀಗಾಗಿ ಇಬ್ಬರು ವಿಕೆಟ್​ ಕೀಪರ್ ​​ಗಳಿಗೆ ಸ್ಥಾನ ನೀಡಲಾಗಿದೆ. ಅನುಭವಿ ದಿನೇಶ್​ ಕಾರ್ತಿಕ್​ ಹಾಗೂ ಯುವ ಆಟಗಾರ ರಿಶಬ್​ ಪಂತ್​​ ಟೆಸ್ಟ್​​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಚೇತೋಹಾರಿ ಬ್ಯಾಟಿಂಗ್​ ಪ್ರದರ್ಶನ ನೀಡಿರುವ ಕರ್ನಾಟಕದ ಕೆ.ಎಲ್.​ ರಾಹುಲ್​ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನೋರ್ವ ಕನ್ನಡಿಗ ಕರುಣ್​ ನಾಯರ್​ ಗೂ ಚಾನ್ಸ್​​ ಸಿಕ್ಕಿದೆ.

ಇಂಗ್ಲೆಂಡ್​ ಬ್ಯಾಟ್ಸ್​​ಮನ್​​​ ಗಳನ್ನು ಕಾಡಿದ ಚೈನಾಮೆನ್​ ಬೌಲರ್​ ಕುಲ್​​ದೀಪ್​ ಯಾದವ್​ಗೂ ವೈಟ್​​ ಜೆರ್ಸಿ ತೊಡುವ ಅವಕಾಶ ಲಭಿಸಿದೆ. ಬೌನ್ಸಿ ಟ್ರ್ಯಾಕ್​​ನಲ್ಲಿ ಶಿಸ್ತು ಬದ್ಧ ದಾಳಿ ನಡೆಸಿರುವ ಕುಲ್​​ದೀಪ್,​​ ಮಾರ್ಗನ್​​ ಪಡೆಗೆ ಕಂಟಕವಾಗಿದ್ದರು. ಸ್ಪಿನ್​​ ವಿಭಾಗದಲ್ಲಿ ಅನುಭವಿ ಸ್ಪಿನ್​ ಬೌಲರ್ಸ್​​​ ಆರ್​. ಅಶ್ವಿನ್​ ಹಾಗೂ ರವೀಂದ್ರ ಜಡೇಜಾಗೂ ಸ್ಥಾನ ಸಿಕ್ಕಿದೆ.

ತಂಡ: ವಿರಾಟ್​ ಕೊಹ್ಲಿ (ನಾಯಕ), ಶಿಖರ್​ ಧವನ್​​, ಕೆ.ಎಲ್.​ ರಾಹುಲ್​​, ಮುರಳಿ ವಿಜಯ್​​, ಚೇತೇಶ್ವರ್​​ ಪೂಜಾರ, ಅಜಿಂಕ್ಯ ರಹಾನೆ, ಕರುಣ್​ ನಾಯರ್​, ದಿನೇಶ್​ ಕಾರ್ತಿಕ್​​, ರಿಶಬ್​ ಪಂತ್​​, ಆರ್​.ಅಶ್ವಿನ್​​, ರವೀಂದ್ರ ಜಡೇಜಾ, ಕುಲ್​​ದೀಪ್​ ಯಾದವ್​, ಹಾರ್ದಿಕ್​ ಪಾಂಡ್ಯ, ಇಶಾಂತ್​ ಶರ್ಮಾ, ಉಮೇಶ್​ ಯಾದವ್​​, ಜಸ್ಪ್ರಿತ್​ ಬೂಮ್ರಾ, ಶಾರ್ದೂಲ್​ ಠಾಕೂರ್​​​.

loading...