ಉಗಾರ ಸಕ್ಕರೆ ಕಾರ್ಖಾನೆ ತ್ಯಾಜ್ಯದಿಂದ ತಲೆದೋರಿದ ನೀರಿನ ಸಮಸ್ಯೆ

0
43

ಕನ್ನಡಮ್ಮ ಸುದ್ದಿ- ಕಾಗವಾಡ: ಮೇ ತಿಂಗಳಿನ ಉರಿಬಿಸಿಲಿನ ತಾಪ ಎಲ್ಲಡೆ ಹೆಚ್ಚಿಸಿದೆ. ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ನದಿಯಲ್ಲಿಯ ನೀರು ಗಬ್ಬೇದ್ದು ವಾಸನೆ ಬರುತ್ತಿದ್ದೇ. ಇಷ್ಟರಲ್ಲಿ ತಾವು ತೋಡಿದ ಕೊಳವೆ ಬಾವಿಯಿಂದ ನೀರು ತೆಗೆದುಕೊಳ್ಳಬೇಕಾದರೆ ಕೊಳವೆ ಬಾವಿಯಲ್ಲಿ ಉಗಾರ ಸಕ್ಕರೆ ಕಾರ್ಖಾನೆಯ ಮಳ್ಳಿ ಮಿಶ್ರಿತ ಕಪ್ಪು ಬಣ್ಣಿನ ಗಬ್ಬೆದ್ದ ವಾಸನೆಬರುವ ನೀರು ಉಗಾರ ಖುರ್ದದ ನಾಗರಿಕರು ಕಾಣುತಿದ್ದು, ಈ ಪಟ್ಟಣದಲ್ಲಿ ನೀರಿನ ಸಮಸ್ಯೆ ತೆಲೆಯೆತ್ತಿದೆ. ಉಗಾರ ಖುರ್ದ ಪಟ್ಟಣದ ರಹವಾಸಿಗಳಾದ ನಾಮದೇವ ಸದಾಶಿವ ರಾಯಮಾನೆ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಬಂದಿರುವ ಕಹಿ ಅನುಭವ.

ಉಗಾರ ಸಕ್ಕರೆ ಕಾರ್ಖಾನೆಯಿಂದ ಮಳ್ಳಿ ಮಿಶ್ರಿತ ನೀರು ಭೂಮಿಯಲ್ಲಿ ಇಂಗಿದೆ. ಮಳೆಗಾಲದಲ್ಲಿ ಹೊಸ ನೀರು ಬಂದಾಗ ಅಲ್ಪ-ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾದರು ಈಗ ಬೇಸಿಗೆಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಇಷ್ಟರಲ್ಲಿ ಕಳೆದವಾರ ಸ್ಪಲ್ಪ ಮೆಳೆಯಾಗಿದೆ. ಕಾರ್ಖಾನೆಯಿಂದ ಹರೆದು ಬಂದ ಮಳ್ಳಿ ನೀರು ಕೊಳವೆಬಾವಿಗಳಿಗೆ ಇಂಗಿದ್ದು, ಈಗ ನೇರವಾಗಿ ಕಪ್ಪು ಮಳ್ಳಿ ನೀರು ಕೊಳವೆ ಬಾವಿ ಪಂಪಸೆಟ್ಟ ಮುಖಾಂತರ ಬರುತ್ತಿದೆ. ಈ ಗ್ರಾಮದಲ್ಲಿ ಅನೇಕ ಕೊಳವೆ ಬಾವಿಗಳಿಗೆ ಕಲುಷಿತ ನೀರು ಬರುತ್ತಿದ್ದರಿಂದ ಇತ್ತ ನದಿಯ ನೀರು ಗಬ್ಬೆದ್ದು ನಾರುತ್ತಿದ್ದು, ಈಗ ಕೊಳವೆಬಾವಿ ನೀರು ಕೂಡಾ ಅದೆ ಸ್ಥೀತಿಯಲ್ಲಿದೆ. ನಾವು ಕುಡಿಯಲು ಯಾವ ನೀರು ಬಳಿಸೋಣ ಎಂದು ಇಲ್ಲಿಯ ಜನರು ಪ್ರಶ್ನಿಸುತ್ತಿದ್ದಾರೆ.
ಅಧಿಕಾರಿಗಳ ಹಾರಿಕೆ ಉತ್ತರಃ-ಉಗಾರ ಖುರ್ದ ಪೂರಸಭೆಯ ಅಧಿಕಾರಿಗಳಾದ ಕಮಲವ್ವಾ ಬಾಗೊಜಿ ಇವರನ್ನು ಶಿಕ್ಷಕರಾದ ನಾಮದೇವ ಸದಾಶಿವ ರಾಯಮಾನೆ ಇವರು ನೀರಿನ ಸಮಸ್ಯೆ ಮುಂದಿಟ್ಟು ವಿಚಾರಿಸಿದಾಗ ನಮ್ಮನ್ನು ಏನು ಕೇಳುತ್ತಿರಿ ಸಕ್ಕರೆ ಕಾರ್ಖಾನೆಯತ್ತ ಹೋಗಿರಿ ಎಂದು ಹಾರಿಕೆ ಉತ್ತರ ಹೇಳಿದ್ದರಿಂದ ನಾವು ಯಾರಿಗೆ ನ್ಯಾಯ ಕೇಳಬೇಕೆಂದು ಶಿಕ್ಷಕರು ವಿಚಾರಿಸಿದರು.

loading...