ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ವಿತರಣೆ

0
24

ಬಸವನಬಾಗೇವಾಡಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಡವರ ಏಳಿಗೆಗಾಗಿ ಈಗಾಗಲೇ ಹತ್ತು ಹಲವಾರು ಯೋಜನೆಗಳನ್ನು ಹೊರತಂದು ಬಡಕುಟುಂಬದ ಮಹಿಳೆಯರಿಗಾಗಿ ಉಪಯುಕ್ತವಾಗಲಿ, ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಮಹತ್ವರ ಪಾತ್ರವಹಿಸಲಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಜೈಸಿಂಗ್ ನಾಯಕ ಹೇಳಿದರು.
ತಾಲೂಕಿನ ಮಣ್ಣೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಉಪ್ಪಲದಿನ್ನಿ ತಾಂಡಾದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ೧೨೭ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್‌ಗಳನ್ನು ವಿತರಿಸಿ ಮಾತನಾಡಿದ ಅವರು ಈ ಯೋಜನೆ ೨೦೧೯ರ ವೇಳೆಗೆ ಸು. ೫ಕೋಟಿ ಬಡ ಕುಟುಂಬಗಳಿಗೆ ಇದರ ಲಾಭ ಸಿಗಲಿದ್ದು, ಈ ಯೋಜನೆಯಿಂದ ಹೊಗೆ ಮುಕ್ತವಾಗಲಿದೆ ಎಂದು ಹೇಳಿದರು.

ಈ ಯೋಜನೆ ಬಡತನ ರೇಖೆಗಿಂತ ಕೆಳಗಿರುವರನ್ನು ಗಮನದಲ್ಲಿರಿಸಿಕೊಂಡು ಈ ಯೋಜನೆ ಅನುಷ್ಠಾನಗೊಳ್ಳಸಿದ್ದು, ಮಹಿಳೆಯರ ಆರೋಗ್ಯ ಸುಧಾರಣೆಯಲ್ಲಿ ಮಹತ್ವರ ಪಾತ್ರ ನಿರ್ವಹಿಸಲಿದ್ದು, ಮಹಿಳೆಯರು ಅಡುಗೆ ಮಾಡಲು ತಗೆದುಕೊಳ್ಳುವ ಸಮಯ ಕಡಿತವಾಗಲಿದ್ದು, ಪರಿಸರದಲ್ಲಿ ಮಾಲಿನ್ಯ ನಿಯಂತ್ರಣವಾಗಲಿರುವ ಯೋಜನೆ ಇದಾಗಿದೆ ಎಂದು ಹೇಳಿದರು.
ಕರ‍್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಮಹೇಶ ಮುಳವಾಡ ಎಸ್‌ಬಿಐ ಬ್ಯಾಂಕ್ ಅಡವ್ಹೆÃಜರ್ ವಿರೇಶ ಕುಂಟೋಜಿ ಮಾತನಾಡಿದರು. ತಾಪಂ ಸದಸ್ಯ ಪುನೀತ ಲಮಾಣಿ, ಗ್ರಾಪಂ ಸದಸ್ಯ ಧರ್ಮು ಲಮಾಣಿ, ರವಿ ಲಮಾಣಿ, ಗೋಲ್ಲಾಳೇಶ್ವರ ಗ್ಯಾಸ್ ಏಜ್‌ನ್ಸಿ ಮಾಲಿಕ ಶಾಂತು ಡಂಬಳ, ಪಿಡಿಒ ಎಂ.ಬಿ. ಹಾವರಗಿ ಸೇರಿದಂತೆ ಇತರರು ಇದ್ದರು.

loading...