ಇಂದನ ಬೆಲೆ ಕಡಿಮೆ ಮಾಡುವಂತೆ ಕೆಎಸ್ಆರ್ ಟಿಸಿ ನೌಕರರಿಂದ ಮನವಿ

0
9

ಇಂದನ ಬೆಲೆ ಕಡಿಮೆ ಮಾಡುವಂತೆ ಕೆಎಸ್ಆರ್ ಟಿಸಿ ನೌಕರರಿಂದ ಮನವಿ

ಕನ್ನಡಮ್ಮ ಸುದ್ದಿ-ಬೆಳಗಾವಿ:ನಾಲ್ಕು ವರ್ಷಗಳಿಂದ ಇಂಧನ ಬೆಲೆ ಏರಿಕೆಯಾಗುತ್ತಿರುವುದರಿಂದ ಬಿಡಿಭಾಗಗಳು ಮತ್ತು ದಿನ ಬಳಕೆಯ ಎಲ್ಲ ವಸ್ತುಗಳ ಬೆಲೆ ಗಗನಕ್ಕೆರಿದ್ದು ಇದರಿಂದ ಸಾಮಾನ್ಯ ಜನತೆ ಮತ್ತು ಕಾರ್ಮಿಕರು ಜೀವಿಸುವುದು ಕಷ್ಟಕರವಾಗಿದೆ,ಆದ್ದರಿಂದ ಇಂದನ ಬೆಲೆ ಕಡಿಮೆ ಮಾಡಬೇಕೆಂದು ಆಗ್ರಹಿಸಿ ಕೆಎಸ್ಆರ್ ಟಿಸಿ ನೌಕರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಇಂದು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ರಾಜ್ಯದಲ್ಲಿ ಸುಮಾರು ೧ ಲಕ್ಷ ೨೦ ಸಾವಿರ ಸಿಬ್ಬಂದಿ ಕೆಎಸ್ ಆರ್ ಟಿಸಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದು ಪ್ರತಿ ನಿತ್ಯ ಇಂಧನ ಬೆಲೆ ಹೆಚ್ಚಳವಾಗುತ್ತಿದೆ .ಸಾರ್ವಜನಿಕರಿಗೆ ಹೊರೆಯಾಗಬಾರದೆಂದು ಕಳೆದ ನಾಲ್ಕು ವರ್ಷದಿಂದ ಪ್ರಯಾಣ ದರ ಹೆಚ್ವಿಸಿಲ್ಲ ,ಇದರಿಂದ ಸಂಸ್ಥೆ ನಿರಂತರ ಹಾನಿಯಾಗುತ್ತಿದೆ .ಇದರಿಂದ ನೌಕರರು ಆರ್ಥಿಕ ಸೌಲಭ್ಯ ವಂಚಿತರಾಗುತ್ತಿದ್ದಾರೆ ‌.ಆದ್ದರಿಂದ ಕೂಡಲೆ ಇಂದನ ಬೆಲೆ ಇಳಿಕೆ ಮಾಡಬೇಕು ಎಂದು ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು ‌.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ನಾಗೇಶ ಸತೇರಿ ಸೇರಿದಂತೆ ಇತರರು ಇದ್ದರು .

loading...