ಉತ್ತಮ ಆಡಳಿತ ಎಲ್ಲ ನಾಗರಿಕರಿಗೂ ತಲಪಲಿ: ಪ್ರಧಾನಿ ಮೋದಿ

0
28

ನವದೆಹಲಿ: ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಅಂಶಗಳು ಎಲ್ಲರಿಗೂ ತಲುಪಬೇಕು. ಇದು ನವ ಭಾರತದ ಅಡಿಪಾಯವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಹೇಳಿದ್ದಾರೆ.
46ನೇ ಆವೃತ್ತಿಯ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಅವರು, ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರು ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು ಎಂಬ ಘೋಷಣೆಯನ್ನು ಕೂಗಿದ್ದರು. ಜನರಲ್ಲಿ ಆತ್ಮವಿಶ್ವಾಸದ ಬೆಂಕಿ ಹೊತ್ತಿಸಿದ್ದರು. ಇಂದು ಸೂರಜ್ ನನ್ನ ಜನ್ಮ ಸಿದ್ಧ ಹಕ್ಕು ಎಂದು ಒತ್ತಿ ಹೇಳಬೇಕಿದೆ. ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಲಾಭಗಳು ಎಲ್ಲರಿಗೂ ತಲುಪಬೇಕು. ಇದು ನವಭಾರತಕ್ಕೆ ಅಡಿಪಾಯವಾಗಲಿದೆ ಎಂದು ಹೇಳಿದ್ದಾರೆ.
ಮಳೆಯಿಂದಾಗಿ ಥೈಲ್ಯಾಂಡ್ ಗುಹೆಯಲ್ಲಿ 12 ಬಾಲಕರು ಸಿಲುಕಿಕೊಂಡಿದ್ದರು. ಘಟನೆ ವೇಳೆ ಜನರು ತೋರಿದ ಜವಾಬ್ದಾರಿ ಅತ್ಯುತ್ತವಾಗಿತ್ತು. ಈ ಕಾರ್ಯಾಚರಣೆ ತಾಳ್ಮೆ, ಶೂರತೆ ಬಗ್ಗೆ ಸಾಕಷ್ಟು ಪಾಠ ಕಲಿಯುವಂತೆ ಮಾಡಿತ್ತು ಎಂದು ಹೇಳಿದ್ದಾರೆ.
ಹಿಂದಿಯ ಹೆಸರಾಂತ ಗೀತಕಾರ ಗೋಪಾಲ್ ದಾಸ್ ಅವರು ವಿಧಿವಶರಾಗಿರುವ ಹಿನ್ನಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಪ್ರಸಕ್ತ ಸಾಲಿನ ಜುಲೈ ತಿಂಗಳು ರೈತರು ಹಾಗೂ ವಿದ್ಯಾರ್ಥಿಗಳಿಗೆ ಅತ್ಯಂತ ಕಠಿಣ ಸಮಯವಾಗಿದೆ. ಹೊಸ ಕಾಲೇಜು ಮತ್ತು ಶಾಲೆಗಳಿಗೆ ಮಕ್ಕಳು ದಾಖಲಾಗಬೇಕಾಗುತ್ತದೆ. ಕೆಲ ವಿದ್ಯಾರ್ಥಿಗಳು ಮನೆಯಿಂದ ಹೊರಬಂದು ಕಾಲೇಜುಗಳಿಗೆ ಸೇರ್ಪಡೆಗೊಳ್ಳಬೇಕಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ತಾಳ್ಮೆಯಿಂದ ಇರಬೇಕಿದ್ದು, ಜೀವನದ ಸಂತೋಷವನ್ನು ಆಹ್ಲಾದಿಸಬೇಕು ಎಂದಿದ್ದಾರೆ.
ಗಣೇಶ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ದೇಶದ ಜನತೆಗೆ ಸಂದೇಶ ನೀಡಿರುವ ಅವರು, ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಕರೆ ನೀಡಿದ್ದಾರೆ.

loading...