ಉತ್ತರ ಕರ್ನಾಟದ 50 ಕ್ಷೇತ್ರದಲ್ಲಿ ಜೆಡಿಎಸ್‌ ಗೆಲವು: ಗುರುರಾಜ

0
35

ಚನ್ನಮ್ಮಕಿತ್ತೂರು: ಉತ್ತರ ಕರ್ನಾಟಕದ 94 ಕ್ಷೇತ್ರಗಳ ಪೈಕಿ ಸುಮಾರು 50 ಕ್ಷೇತ್ರಗಳು ಜೆಡಿಎಸ್‌ನ ಪಾಲಾಗಲಿದೆ ಎಂದು ರಾಜ್ಯ ಜೆಡಿಎಸ್‌ ಉಪಾಧ್ಯಕ್ಷ ಗುರುರಾಜ ಹುಣಶೀಮರದ ವಿಶ್ವಾಸ ವ್ಯಕ್ತಪಡಿಸಿದರು. ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲ ಪಡಿಸುವ ಉದ್ದೇಶದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಮನಗರದ ಜೊತೆಗೆ ಉತ್ತರ ಕರ್ನಾಟಕದ ಯಾವುದಾದರೊಂದು ಕ್ಷೇತ್ರದಿಂದ ಚುನಾವಣೆಗೆ ಧುಮುಕಲಿದ್ದಾರೆ. ಯಾವ ಕ್ಷೇತ್ರ ಎಂಬುದು ಇನ್ನೂ ನಿರ್ಧಾರ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಚುನಾವಣೆಯ 2 ತಿಂಗಳು ಮುಂಚೆಯೇ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು. ಜೆಡಿಎಸ್‌ ಮುಖಂಡ ಮಾಜಿ ಜಿಪಂ ಸದಸ್ಯ ಶಿವನಸಿಂಗ್‌ ಮೊಕಾಶಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ರಾಜ್ಯ ಉಪಾಧ್ಯಕ್ಷ ಹುಣಶೀಮರದ ಅವರು ಕಿತ್ತೂರಿನಿಂದ ಪ್ರವಾಸ ಆರಂಭಿಸಿದ್ದು ಸಂತಸ ತಂದಿದೆ. ಪಕ್ಷವನ್ನು ಬೇರುಮಟ್ಟದಿಂದ ಬಲಪಡಿಸುವ ಜವಾಬ್ದಾರಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮೇಲಿದ್ದು ಮುಂದಿನ ದಿನಗಳಲ್ಲಿ ಕಿತ್ತೂರಿನಲ್ಲಿ ಜೆಡಿಎಸ್‌ ಬಾವುಟ ಹಾರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬ್ಲಾಕ್‌ ಅಧ್ಯಕ್ಷ ಸಿದ್ರಾಮಗೌಡ ಪಾಟೀಲ, ಕಾರ್ಯಧ್ಯಕ್ಷ ಭಿಷ್ಟಪ್ಪ ಸಿಂಧೆ, ಅಶೋಕ ಹಲಕಿ, ಶಂಕರ ಲೋಕುರ, ಮಲೀಕ ಈರಾಣಿ, ಈರಣ್ಣ ಹುಬ್ಬಳ್ಳಿ, ಶಂಕರ ಕಮತಗಿ, ನಿಂಗಪ್ಪ ಹಣಜಿ, ಬಸವರಾಜ ಘಡೆನ್ನವರ, ಮಹಿಳಾ ಅಧ್ಯಕ್ಷೆ ಉಮಾ ಪಾಟೀಲ, ಬಸವರಾಜ ಅವರಾದಿ, ಬಸವರಾಜ ಹುಲಮನಿ ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಇದ್ದರು.

loading...