ಇಂಜನೀಯರಿಂಗ್ ವ್ಯಾಸಂಗದಲ್ಲಿ ದೃಢತೆ, ಛಲಗಾರಿಕೆ ಅವಶ್ಯ: ಡಾ. ಶರದ

0
15

 

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಿವ್ಹಿಲ್ ಇಂಜನೀಯರಿಂಗ್ ಎಲ್ಲ ವಿಭಾಗಗಳಲ್ಲಿ ಮೂಲ ತಾಯಿ ಇದ್ದ ಹಾಗೆ. ಇದು ಮೊದಲ ಇಂಜನೀಯರಿಂಗ್ ಎಂಬ ಹೆಗ್ಗಳಿಕೆ ಹೊಂದಿದ್ದು ವಿದ್ಯಾರ್ಥಿಗಳು ಹೆಮ್ಮೆ ಪಡಬೇಕು ಎಂದು ಹುಬ್ಬಳ್ಳಿಯ ಕೆ.ಎಲ್.ಇ.ಐ.ಟಿ ಕಾಲೇಜಿನ ಸಿವ್ಹಿಲ್ ವಿಭಾಗದ ಮುಖ್ಯಸ್ಥ ಡಾ. ಶರದ ಜೋಶಿ ಹೇಳಿದರು.

ಅವರು ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದ ಸಿವ್ಹಿಲ್ ಇಂಜನೀಯರಿಂಗ್ ವಿಭಾಗದ ವಿದ್ಯಾರ್ಥಿಗಳ ಅಸೋಸಿಯೇಷನ್‌ನ ೨೦೧೮-೧೯ ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಇಂಜನೀಯರಿಂಗ್ ವ್ಯಾಸಂಗದಲ್ಲಿ ಮೂಲವಾಗಿ ಬೇಕಾದ ದೃಢತೆ, ಛಲಗಾರಿಕೆ, ಶಿಸ್ತು, ಕಠಿಣ ಪರಿಶ್ರಮ, ಆವಿಷ್ಕಾರ, ಕೌಶಲ್ಯಗಳನ್ನು ಸಂಪಾದಿಸಿ, ಇಂಜನೀಯರಿಂಗ್ ಕ್ಷೆÃತ್ರದಲ್ಲಿನ ವಿಫುಲ ಅವಕಾಶಗಳನ್ನು ಬಳಸಿಕೊಂಡು ವೃತ್ತಿಜೀವನದಲ್ಲಿ ಸಫಲತೆ ಹೊಂದಬೇಕೆಂದು ಕರೆ ನೀಡಿದರು.

ವಿಭಾಗದ ಮುಖ್ಯಸ್ಥ ಪ್ರೊ. ಅಮರ ಬ್ಯಾಕೋಡಿ ಸ್ವಾಗತಿಸಿ ಅಸೋಶಿಯೇಷನಿನ ಚಟುವಟಿಕೆಗಳ ಮಾಹಿತಿ ನೀಡಿದರು. ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ, ಪ್ರೊ. ಎಂ.ವಿ. ಕಂಠಿ, ಅಸೋಸಿಯೇಷನ್ ಮುಖ್ಯಸ್ಥ ಪ್ರೊ. ವಿಜಯಕುಮಾರ ಕುಂಬಾರ ಸೇರಿದಂತೆ ಎಲ್ಲ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೂಜಾ ನಾಯಿಕ ಪರಿಚಯಿಸಿದರು. ಅಮೃತೇಶಕಮಾರ ಸಿಂಗ ನಿರೂಪಿಸಿದರು. ಮಹೇಶ ವಂದಿಸಿದರು.

loading...