ಇಲಾಖೆ ಕಾರ್ಯ ಆರಂಭದ ನಂತರವೇ ಸುವರ್ಣಸೌಧಕ್ಕೆ ಸ್ವಾಮಿಜೀಗಳ ಪ್ರವೇಶ: ಚಂದ್ರಶೇಖರ ಶ್ರೀ

0
11

ಇಲಾಖೆ ಕಾರ್ಯ ಆರಂಭದ ನಂತರವೇ ಸುವರ್ಣಸೌಧಕ್ಕೆ ಸ್ವಾಮಿಜೀಗಳ ಪ್ರವೇಶ: ಚಂದ್ರಶೇಖರ ಶ್ರೀ

ಕನ್ನಡಮ್ಮ ಸುದ್ದಿ- ಬೆಳಗಾವಿ:ಬೆಳಗಾವಿ ಸುವರ್ಣಸೌಧ ದಲ್ಲಿ ಇಲಾಖೆಗಳ ಕಾರ್ಯ ಆರಂಭವಾಗುವವರೆಗೂ ಉ.ಕ.ಸ್ವಾಮಿಗಳು ಸುವರ್ಣಸೌಧ ಪ್ರವೇಶ ಮಾಡಬಾರದೆಂಬ‌ ನಿರ್ಣಯ ತೆಗೆದುಕೊಂಡಿದ್ದೆವೆ ಎಂದು ಹುಕ್ಕೇರಿಮಠದ ಚಂದ್ರಸೇಖರ ಶಿವಾಚಾರ್ಯ ರು ಹೇಳಿದರು.

ಅವರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಕಳೆದ ಒಂದುವರೆ ತಿಂಗಳ ಹಿಂದೆ ಉ.ಕ‌ ಅಭಿವೃದ್ಧಿ ಉದ್ದೇಶದಿಂದ ಮಠಾಧೀಶರೆಲ್ಲರೂ ಕೈಗೊಂಡ ಧರಣಿ ಸತ್ಯಾಗ್ರಹದಿಂದ ಬೆಳಗಾವಿಗೆ ಒಬ್ಬಂತ್ತು ಇಲಾಖೆಗಳನ್ನು ಸ್ಥಳಾಂತರ ಮಾಡಲು ಸಂಪುಟದಲ್ಲಿ ಸಿಎಂ ಅವರು ನಿರ್ಣಯ ತೆಗೆದುಕೊಂಡಿದ್ದಾರೆ.ಅವರು ತೆಗೆದುಕೊಂಡ ನಿರ್ಣಯದಿಂದ ಉ.ಕ‌ ಜನತೆ ಭಾವನೆಗೆ ಸ್ಪಂಧನೆ‌ ನೀಡಿದಂತಾಗಿದೆ. ಆದರೆ ಇಷ್ಟಕ್ಕೆ ಸಾಲದು ಸುವರ್ಣ ಸೌಧದಲ್ಲಿ ಇಲಾಖೆಗಳು ಕಾರ್ಯಾರಂಭ ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ಉ.ಕ ಅಭಿವೃದ್ಧಿ ಗೆ ನಮ್ಮ ಬೇಡಿಕೆಗಳನ್ನು ಇಡೇರಿಸಿದ ನಂತರ ಸಿಎಂ ಕುಮಾರಸ್ವಾಮಿಯವರನ್ನು ಉ.ಕ ಸ್ವಾಮಿಜೀಗಳಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡು ಸನ್ಮಾನಿಸಲಾಗುತ್ತದೆವೆಂದರು.
ಇದೇ ವೇಳೆ ಉತ್ತರ ಕರ್ನಾಟಕ ವೇದಿಕೆಯ ಆಶೋಕ ಪುಜಾರಿ ಮಾತನಾಡಿ, ನಮ್ಮ ಉ.ಕ‌ ಅಭಿವೃದ್ಧಿ ಹೋರಾಟಕ್ಕೆ ಮೊದಲ‌ ಜಯ ಆದರೆ ಆದರೆ ಅವು ಬೇಗ ಇಲಾಖೆ ಉ.ಕ‌ ಸುವರ್ಣ ಸೌಧದಲ್ಲಿ ಕಾರ್ಯ ಆರಂಭವಾಗಬೇಕು.ಅಲ್ಲದೆ ನಮ್ಮ ಪ್ರಮುಖ ಬೇಡಿಕೆಗೆ ಬಗ್ಗೆ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲು ಇದೇ ತಿಂಗಳು 17ರೊಳಗೆ ಅವಕಾಶ ಕೊಡಬೇಕು.ಸಿಎಂ ಈ ನಿರ್ದಾರವನ್ನು ಸ್ವಾಗತಾರ್ಹ.

ಈ ಸಂದರ್ಭ ಗುರುಸಿದ್ದ ಸ್ವಾಮಿಗಳು ಕಾರಂಜಿಮಠ, ಅಶೋಕ ಪುಜಾರಿ,ಕಲ್ಯಾಣರಾವ ಮುಚಳಂಬಿ,ಆರ್.ಎಸ್‌ ದರ್ಗೆ,ಎಂ ಪಿ ಪಾಟೀಲ ಸೇರಿದಂತೆ ಇತರರು ಇದ್ದರು.

loading...