ಇದೇ 19 ರಂದು ಮಹೇಂದ್ರ ಸಿಂಗ್ ಧೋನಿ ಭವಿಷ್ಯ ನಿರ್ಧಾರ

0
13

ನವದೆಹಲಿ:- ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ಸ್ ನಲ್ಲಿ ಸೋತು ನಿರಾಸೆ ಅನುಭವಿಸಿದ್ದು, ತಂಡದ ಹಿರಿಯ ಆಟಗಾರನ ಸ್ಥಾನದ ಬಗ್ಗೆ ಇದೇ 19ರಂದು ನಿರ್ಧಾರ ಕೈಗೊಳ್ಳಲಾಗುವುದು.
ಶುಕ್ರವಾರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾ ಆಯ್ಕೆಯನ್ನು, ಐದು ಸದಸ್ಯರ ಆಯ್ಕೆ ಸಮಿತಿ ನಡೆಸಲಿದೆ. ಪ್ರವಾಸ ಮೂರು ಆಗಸ್ಟ್ ನಿಂದ ನಾಲ್ಕು ಸೆಪ್ಟಂಬರ್ ವರೆಗಿದ್ದು, ಈ ವೇಳೆ ಬ್ಲ್ಯೂ ಬಾಯ್ಸ್ ಮೂರು ಟಿ-20 ಹಾಗೂ ಮೂರು ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯ ಆಡಲಿದೆ.

ಕಳೆದ 12 ತಿಂಗಳುನಿಂದ ಧೋನಿ ಅವರ ಸ್ಥಾನ ತಂಡದಲ್ಲಿ ಡೋಲಾಯಮಾನವಾಗಿದೆ. ವಿಶ್ವಕಪ್ ನಲ್ಲಿ ಧೋನಿ ಬ್ಯಾಟಿಂಗ್ ಧಾಟಿಗೆ ಟೀಕೆಗಳು ಕೇಳಿ ಬಂದಿದ್ದವು. ಆದರೆ, ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್ ನಲ್ಲಿ ಕೂಲ್ ಕ್ಯಾಪ್ಟನ್ ಗೆ ಸಮರ್ಥನೆ ಇರುವುದಾಗಿ ತಿಳಿಸುತ್ತಿದ್ದರು.
ಧೊನಿ ಅವರು ತಮ್ಮ ಮುಂದಿನ ನಡೆ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಹಾಗೂ ಆಯ್ಕೆ ಸಮಿತಿಯೊಂದಿಗೆ ಮಾತುಕತೆ ನಡೆಸಿಲ್ಲ. ಧೋನಿ ಅವರನ್ನು ಹೊರತು ಪಡಿಸಿದರೆ, ಜುಲೈ 19ರ ಸಭೆಯಲ್ಲಿ ವೇಗಿಗಳ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ. ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಜಸ್ಪ್ರಿತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಅವರ ಲಭ್ಯತೆಯ ಬಗ್ಗೆ ನೋಡಿಕೊಳ್ಳಬೇಕಿದೆ. ಅಲ್ಲದೆ ಟೀಮ್ ಇಂಡಿಯಾದ ಆರಂಭಿಕ ಶಿಖರ್ ಧವನ್ ಹಾಗೂ ಆಲ್ ರೌಂಡರ್ ವಿಜಯ್ ಶಂಕರ್ ಗಾಯದಿಂದ ಚೇತರಿಸಿಕೊಂಡಿದ್ದಾರಾ ಎಂಬ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ. ಈ ಇಬ್ಬರು ಆಟಗಾರರು ಬೆಂಗಳೂರಿನ ಎನ್.ಸಿ.ಎ ನಲ್ಲಿ ತಯಾರಿ ನಡೆಸಿದ್ದಾರೆ.
ಇನ್ನು ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ತಿಳಿಸುವಂತೆ, ಧೋನಿ ಈಗ ತಂಡದ ಮೊದಲ ಆಯ್ಕೆಯ ಆಟಗಾರನಾಗಿ ಉಳಿದಿಲ್ಲ. ಅಲ್ಲದೆ ಧೋನಿ ಅವರಿಗೆ ತಮ್ಮ ಸ್ಥಾನದ ಬಗ್ಗೆ ಅವರೇ ವಿಚಾರ ನಡೆಸಬೇಕಿದೆ. ಪ್ರಸಾದ್ ಅವರು ಈ ಮೊದಲೂ ಧೋನಿ ಅವರನ್ನು ಟೀಕಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಮಾಹಿ ಬ್ಯಾಟಿಂಗ್ ಕಂಡು ಎಂ.ಎಸ್.ಕೆ ತಮ್ಮ ಮಾತಿನ ವರಸೆ ಬದಲಾಯಿಸಿದ್ದರು.
ಧೋನಿ ಮೊದಲಿನಂತೆ ಬ್ಯಾಟಿಂಗ್ ಮಾಡುತ್ತಿಲ್ಲ. ಆರು ಇಲ್ಲವೇ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೂ, ತಂಡಕ್ಕೆ ಸಹಾಯವಾಗುತ್ತಿಲ್ಲ. ಧೋನಿ ನಿವೃತ್ತಿಯ ಬಗ್ಗೆ ಅವರೇ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಆಯ್ಕೆ ಸಮಿತಿಯ ಅಭಿಪ್ರಾಯವಾಗಿದೆ.

loading...