ಇನ್ನೂ 20 ವರ್ಷ ಮೋದಿ ಆಡಳಿತ: ಮಹಾಲಿಂಗಪುರದ ಜಗದ್ಗುರು ಭವಿಷ್ಯ

0
174

ಇನ್ನೂ 20 ವರ್ಷ ಮೋದಿ ಆಡಳಿತ: ಮಹಾಲಿಂಗಪುರದ ಜಗದ್ಗುರು ಭವಿಷ್ಯ
ಕನ್ನಡಮ್ಮ ಸುದ್ದಿ
ಪಾಲಬಾವಿ 01: ದೇಶದಲ್ಲಿ ಬದಲಾವಣೆ ಹುಟ್ಟುಹಾಕಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ 20 ವರ್ಷಗಳ ಕಾಲ ಆಡಳಿತ ನಡೆಸಲಿದ್ದಾರೆಂದು ಮಹಾಲಿಂಗಪುರದ ಜಗದ್ಗುರು ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಗ್ರಾಮಕ್ಕೆ ಅನಿರೀಕ್ಷಿತವಾಗಿ ಬೆಟ್ಟಿ ನೀಡಿ ಶ್ರೀ ಸಿದ್ಧಾರೂಢ ಮಠದ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ನಮ್ಮ ದೇಶವನ್ನು ಇನ್ನೂ ಸುದೀರ್ಘವಾಗಿ 20 ವರ್ಷಗಳ ಕಾಲ ದೇಶ ಕಂಡ ಶ್ರೇಷ್ಠ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಿ ಮುಂದುವರೆಯಲಿದ್ದು, ಇದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು. ಗ್ರಾಮದ ಶ್ರೀ ಭರಮಲಿಂಗೇಶ್ವರ ದೇವಸ್ಥಾನದ ಅನುಭಾವ ಮಂಟಪದಲ್ಲಿ ಭಕ್ತರಿಂದ ಪಾದಪೂಜೆ ಸ್ವೀಕರಿಸಿ ಮಾತನಾಡಿದರು. ಶ್ರೀ ಶಿವಾನಂದ ಸ್ವಾಮೀಜಿ ಸನ್ನಿದಾನವಹಿಸಿದ್ದರು.
ಈ ಸಂದರ್ಭದಲ್ಲಿ ಹನುಮಂತ ಕಾಡಶೆಟ್ಟಿ, ಶ್ರೀ ಮುರಗೆಪ್ಪ ಶರಣರು, ಅರ್ಜುನ ತುಪ್ಪದ, ರಮೇಶ ಮರಡಿ, ಯಲ್ಲಪ್ಪ ಮಾನಶೆಟ್ಟಿ, ಈರಪ್ಪ ಹೊನ್ನಳಿ, ಮುತ್ತಪ್ಪ ಮಾದರ, ಶಂಭುಲಿಂಗ ಮಾನಶೆಟ್ಟಿ, ರಾಮಣ್ಣ ಬಳಗಾರ, ಅಡಿವೆಪ್ಪ ಮಾದರ, ಬಾಬುರಾವ್ ಬೆಳೆಶೆ, ಮಲ್ಲಪ್ಪ ತಲ್ಲೂರ, ಲಕ್ಷ್ಮಣ ಬಳಗಾರ, ಶೇಖರ ತೇಗೂರ, ಸುಭಾಷ ಉದಗಟ್ಟಿ, ಭರಮಪ್ಪ ಸತ್ತಿ, ಭರಮಪ್ಪ ಗುಜ್ಜಲ, ಪರಪ್ಪ ಲಂಗೋಟಿ, ಪ್ರಭು ಹಿಡಕಲ್ಲ, ಸಂತೋಷ ಖಾನಗೌಡ, ಶ್ರೀಶೈಲ ಕಬ್ಬೂರ ಗೋಪಾಲ ಬಳಗಾರ, ಉತ್ತಮ ಕರಜಗಿ, ಲೋಕೇಶ ಕುಳಲಿ ಇದ್ದರು.

loading...