ಉಚಿತ ಮಧುಮೇಹ ತಪಾಸಣಾ ಶಿಬಿರ

0
21

ಅಥಣಿ 18- ರೋಟರಿ ಕ್ಲಬ್ ಅಥಣಿ ಇವರ ವತಿಯಿಂದ ಹಮ್ಮಿಕೊಳ್ಳಲಾದ ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಮಾಜಿ ಸೈನಿಕರಿಗಾಗಿ ಸ್ಥಳೀಯ ಮಿಲಿಟರಿ ಬಾಯ್ಸ್ ವಸತಿ ನಿಲಯದ ಆವರಣದಲ್ಲಿ ನಡೆಸಲಾಯಿತು.

ತಪಾಸಣಾ ಶಿಬಿರದಲ್ಲಿ 150 ಮಾಜಿ ಸೈನಿಕರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಸ್ವಾಗತ ಪರ ಭಾಷಣದಲ್ಲಿ ರೋಟರಿ ಅಧ್ಯಕ್ಷರಾದಡಾ. ಮಿರಜಕರ ಮಾತನಾಡಿ ಮಧುಮೇಹ ಕಾಡ್ಗಿಚ್ಚಿನಂತೆ ಜಗತ್ತಿನಾದ್ಯಂತ ಹಬ್ಬುತ್ತಲೇ ಇದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖದಯ ಅತಿಥಿಗಳಾದ ರೋ.  ಡಾ. ಪಾಂಗಿಯವರು ನೆರೆದ ಸಭಿಕರಿಗೆ ಮಧುಮೇಹದ ಬಗ್ಗೆ ತಿಳಿವು ನೀಡಿದರು. ಇದೇ ಸಭೆಯಲ್ಲಿ  ಯಾವದೇ ಮಾಜಿ    ಸೈನಿಕರಿಗೆ ಮಧುಮೇಹ ಕಂಡು ಬಂದಲ್ಲಿ ಅವರಿಗೆ ತಮ್ಮ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಸೌಲಭ್ಯವನ್ನು  ಒದಗಿಸಿ ಕೊಡಲಾಗುವದೆಂದು ಘೋಷಿಸಿ ದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ರೋ. ಹತ್ತಿ, ಹಾಗೂ ಮಾಜೀ ಅಧ್ಯಕ್ಷರಾದ ರೋ. ಬಾಳಪ್ಪಾ ಬುಕಿಟಗಾರ, ವಿಜಯ ಬುರ್ಲಿ, ಶಶಿಕಾಂತ ಹುಲಕುಂದ, ಡಾ. ಚಿಮ್ಮಡ, ಪ್ರಕಾಶ ಪಾಟೀಲ, ಅನೀಲ ದೇಶಪಾಂಡೆ, ಸಚಿನ ದೇಸಾಯಿ, ರೋ. ಬಾಹುಬಲಿ ಅಸ್ಕಿ,  ಇನ್ನರವೀಲ್ ಅಧ್ಯಕ್ಷಣಿ ಆನ್ ಸುಮೇಧಾ ಮಿರಜ ಕಾರ್ಯದರ್ಶಿ ಆನ್ ಪ್ರಿಯಾ ಚಿಮ್ಮಡ ಪಾಲ್ಗೊಂಡಿದ್ದರು.

ಮಾಜಿ ಸೈನಿಕ ಸುಬೇದಾರ್, ಜಿ.ಡಿ. ಪವಾರ್ ವಂದಿಸಿ ದರು. ಮಾಜಿ ಸೈನಿಕ ಸುಬೇದಾರ ಮಾಂಜರಿ, ಶಂಕರ ಢವಳೇಶ್ವರ ಕಾರ್ಯಕ್ರಮ ನಡೆಸಿ ಕೊಡುವಲ್ಲಿ ಸಹಾಯ ಹಸ್ತವನ್ನು ನೀಡಿದರು.

 

loading...

LEAVE A REPLY

Please enter your comment!
Please enter your name here