ಇಂದಿನಿಂದ ಮುತ್ತೇಶ್ವರ ದೇವರ ಜಾತ್ರಾ ಮಹೋತ್ಸವ

0
68

ಕನ್ನಡಮ್ಮ ಸುದ್ದಿ-ಗೋಕಾಕ: ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಹಡಗಿನಾಳ ಗ್ರಾಮದ ಶ್ರೀ ಮುತ್ತೇಶ್ವರ ದೇವರ ಜಾತ್ರಾ ಮಹೋತ್ಸವ ಇಂದಿನಿಂದ ವಿಜೃಂಭಣೆಯಿಂದ ನಡೆಯಲಿದೆ.
ಅಂಕಲಗಿಯ ಅಡವಿಸಿದ್ಧೇಶ್ವರ ಮಹಾಸ್ವಾಮಿಗಳು ಹಾಗು ಹಡಗಿನಾಳದ ಶ್ರೀ ಮುತ್ತೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಈ ಜಾತ್ರೆಯಲ್ಲಿ ದಿ. 6ರಂದು ಕರಿ ಕಟ್ಟುವ ಕಾರ್ಯಕ್ರಮ.
ದಿ. 7ರಂದು ವಾಲಗ ಕೂಡುವವು. ಕೈತನಾಳದಿಂದ ರಾಮಸಿದ್ಧೇಶ್ವರ ಪಲ್ಲಕ್ಕಿ, ಉದಗಟ್ಟಿಯ ಉದ್ದಮ್ಮದೇವಿ ಪಲ್ಲಕ್ಕಿ ಹಾಗೂ ಗುರುಸಿದ್ಧೇಶ್ವರ ಪಲ್ಲಕ್ಕಿಯು ಗ್ರಾಮದಲ್ಲಿ ಪ್ರವೇಶ ಮಾಡುವವು. ನಂತರ ಡೊಳ್ಳಿನ ಪದಗಳು ಮತ್ತು ಪ್ರಸಾದ ಜರುಗುವದು.
ದಿ. 8ರಂದು ಮುಂಜಾನೆ 8 ಗಂಟೆಗೆ ಗದ್ದುಗೆ ಗುಡಿಯಿಂದ ಪಲ್ಲಕ್ಕಿಗಳು ವಾದ್ಯ ಮೇಳದೊಂದಿಗೆ ಹುಣಶೀ ಬಣಕ್ಕೆ ಹೋಗುವದು. ಮತ್ತು ನೈವೇದ್ಯ ಕಾರ್ಯಕ್ರಮ. ವಡೇರ ಬಂಧುಗಳು ಶಿಶು ನಾಮಕರಣ ನೆರವೇರುವದು. ಮಧ್ಯಾನ್ಹ ಮಹಾಪ್ರಸಾದ. ಸಂಜೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮ. ರಾತ್ರಿ 12 ಗಂಟೆಗೆ ನಿವಾಳಿಗೆ ಕಾರ್ಯಕ್ರಮ.
ದಿ. 9ರಂದು ಮುಂಜಾನೆ 9 ಗಂಟೆಗೆ ದೇವರ ಪಲ್ಲಕ್ಕಿಗಳು ವಾದ್ಯಮೇಳ ಸಮೇತ ದಟ್ಟಿ ಮೇಳದೊಂದಿಗೆ ದೇವರುಗಳ ಗದ್ದುಗೆ ಗುಡಿಗೆ ಪ್ರವೇಶ ಹಾಗೂ ನೈವೇದ್ಯ ಮಂಗಳಾರತಿ ಸೇವೆಯ ನಂತರ 1 ಗಂಟೆಗೆ ಮುಕ್ತಾಯ.
ಜಾತ್ರೆಯ ಅಂಗವಾಗಿ ಗಾಡಾ ಬಂಡಿ (ನಿಮಿಷದ ಬಂಡಿ) ಶರ್ತು, ಓಡುವ ಶರ್ತು, ಓಡುವ ಕುದುರೆ ಶರ್ತು, ತೆರೆ ಬಂಡಿ ಶರ್ತು, ಸ್ಲೋ ಮೋಟರ ಸೈಕಲ್ ಶರ್ತು, ಸ್ಪೀಡ್ ಸೈಕಲ್ ಶರ್ತು, ಜೋಡು ಕುದುರೆ ಗಾಡಿ ಶರ್ತು, ಟ್ರ್ಯಾಕ್ಟರ್ ರಿವರ್ಸ ಶರ್ತು (ಎರಡು ಗಾಲಿ ಡಬ್ಬಿ ಸಹಿತ) ಶರ್ತು ಏರ್ಪಡಿಸಲಾಗಿದೆ.
ಪ್ರತಿದಿನ ರಾತ್ರಿ 9-30ಕ್ಕೆ ತುರುಸಿನ ಡೊಳ್ಳಿನ ಪದಗಳು ಹಾಗೂ ಸುಪ್ರಸಿದ್ಧ ಬೈಲಾಟಗಳನ್ನು ಏರ್ಪಡಿಸಲಾಗಿದೆ. ದಿ. 9ರಂದು ರಾತ್ರಿ ಶ್ರೀ ಮುತ್ತೇಶ್ವರ ನಾಟ್ಯ ಸಂಘ ಹಡಗಿನಾಳ ಅವರಿಂದ ಊರಿಗೆ ಕಾಲಿಟ್ಟ ಹುಲಿ ಅರ್ಥಾತ್ ಸೇಡು ಸಾಧಿಸಿದ ಸಿಂಹ ಜೋಡಿ ಸಾಮಾಜಿಕ ಪ್ರದರ್ಶನಗೊಳ್ಳಲಿದೆ.

loading...