ಇಂಗ್ಲೆಂಡ್ ಸರಣಿ ಬಳಿಕ ಧೋನಿ ವಿದಾಯ…?

0
17

ಲೀಡ್ಸ್​: ಧೋನಿ ಟೀಂ ಇಂಡಿಯಾ ಕಂಡ ಶ್ರೇಷ್ಠ ಆಟಗಾರ.
ಅಷ್ಟೇ ಅಲ್ಲದೆ ವಿಶ್ವ ಕ್ರಿಕೆಟ್​ ಕಂಡ ಶ್ರೇಷ್ಠ ಲೀಡರ್​… ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಎರಡನೇ ಬಾರಿಗೆ ವಿಶ್ವಕಪ್​ ಎತ್ತಿ ಹಿಡಿದ ಸಾಧನೆ ಮಾಡಿದ ಕ್ಯಾಪ್ಟನ್​..
ಹೌದು ಮಹೇಂದ್ರ ಸಿಂಗ್​ ಧೋನಿ ಈಗಾಗಲೇ ಟೆಸ್ಟ್​ ಪಂದ್ಯಕ್ಕೆ ಗುಡ್​ ಬೈ ಹೇಳಿದ್ದಾರೆ. ಈಗ ಎಲ್ಲ ಫಾರ್ಮೆಟ್​ಗಳಿಗೆ ಅವರು ನಿವೃತ್ತಿ ಘೋಷಿಸ್ತಾರಾ ಅನ್ನೋ ಕುತೂಹಲ ಹುಟ್ಟಿಕೊಂಡಿದೆ. ಈ ಎಲ್ಲ ಅಚ್ಚರಿಗಳಿಗೆ, ಆವೇಘಗಳಿಗೆ ಕಾರಣವಾಗಿರುವುದು, ನಿನ್ನೆ ನಡೆದ ಮೂರನೇ ಏಕದಿನ ಪಂದ್ಯ… ಧೋನಿ ನಿವೃತ್ತಿ ನೀಡ್ತಾರಾ ಎನ್ನುವ ಊಹಾಪೋಹಗಳಿಗೆ ಇಂಬು ನೀಡುವಂತಹ ಸಂಗತಿಯೊಂದು ನಡೆದಿದೆ. ಆ ಒಂದೇ ಒಂದು ಪ್ರಸಂಗ ಮಾಹಿ ಒನ್​ ಡೇ ಯಿಂದಲೂ ರಿಟೈರ್ಡ್​ಮೆಂಟ್ ಕೊಡ್ತಾರಾ ಎನ್ನುವ ಮುನ್ಸೂಚನೆಯೇ ಎಂಬ ಚರ್ಚೆಗಳು ಕ್ರಿಕೆಟ್​ ರಂಗದಲ್ಲಿ ನಡೆಯುತ್ತಿದೆ.
ಈ ಎಲ್ಲ ಊಹಾಪೋಹಗಳಿಗೆ ವೇದಿಕೆ ಒದಗಿಸಿದ್ದು ಮಾತ್ರ ಈ ಫೈನಲ್​ ಪಂದ್ಯ.. ಟೀಂ ಇಂಡಿಯಾ ಇಂಗ್ಲೆಂಡ್​ ವಿರುದ್ಧ 2-1 ರಿಂದ ಸರಣಿ ಕೈ ಚಲ್ಲಿದ ಮೇಲೆ, ಧೋನಿ ಅಂಪೈರ್​ ಬಳಿಗೆ ಹೋಗಿ ಪಂದ್ಯಕ್ಕೆ ಬಳಸಿದ ಚೆಂಡನ್ನು ಕೇಳಿ ಪಡೆದುಕೊಂಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ವಿಜಯದ ರನ್​ ಬಾರಿಸಿದ ಇಂಗ್ಲೆಂಡ್​ ಬ್ಯಾಟ್ಸಮನ್​ಗಳು ವಿಜಯೋತ್ಸವದಲ್ಲಿ ತೇಲಿದ್ದರು… ಇನ್ನು ಅತ್ತ ಎಲ್ಲ ಆಟಗಾರರು ಡ್ರೆಸ್ಸಿಂಗ್​ ರೂಮ್​ಗಳತ್ತ ದಾಲುಗಾಲಿಟ್ಟಿದ್ದರು.. ಇತ್ತ ಧೋನಿ ಮಾತ್ರ ಅಂಪರ್​ಗಳ ಜತೆ ಹೆಜ್ಜೆ ಹಾಕ್ತಿದ್ದರು. ಅಷ್ಟೇ ಅಲ್ಲ, ಫೈನಲ್​ ಪಂದ್ಯದಂತಿದ್ದ ಕೊನೆ ಮ್ಯಾಚ್​ನಲ್ಲಿ ಬಳಸಿದ ಚಂಡನ್ನ ಧೋನಿ ಅಂಪೈರ್​ಗಳ ಬಳಿ ಕೇಳಿ ಪಡೆದುಕೊಂಡರು. ಧೋನಿ ಅವರ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಒಂಡೇ, ಟಿ-20 ಯಿಂದಲೂ ಮಾಹಿ ನಿವೃತ್ತರಾಗುವ ಕಾರಣಕ್ಕೇ ಅವರು ಅಂತಿಮ ಪಂದ್ಯದ ಚೆಂಡ್​ ಅನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ .

loading...