ಇಂದಿನಿಂದ ಗೋಡಚಿ ವೀರಭದ್ರೇಶ್ವರ ಜಾತ್ರೆಯ ಮಹೋತ್ಸವ

0
84

ಮುತ್ತು.ಆರ್‌.ಕಮ್ಮಾರ

ರಾಮದುರ್ಗ: ಉತ್ತರ ಕರ್ನಾಟಕದ ಧರ್ಮಸ್ಥಳವೆಂದು ಪ್ರಸಿದ್ದ ಪಡೆದ ಕ್ಷೇತ್ರವೆ ರಾಮದುರ್ಗ ತಾಲೂಕಿನ ಶ್ರೀ ಗೋಡಚಿ ವೀರಭದ್ರೇಶ್ವರ ದೇವಸ್ಥಾನ, ಚಳಿ ಚಳಿಯ ನಡುವೆ ಜಾತ್ರೆಯ ಮಹೋತ್ಸವ ಪ್ರಾರಂಭವಾಗಿ ಡಿ.13 ರಿಂದ 17 ರ ವರೆಗೆ ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ.

ರಾಮದುರ್ಗದಿಂದ ಸುಮಾರು 23 ಕಿ.ಮಿ. ದೂರವಿರುವ ಗೊಡಚಿ ವೀರಭದ್ರೇಶ್ವರ ನಾಡಿನ ಹಾಗೂ ದೇಶದ ಉದ್ದಗಳಕ್ಕೂ ಸ್ವಾಮಿ ಭಕ್ತರು ನಲೆಸಿದ್ದಾರೆ. ಆದರೆ ಜಾತ್ರೆಯ ಸಂದರ್ಭದಲ್ಲಿ ಎಲ್ಲಿದ್ದರು ಎಲ್ಲ ಭಕ್ತರು ಹಾಜರಾಗುತ್ತಾರೆ ಸುತ್ತ ಮುತ್ತಲ್ಲಿನ ಗ್ರಾಮಸ್ಥರು ಹರ್ಷದಿಂದ ಪಾಲ್ಗೋಳ್ಳುತ್ತಾರೆ.

ಬಳುವಲಕಾಯಿ, ಬಾರೆಹಣ್ಣಿನ ವ್ಯಾಪಾರ ಬಲು ಜೋರು

ಈ ಜಾತ್ರೆ ಬಳುವಳಿಕಾಯಿ ಹಾಗೂ ಬಾರೆಹಣ್ಣಿನ ಮಾರಾಟದಲ್ಲಿ ಸಾಕಷ್ಟು ಪ್ರಸಿದ್ದಿ ಜಾತ್ರೆಗೆ ಬಂದವರೆಲ್ಲರೂ ಕಡ್ಡಾಯವಾಗಿ ಬಳವಲುಕಾಯಿ,ಬಾರೆಹಣ್ಣುಗಳನ್ನು ತಗೆದುಕೊಳ್ಳುವದು ವಿಶೇಷ ಜಾತ್ರೆ ಮುಗಿಯುವವರೆ ಇವುಗಳ ಬೆಲೆ ಮಾತ್ರ ಕಹಿಯಾಗಿರುತ್ತದೆ. ಎಂಬುದನ್ನು ಇಲ್ಲಿ ಸ್ಮರಿಸಬೇಕಾಗಿದೆ.

ಸುಮಾರು 45-50 ಕಿಮಿ ದೂರದ ಊರಿನಿಂದ ಎತ್ತಿನ ಗಾಡಿಗಳೊಂದಿಗೆ ಭಕ್ತಾಧಿಗಳು ಈ ಜಾತ್ರೆಗೆ ಆಗಮಿಸಿ 5 ದಿನಗಳ ವರೆಗೆ ಇಲ್ಲಿಯೇ ಬಿಡಾರ ಹೂಡುತ್ತಾರೆ. ಈ ಜಾತ್ರಗೆ ಮುಗಿವ ವರೆಗೆ ರಸ್ತೆಯ ತುಂಬೆಲ್ಲಾ ಎತ್ತಿನ ಗಾಡಿ, ಟ್ರ್ಯಾಕ್ಟರ್‌, ಕಾಲುನಡುಗೆಯ ಭಕ್ತಾಧಿಗಳ ಸಾಲೇ ಸಾಲು. ಇಲ್ಲಿ ಒಂದು ತಿಂಗಳ ವರೆಗೆ ವಿವಿಧ ನಾಟಕ ಕಂಪನಿಗಳು ನಾಟಕ ಪ್ರದರ್ಶಿಸಿಸುತ್ತಿರುವದು ಒಂದು ವಿಶೇಷ.

ಐದು ದಿನಗಳ ವರೆಗೆ ಜರುಗುವ ಗೊಡಚಿ ಜಾತ್ರೆಯಲ್ಲಿ ಅನೇಕ ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಪ್ರವಚನ, ಭಜನೆ, ವೀರಗಾಸೆ, ಸರಕಾರ ವಿವಿಧ ಇಲಾಖೆಯಿಂದ ವಸ್ತು ಪ್ರದರ್ಶನ ಹಾಗೂ ಅನೇಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ.

ಪುರಾಥನ ಹಿನ್ನಲೆ:

ರಾಮದುರ್ಗ ಜಾತ್ರೆಯು ಪ್ರಾರಂಭವಾಗುವದು ಮೊದಲು ತೋರಗಲ್ಲ ಭೂತನಾತೇಶ್ವರ ದೇವಾಲಯಕ್ಕೆ ವೀರಭದ್ರೇಶ್ವರ ದೇವರು ವೀರಗಾಸೆ ಪುರವಂತರ ಸಮೇತ ಹೋಗಿ ಅಲ್ಲಿಯ ಜಾತ್ರೆಯ ಕಾರ್ಯಕ್ರಗಳನ್ನು ಮುಗಿಸಿ ಬಂದ ನಂತರ ಇಲ್ಲಿಯ ಜಾತ್ರಾ ಕಾರ್ಯಕ್ರಮಗಳು ಪ್ರಾರಂಭವಾಗುದು ವಾಡಿಕೆ ಒಂದು ಶಿಂಧೆ ವಂಶಸ್ಥರು ಆಳುತ್ತಿದ್ದ ಈ ಸಂಸ್ಥಾನದ ಮುಂದಾಳತ್ವದಲ್ಲಿ ಶ್ರೀ ಗೊಡಚಿ ವೀರಭದ್ರಶ್ವೇರ ಜಾತ್ರೆ ನಡೆಯುತ್ತಾ ಬಂದಿದೆ ಹಾಗೂ ರಾಮದುರ್ಗ ಸಂಸ್ಥಾನದ ರಾಜರ ಕುಲದೇವರಾಗಿತ್ತು. ಪ್ರತಿ ವರ್ಷವೂ ಅತ್ಯಂತ ವೈಭವದಿಂದ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದಾರೆ. ಈಗಲೂ ಕೂಡಾ ಈ ಜಾತ್ರೆಯನ್ನು ಸಂಸ್ಥಾನಿಕರ ವಂಶಸ್ಥರಾದ ಶಿಂಧೆ ಮನೆತನದವರ ಮುಖಂಡತ್ವದಲ್ಲಿ ಜರುಗುತ್ತದೆ.

ದಕ್ಷ ಬ್ರಹ್ಮನ ಸಂಹಾರಕ್ಕಾಗಿ ಪರಮೇಶ್ವರನ ಅನುಗ್ರದಿಂದ ಅವತರಿಸಿದ ಮಹಾನ್‌ ಉಗ್ರಸ್ವರೂಪಿ ಶ್ರೀ ವೀರಭದ್ರದೇವರು, ಭಕ್ತಯಿಂದ ನಂಬಿಕೊಂಡು ನಡೆದವರಿಗೆ ಬೇಡಿದ ಇಷ್ಟಾರ್ಥವನ್ನು ಕರುಣಾಳು ದೇವರು.

ಶಸ್ತ್ರದಾರಿ ಪುರವಂತರ ವೀರಗಾಸಿ ಕುಣಿತ ಕನ್ಮಣ ಸೆಳೆಯುತ್ತದೆ

ವೀರಭದ್ರೇವರ ಒಡಪುಗಳನ್ನು ಹೇಳುತ್ತಾ ಬಾಯಿ, ನಾಲಿಗೆ, ಮೈಗೆ,ದಾರ ಮತ್ತು ಶಸ್ತ್ರವನ್ನು ಭಕ್ತಿಯಿಂದ ಹಾಕಿಕೊಂಡು ಕುಣಿದಾಡುವದನ್ನು ನೋಡಿದರೆ ಮೈರೊಮಾಂಚನಗೊಳಿಸುತ್ತದೆ ಆದರೆ ಅವರಿಗೆ ಯಾವ ತೊಂದರೆಯನ್ನು ವೀರಭದ್ರದೇವರು ನೀಡುವದಿಲ್ಲ ಎನ್ನುತ್ತಾರೆ ಪುರವಂತರು ಬಸವಂತಪ್ಪ ಸದಾಸಿವನವರ.ನಾಗಪ್ಪ ಕಲ್ಲೂರ. ಅಭಿಪ್ರಾಯವಾಗಿದೆ.

ರಥೋತ್ಸವ :

ಡಿ.13 ರಂದು ಸಂಜೆ 5 ಗಂಟೆಗೆ ವೀರಗಾಸೆ, ವೀರ ಪುರವಂತರು, ಸಂಬಾಳ, ನಂದಿಕೋಲು ಹಾಗೂ ಸಕಲ ವಾಧ್ಯಮೇಳಗಳೊಂದಿಗೆ ವೀರಭದ್ರೇಶ್ವರ ಮಹಾರಥೋತ್ಸವ ಸಕಲ ಧಾರ್ಮಿಕ ವಿದಿವತ್ತಾಗಿ ಜರುಗುವದು. ಡಿ.13 ರಂದು ಬೆಳಿಗ್ಗೆ (ಮಧ್ಯರಾತ್ರಿಯಲ್ಲಿ) ವೀರಭದ್ರೇಶ್ವರ ಹಾಗೂ ಭದ್ರಕಾಳಿ ಮಾತೆಗೆ 11 ಜನ ಶಾಸ್ತ್ರಿಗಳಿಂದ ಮಹಾಮಸ್ತಕಾಭಿಶೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಕುಂಕುಮಾರ್ಚನೆ ಜರುಗುವದು. ಡಿ.17 ರಂದು ಸಂಜೆ ರಥದ ಕಳಸ ಇಳಿಸಿದ ನಂತರ 6 ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರಗುವದು.

**ಬಾಕ್ಸ್‌**

ದೇವಸ್ಥಾನದ ವ್ಯವಸ್ಥಾಪಕರು ಭಕ್ತರ ಅನೂಕಲಕ್ಕಾಗಿ ಕುಡಿವ ನೀರು,ವಸತಿ ಜನರ ಆರೋಗ್ಯ ಕಾಪಾಡಲು ಆರೋಗ್ಯ ಇಲಾಕೆಗೆ ವಹಿಸಿಕೊಡಲಾಗಿದೆ, ಸೂಕ್ತ ಬಂದೂಬಸ್ತ ವ್ಯವಸ್ತೆಯನ್ನು ಪೊಲೀಸ್‌ ಇಲಾಕೆ ಮಾಡಿಕೊಂಡಿದೆ. ಭಕ್ತಾದಿಗಳ ಅನೂಕೂಲಕ್ಕಾಗಿ ರಾತ್ರಿ ಹಗಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಂಗ್ರಾಮರಾಜ ಯು.ಶಿಂಧೆ, ವೀರ ಧರ್ಮದರ್ಶಿಗಳು ಗೊಡಚಿ. ಅಡಳಿತ ಮಂಡಳಿಯವರು ಹೇಳುತ್ತಾರೆ.

loading...

LEAVE A REPLY

Please enter your comment!
Please enter your name here