ಇಟಲಿಯಲ್ಲಿ ಸೇತುವೆ ಕುಸಿತ: ೩೫ ಮಂದಿ ಸಾವು

0
22

ಜಿನೋವಾ (ಇಟಲಿ): ಇಲ್ಲಿನ ಮೊರಾಂಡೊ ಮೋಟಾರ್​​ವೇ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಕನಿಷ್ಟ ೩೫ ಜನರು ಮೃತಪಟ್ಟಿದ್ದಾರೆ. ಅಲ್ಲದೆ ೧೩ ಮಂದಿ ಗಾಯಗೊಂಡಿದ್ದಾರೆ.
ಜಿನೋವಾ ಬಂದರು ನಗರದ ಪಶ್ಚಿಮ ಭಾಗದಲ್ಲಿರುವ ಈ ಸೇತುವೆಯು ಒಂದು ಭಾಗ ಕುಸಿದುಬಿದ್ದಿದೆ. ಘಟನೆ ಸಂಭವಿಸುವ ವೇಳೆ ಸುಮಾರು ೩೦ ವಾಹನಗಳು ಹಾಗೂ ಅನೇಕ ಟ್ರಕ್​ಗಳು ಸಂಚರಿಸುತ್ತಿದ್ದವು ಎಂದು ಇಟಾಲಿಯನ್ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿಯ ಮುಖ್ಯಸ್ಥ ಎಂಜಲೋ ಬೊರೆಲ್ಲಿ ತಿಳಿಸಿದ್ದಾರೆ.
೧೯೬೮ರಲ್ಲಿ ಪ್ರಾರಂಭವಾದ ಈ ಮೋಟಾರ್​​ವೇ ಸೇತುವೆಯು ಜಿನೋವಾ ನಗರದ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಪ್ರಮುಖ ಸಂರ‍್ಕ ಕೊಂಡಿಯಾಗಿತ್ತು. ಅಲ್ಲದೆ ಸೇತುವೆಯ ರಿಪೇರಿ ಕರ‍್ಯ ಆರಂಭಿಸಲಾಗಿದೆ.

loading...